ಪ್ಲಾನ್‌ಗೆ ಈಗ ಎರಡು ವಾರಗಳ ಹೆಚ್ಚುವರಿ ಡಾಟಾ ಸೌಲಭ್ಯ ಒದಗಿಸಲಾಗಿದ್ದು, 70 ದಿನಗಳ ಕಾಲಾವಧಿಯಿಂದ 84 ದಿನಗಳಿಗೆ ವಿಸ್ತರಿಸಿದಂತಾಗಿದೆ

ಬೆಂಗಳೂರು(ಜ.07): ಮೊಬೈಲ್ ನೆಟ್‌ವರ್ಕ್‌ನಲ್ಲಿಯೇ ಮೊದಲ ಬಾರಿಗೆ ಉಚಿತ ಕರೆ ಹಾಗೂ ಉಚಿತ ಡಾಟಾದೊಂದಿಗೆ ಪರಿಚಯವಾದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ವರ್ಷಕ್ಕೆ ಆಕರ್ಷಕ ಕೊಡುಗೆಗಳನ್ನು ಪರಿಚಯಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾಸಿಕ ಕೇವಲ 149ರೂ. ಗಳಿಗೆ ಪ್ರತಿದಿನ ಒಂದು ಜಿಬಿ ಡಾಟಾ ಪ್ಲಾನ್ ಪರಿಚಯಿಸಿದೆ. ಈ ಪ್ಲಾನ್ ಟೆಲಿಕಾಂ ಉದ್ಯಮದಲ್ಲಿಯೇ ಅತ್ಯಂತ ಕಡಿಮೆ ಟ್ಯಾರಿಫ್ ಆಗಿದೆ. ಅಲ್ಲದೆ, ಈ ಹಿಂದೆ ಜಾರಿಯಲ್ಲಿದ್ದ 399ರೂ. ಪ್ಲಾನ್‌ಗೆ ಈಗ ಎರಡು ವಾರಗಳ ಹೆಚ್ಚುವರಿ ಡಾಟಾ ಸೌಲಭ್ಯ ಒದಗಿಸಲಾಗಿದ್ದು, 70 ದಿನಗಳ ಕಾಲಾವಧಿಯಿಂದ 84 ದಿನಗಳಿಗೆ ವಿಸ್ತರಿಸಿದಂತಾಗಿದೆ. ಅತೀ ಹೆಚ್ಚು ಡಾಟಾ ಪ್ಯಾಕ್ ಗಳನ್ನು ಬಳಸುವವರಿಗಾಗಿ ಪ್ರತಿ ಜಿಬಿಗೆ 4ರೂ.ಗಳಂತೆ ನೀಡಲು ಮುಂದಾಗಿದ್ದು, ಜನವರಿ 9ರಿಂದ ಜಾರಿಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.