ಮುಂಬೈ(ಸೆ.18): ವಿಶ್ವದಲ್ಲಿಯೇ ಅತೀ ಕಡಿಮೆ ದರದಲ್ಲಿ ಇಂಟರ್’ನೆಟ್ ಸೌಲಭ್ಯ ಹಾಗೂ ಉಚಿತ ಕರೆ ಹಾಗೂ ಸಂದೇಶಗಳನ್ನು ನೀಡುವ ಯೋಜನೆಯಲ್ಲಿರುವ ಮುಖೇಶ್ ಅಂಬಾನಿ ನೇತೃತ್ವದ ಭಾರತದ ದೈತ್ಯ ಸಂಸ್ಥೆ ರಿಲಾಯನ್ಸ್ ಜಿಯೋ, 25 ಕೋಟಿ ಗ್ರಾಹಕರಿಗೆ ಸಿಮ್ ಹಾಗೂ ಸಿಮ್ ಒಳಗೊಂಡ ಮೊಬೈಲ್ ನೀಡುವ ಉದ್ದೇಶ ಹೊಂದಿದೆಯಂತೆ. ಸದ್ಯ ಭಾರತದಲ್ಲಿ 26 ಕೋಟಿ ಗ್ರಾಹಕರನ್ನು ಹೊಂದಿರುವ ಏರ್’ಟೆಲ್ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ದೂರವಾಣಿ ಸೇವಾ ಸಂಸ್ಥೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಿಯೋ 4ಜಿ ವಿಶೇಷಗಳು

ದೇಶದಲ್ಲಿ ರಿಲಯನ್ಸ್ ಜಿಯೋ ರೋಮಿಂಗ್ ಚಾರ್ಚ್‌ ಉಚಿತ

50 ರೂಪಾಯಿಗೆ 1ಜಿಬಿ

ವಿದ್ಯಾರ್ಥಿಗಳಿಗಾಗಿ ವಿಶೇಷ ರಿಯಾಯಿತಿ ಘೋಷಣೆ. ಇದೀಗ ವಿದ್ಯಾರ್ಥಿಗಳು ಶೇ.25 ಕ್ಕೂ ಹೆಚ್ಚು ಡೇಟಾ ಸೇವೆಯನ್ನು ಪಡೆಯಬಹುದು. 

ಜಿಯೋ ನೆಟ್’ವರ್ಕ್ ವೇಗ 135 ಎಮ್‌ಬಿಪಿಎಸ್ ಡೌನ್‌ಲೋಡಿಂಗ್ ಸ್ಪೀಡ್ ಹೊಂದಿರುತ್ತದೆ

 ಎಲ್‌ವೈಎಫ್ ಅಡಿಯಲ್ಲಿ ಕೇವಲ 2999 ರೂ.ಗಳಲ್ಲಿ 4ಜಿ ಸ್ಮಾರ್ಟ್‌ಪೋನ್

4ಜಿ ಮಾತ್ರವಲ್ಲದೆ ಶೀಘ್ರದಲ್ಲಿಯೇ 5ಜಿ ಹಾಗೂ 6ಜಿ ಸೇವೆ ನೀಡಲಿದೆಯಂತೆ. 

18 ಸಾವಿರ ನಗರಗಳಲ್ಲಿ ಜಿಯೋ

ಜಿಯೋ ಬಳಕೆದಾರರು ವಾಯ್ಸ್ ಕರೆಗಳಿಗೆ ಹಣ ಸಂದಾಯ ಮಾಡಬೇಕಿಲ್ಲ