ನವದೆಹಲಿ (ಫೆ.19): ಪ್ರಚೋದನಾಕಾರಿ ಟ್ವೀಟ್‌ ಅಳಿಸಿಹಾಕುವ ಸಂಬಂಧ ಭಾರತ ಸರ್ಕಾರ ಮತ್ತು ಅಮೆರಿಕ ಮೂಲದ ಟ್ವೀಟರ್‌ ನಡುವೆ ಮುಸುಕಿನ ಯುದ್ಧ ಆರಂಭವಾದ ಬೆನ್ನಲ್ಲೇ, ಟ್ವೀಟರ್‌ಗೆ ಪರಾರ‍ಯಯ ಎನಿಸಿಕೊಂಡಿರುವ ಬೆಂಗಳೂರು ಮೂಲದ ‘ಕೂ’ ಆ್ಯಪಿನ ಚಂದಾದಾರರ ಸಂಖ್ಯೆ 42 ಲಕ್ಷಕ್ಕೆ ಏರಿಕೆಯಾಗಿದೆ. 

ಟ್ವೀಟರ್‌ ಮೇಲೆ ಕೇಂದ್ರದ ‘ಕೂ’ ವಾರ್‌!

ಕಳೆದ ಒಂದು ವಾರದಲ್ಲಿ ಬರೋಬ್ಬರಿ 10 ಲಕ್ಷ ಜನರು ಹೊಸದಾಗಿ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿದ್ದಾರೆ. 

ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಸಹ ಕೂ ಆ್ಯಪ್‌ನಲ್ಲಿ ಅಕೌಂಟ್ ಹೊಂದಿದ್ದು, ಫಾಲೋ ಮಾಡಲು ಇಲ್ಲಿ ಕ್ಕಿಕಿಸಿ ಅಂತ ಈ ಕೆಳಗಿನ ಲಿಂಕ್ ಎಂಬೆಡ್ ಮಾಡಿ

ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಸೇರಿದಂತೆ ಹಲವು ಕೇಂದ್ರ ಸಚಿವರೂ ಈ ಆ್ಯಪನ್ನು ಬಳಕೆ ಮಾಡುತ್ತಿದ್ದಾರೆ. ಭಾರತದಲ್ಲಿ 1.75 ಕೋಟಿ ಜನರು ಟ್ವೀಟರ್‌ ಬಳಕೆ ಮಾಡುತ್ತಿದ್ದಾರೆ.