ಆದರೆ ಈ ಆಫರ್ ಇತರೆ ಟೆಲಿಕಾಂ ಕಂಪನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಿನ್ನಲೆಯಲ್ಲಿ ಜಿಯೋ ವೆಲ್ ಕಮ್ ಆಫರ್ ಡಿ.03 ಕ್ಕೆ ಕೊನೆಯಾಗಲಿದೆ ಎನ್ನುವ ಸುದ್ದಿಯನ್ನು ಹಬ್ಬಿಸಲಾಗಿತ್ತು. ಆದರೆ ಇದು ಸುಳ್ಳು ಡಿ.31ರ ವರೆಗೂ ಜಿಯೋ ಉಚಿತ ಸೇವೆಗಳು ಲಭ್ಯವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು. 

ಮುಂಬೈ(ನ.04): ಡಿಜಿಟಲ್ ಇಂಡಿಯಾ ಯೋಜನೆಯ ಸಹಕಾರಕ್ಕೆ ಹೊಸದೊಂದು ಅಧ್ಯಾಯವನ್ನು ಶುರು ಮಾಡಿದ ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಪ್ರಾರಂಭಿಕ ಯೋಜನೆಯಾಗಿ ಗ್ರಾಹಕರಿಗೆ ಮೂರು ತಿಂಗಳ ಕಾಲ ಉಚಿತ 4ಜಿ ಇಂಟರ್ ನೆಟ್, ಉಚಿತ ಕರೆಗಳನ್ನು ಮಾಡುವ ಅವಕಾಶವನ್ನು ನೀಡಿತ್ತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಈ ಆಫರ್ ಇತರೆ ಟೆಲಿಕಾಂ ಕಂಪನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಿನ್ನಲೆಯಲ್ಲಿ ಜಿಯೋ ವೆಲ್ ಕಮ್ ಆಫರ್ ಡಿ.03 ಕ್ಕೆ ಕೊನೆಯಾಗಲಿದೆ ಎನ್ನುವ ಸುದ್ದಿಯನ್ನು ಹಬ್ಬಿಸಲಾಗಿತ್ತು. ಆದರೆ ಇದು ಸುಳ್ಳು ಡಿ.31ರ ವರೆಗೂ ಜಿಯೋ ಉಚಿತ ಸೇವೆಗಳು ಲಭ್ಯವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು. 

ಆದರೆ ಸದ್ಯ ಮತ್ತೊಂದು ಶಾಕಿಂಗ್ ನ್ಯೂಸ್ ಲಭ್ಯವಾಗಿದ್ದು, ಜಿಯೋ ವೆಲ್ ಕಮ್ ಆಫರ್ 2017ರ ಮಾರ್ಚ್ ಅಂತ್ಯದ ವರೆಗೆ ಮುಂದುವರೆಯಲಿದೆ ಎನ್ನಲಾಗಿದೆ. ಮೂರು ತಿಂಗಳಿಗೆ ಘೋಷಣೆಯಾಗಿದ ಉಚಿತ ಸೇವೆಗಳನ್ನು 6 ತಿಂಗಳಿಗೆ ವಿಸ್ತರಿಸಲಾಗಿದೆ ಎಂದು ರಾಷ್ಟ್ರಿಯ ಮಾಧ್ಯಮಗಳು ವರದಿ ಮಾಡಿವೆ. ಇದರಿಂದಾಗಿ ಜಿಯೋ ಬಳಕೆದಾರರು ಮಾರ್ಚ್ ಅಂತ್ಯದವರೆಗೂ ಉಚಿತ ಸೇವೆಯನ್ನು ಪಡೆಯಬಹುದಾಗಿದೆ.