ಐಸಿಐಸಿಐ - ಕೋಟಕ್ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್

Kotak Bank, ICICI to offer banking on WhatsApp
Highlights

ಕೋಟಕ್ ಹಾಗೂ ಐಸಿಐಸಿಐ ಬ್ಯಾಂಕ್  ಗ್ರಾಹಕರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್ . ಇನ್ನು ಮುಂದೆ ಬ್ಯಾಂಕ್ ವ್ಯವಹಾರಗಳನ್ನು ಗ್ರಾಹಕರು ವಾಟ್ಸಾಪ್ ಮೂಲಕವೇ ನಡೆಸಬಹುದಾಗಿದೆ. 

ಬೆಂಗಳೂರು :  ಕೋಟಕ್ ಹಾಗೂ ಐಸಿಐಸಿಐ ಬ್ಯಾಂಕ್  ಗ್ರಾಹಕರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್ . ಇನ್ನು ಮುಂದೆ ಈ ಬ್ಯಾಂಕ್ ಗ್ರಾಹಕರು ತಮ್ಮ ವ್ಯಹಹಾರದ ಬಗ್ಗೆ ಮಾಹಿತಿಯನ್ನು ವಾಟ್ಸಾಪ್ ಮೂಲಕ ಪಡೆದುಕೊಳ್ಳಬಹುದು. 

ತನ್ನ ಗ್ರಾಹಕರಿಗೆ ಈ ಬ್ಯಾಂಕ್‌ಗಳು ಒಂದು ಅಧಿಕೃತ ವಾಟ್ಸಾಪ್ ನಂಬರ್ ನ್ನು ಗ್ರಾಹಕರಿಗೆ ನೀಡುತ್ತವೆ. ಈ ಸಂಖ್ಯೆಯಿಂದ ಬ್ಯಾಂಕ್ ನೊಂದಿಗೆ ಸಂವಹನ ನಡೆಸಬಹುದು. ಸೇವೆಗಳ ಬಗ್ಗೆ, ಪ್ಯಾನ್ ಹಾಗೂ ಮೊಬೈಲ್ ನಂಬರ್ ಅಪ್ ಡೇಟ್ ಮಾಡುವ ಬಗ್ಗೆ, ಯಾವುದೇ ರೀತಿಯ ಕಾರ್ಯ ಚಟುವಟಿಕೆಗಳು, ಪಾಸ್ ಬುಕ್ ಅಪ್‌ಡೇಟ್, ಬದಲಾವಣೆ, ಬ್ರಾಂಚ್ ಸಂಬಂಧಿತ  ಬದ ಲಾವಣೆಗಳು ಯಾವುದೇ ಮಾಹಿತಿಯನ್ನೂ ಕೂಡ ವಾಟ್ಸಾಪ್ ಮೂಲಕ ಪಡೆಯಲು  ಅವಕಾಶ ಒದಗಲಿದೆ. 

ಇನ್ನು ಈ ಬಗ್ಗೆ ಮಾತನಾಡಿದ ಕೋಟಕ್ ಬ್ಯಾಂಕ್ ಡಿಜಿಟಲ್ ಆಫಿಸರ್ ದೀಪಕ್ ಶರ್ಮಾ  ಈ ರೀತಿಯ ಸೇವೆಯಿಂದ ಬ್ಯಾಂಕ್ ಗ್ರಾಹಕರು ಸುಲಭವಾಗಿ ಬ್ಯಾಂಕ್ ವ್ಯವಹಾರ ನಡೆಸಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಶೀಘ್ರದಲ್ಲೇ ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ. ಆದರೆ ಎಂದಿನಿಂದ ಈ ನೂತನ ಸೇವೆ ಆರಂಭವಾಗಲಿದೆ ಎನ್ನುವ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಹೊರಬಿದ್ದಿಲ್ಲ. 

loader