ಮಾರುಕಟ್ಟೆಗೆ ಲಗ್ಗೆ ಇಡಲಿದೆ ಕರ್ನಾಟಕದ ಎಲೆಕ್ಟ್ರಿಕಲ್ ಬೈಕ್

Karnataka startup builds electric motorcycle with top speed of 250kmph, 500km range
Highlights

ಕರ್ನಾಟಕ ಹುಬ್ಬಳ್ಳಿಯಿಂದ ನೂತನ ಎಲೆಕ್ಟ್ರಿಕಲ್ ಬೈಕ್ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ವಿಶೇಷ ಅಂದರೆ ಈ ಬೈಕ್ ಒಮ್ಮೆ ಚಾರ್ಜ್ ಮಾಡಿದರೆ 500 ಕೀಮಿ ಪ್ರಯಾಣಿಸಬಹುದಾಗಿದೆ. ಈ ಬೈಕ್‌ನ ವಿಶೇಷತೆ ವಿವರ ಇಲ್ಲಿದೆ.
 

ಬೆಂಗಳೂರು(ಜೂನ್.11): ಭಾರತದ ಬೈಕ್ ಮಾರುಕಟ್ಟೆಯಲ್ಲಿ  ವಿದೇಶಿ ಬೈಕ್‌ಗಳದ್ದೇ ಕಾರುಬಾರು. ಇದೀಗ ಈ ಎಲ್ಲಾ ಬೈಕ್‌ಗಳಿಗೆ ಸೆಡ್ಡುಹೊಡೆಯಲು ಕರ್ನಾಟಕದಿಂದ ನೂತನ ಬೈಕ್ ತಯಾರಾಗುತ್ತಿದೆ. ಅಚ್ಚರಿ ಪಡಬೇಕಿಲ್ಲ. ಕರ್ನಾಟಕದ ಹುಬ್ಬಳ್ಳಿಯಲ್ಲಿರೋ ಮಾನ್‌ಕಾಮೆ ಅಟೋಮೇಟಿವ್ ಬೈಕ್ ತಯಾರಿಕಾ ಸಂಸ್ಥೆ ಎಲೆಕ್ಟ್ರಿಕಲ್ ಬೈಕ್ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಮಾನ್‌ಕಾಮೆ ಅಟೋಮೇಟಿವ್ ಸಂಸ್ಥೆ ತಯಾರಿಸುತ್ತಿರುವ ಎಲೆಕ್ಟ್ರಿಕಲ್ ಬೈಕ್ ಸಂಪೂರ್ಣವಾಗಿ ಹುಬ್ಬಳ್ಳಿಯ್ಲಲೇ ತಯಾರಾಗಲಿದೆ. ವಿಶೇಷ ಅಂದರೆ ಸದ್ಯ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕಲ್ ಬೈಕ್‌ಗಳು ಫುಲ್ ಚಾರ್ಜ್ ಮಾಡಿದರೆ 240 ಕೀಮಿ ಪ್ರಯಾಣ ಮಾಡಬಹುದು. ಆದರೆ ಮಾನ್‌ಕಾಮೆ 500 ಕೀಮಿ ಪ್ರಯಾಣಿಸಬಹುದಾಗಿದೆ. 

8000 ಆರ್‌ಪಿಎಮ್,54 ಬಿಹೆಚ್‌ಪಿ ಪವರ್ ಹೊಂದಿರೋ ಈ ಬೈಕ್, ವಿನ್ಯಾಸದಲ್ಲೂ ಅತ್ಯುತ್ತಮವಾಗಿದೆ. ಇಡೀ ಬೈಕ್ ತೂಕ 180 ಕೆಜಿ.  ಜೊತೆಗೆ ಎಬಿಎಸ್ ಬ್ರೇಕ್ ಸಿಸ್ಟಮ್ ಕೂಡ ಈ ಬೈಕ್‌ನಲ್ಲಿದೆ. ಹೀಗಾಗಿ ಪ್ರತಿ ಗಂಟೆಗೆ 250 ಕೀಮಿ ವೇಗದಲ್ಲಿ ರೈಡ್ ಮಾಡಬಹುದಾಗಿದೆ. ಅತ್ಯುತ್ತಮ ಬ್ಯಾಟರಿಯಿಂದ ನಮ್ಮ ಹುಬ್ಬಳ್ಳಿ ಬೈಕ್ ವಿಶ್ವ ಬೈಕ್ ಪ್ರೀಯರನ್ನ ಸೆಳೆಯೋದರಲ್ಲಿ ಅನುಮಾನವಿಲ್ಲ.

ಮುಂದಿನ ತಿಂಗಳಿನಿಂದ ಕಂಪೆನಿ ಸಾರ್ವಜನಿಕ ಬಂಡವಾಳ ಕ್ರೋಡಿಕರಣಕ್ಕೆ ಮುಂದಾಗಿದೆ. ಹೀಗಾಗಿ ಬೈಕ್ 2022ರ ವೇಳೆಗೆ ಮಾರುಕಟ್ಟೆ ಪ್ರವೇಶಿಸಲಿದೆ. ಸದ್ಯ ಇದರ ಬೆಲೆ ಕುರಿತು ಕಂಪೆನಿ ಯಾವುದೇ ಮಾಹಿತಿ ಬಹಿರಂಗ ಪಡಿಸಿಲಲ್ಲ.


 

loader