ಜಿಯೋ ಸಿಮ್ ಪಡೆಯುವುದು ಇಂದು ಕಷ್ಟದ ವಿಷಯವಾಗಿದೆ, ಮಾರುಕಟ್ಟೆಯಲ್ಲಿ ಸಿಮ್ ಲಭ್ಯತೆ ಹಾಗೂ ಬೇಡಿಕೆ ನಡುವೆ ಭಾರಿ ವ್ಯತ್ಯಾಸವಿದ್ದು, ಕೆಲವರು ಮಾತ್ರ ಜಿಯೋ ಸಿಮ್ ಪಡೆದು ಉಪಯೋಗಿಸಲು ಶುರು ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಹಲವರು ಜಿಯೋ ಸಿಮ್ ಪಡೆದು ಕಾಲ್ ಮಾಡಲಾಗದೆ ಪರದಾಡುತ್ತಿದ್ದಾರೆ. ನೆಟ್ ವರ್ಕ್ ಇದೆ, ಸಿಮ್ ಇದೆ ಆದರೆ ಕಾಲ್ ಮಾಡಲಾಗುತ್ತಿಲ್ಲ ಎಂದು ದೂರುತ್ತಿದ್ದಾರೆ. ಅಂತಹವರಿಗೆ ಇಲ್ಲಿದೆ ಒಂದು ಸಲಹೆ.

ಕಾಲ್ ಮಾಡಲು ಪರದಾಡುತ್ತಿರುವವರು ಮಾಡಬೇಕಾದ್ದು ಇಷ್ಟೆ. ಗೂಗಲ್ ಪ್ಲೇ ಸ್ಟೋರ್'ಗೆ ಹೋಗಿ ಅಲ್ಲಿ ಜಿಯೋ ಆಪ್ ಡೌನ್ ಲೋಡ್ ಮಾಡಿಕೊಳ್ಳಿ. ನಂತರ ಆಪ್ ಮೂಲಕ ಕಾಲ್ ಮಾಡಿ ಇದರಿಂದ ಕಾಲ್ ಮಾಡುವುದು ಸುಲಭ. ಆಪ್ ಇಲ್ಲವಾದರೆ ಕಾಲ್ ಮಾಡುವುದು ಕಷ್ಟ ಸಾಧ್ಯ.