ನಿಯಮಗಳ ಪ್ರಕಾರ ಈ ಕೊಡುಗೆಯನ್ನು ಮುಂದುವರೆಸಲು ಸಾಧ್ಯವಿಲ್ಲದಿರುವ ಕಾರಣ ಹೊಸದೊಂದು ಆಫರ್ ನೀಡಲು ಜಿಯೋ ಮುಂದಾಗಿದೆ.

ಮುಂಬೈ(ನ.22): ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಅಧಿಪತ್ಯವನ್ನು ಸ್ಥಾಪಿಸಲು ಮುಂದಾಗಿರುವ ರಿಲಯನ್ಸ್ ಹೊಸದಾಗಿ ಮಾರುಕಟ್ಟೆಗೆ ಪರಿಚಯಿಸಿದ ಜಿಯೋ ವನ್ನು ದೇಶದ ಮೂಲೆ ಮೂಲೆಗೆ ಪರಿಚಯಿಸುವ ಸುಲುವಾಗಿ ವೆಲ್ ಕಮ್ ಆಫರ್ ಹೆಸರಲ್ಲಿ ಉಚಿತ ಸೇವೆಗಳನ್ನು ಗ್ರಾಹಕರಿಗೆ ನೀಡಿತು. 

ಈಗ ಮತ್ತೊಮ್ಮೆ ಜನರನ್ನು ತನ್ನತ ಸೆಳೆಯಲು ಹೊಸದೊಂದು ಆಫರ್ ನೀಡಲು ಮುಂದಾಗಿದೆ. ಸದ್ಯ ವೆಲ್ ಕಮ್ ಅಫರ್ ಹೆಸರಿನಲ್ಲಿ ಮೂರು ತಿಂಗಳು 4ಜಿ ಡೇಟಾ ಮತ್ತು ಉಚಿತ ಕರೆಗಳನ್ನು ನೀಡಿತ್ತು. ಸದ್ಯ ಈ ಕೊಡುಗೆ ಡಿ.31ಕ್ಕೆ ಕೊನೆಯಾಗಲಿದ್ದು, ನಿಯಮಗಳ ಪ್ರಕಾರ ಈ ಕೊಡುಗೆಯನ್ನು ಮುಂದುವರೆಸಲು ಸಾಧ್ಯವಿಲ್ಲದಿರುವ ಕಾರಣ ಹೊಸದೊಂದು ಆಫರ್ ನೀಡಲು ಜಿಯೋ ಸಿದ್ಧತೆ ನಡೆಸಿದೆ.

ವೆಲ್ ಕಮ್ ಆಫರ್ 2 ಹೆಸರಿನಲ್ಲಿ ಮತ್ತೆ ಮೂರು ತಿಂಗಳ ಕಾಲ ಅಂದರೆ ಮಾರ್ಚ್ ಅಂತ್ಯದವರೆಗೂ ಉಚಿತ ಕರೆಗಳು ಉಚಿತ ಡೇಟಾ ಸೇವೆಯನ್ನು ನೀಡಲಿದೆ. ಇದರ ಮೂಲಕ ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯುವ ಕ್ರಮಕ್ಕೆ ಮುಂದಾಗಿದೆ. ಆದರೆ ಈ ಹೊಸ ಆಫರ್ ಹಳೇ ಗ್ರಾಹಕರಿಗೆ ಲಭ್ಯವಿಲ್ಲ. ಹೊಸ ಗ್ರಾಹಕರಿಗೆ ಮಾತ್ರ ವೆಲ್ ಕಮ್ ಆಫರ್ 2 ಆಫರ್ ದೊರೆಯಲಿದೆ.