ಮಾರುಕಟ್ಟೆಗೆ ಲಗ್ಗೆ ಇಡಲಿದೆ ಜಾಗ್ವಾರ್ ಐ ಪೇಸ್ ಎಲೆಕ್ಟ್ರಿಕಲ್ ಕಾರು

First Published 5, Jun 2018, 6:27 PM IST
Jaguar i-Pace The electric SUV game-changer
Highlights

ಜಾಗ್ವಾರ್ ಕಾರು ಸಂಸ್ಥೆ ಇದೀಗ ನೂತನ ಎಲೆಕ್ಟ್ರಿಕಲ್ ಕಾರಿನ ಮೂಲಕ ಪರಿಸರಕ್ಕೆ ಪೂರಕವಾದ ಕಾರಿಗೆ ಒತ್ತು ನೀಡಿದೆ.  ನೂತನ ಜಾಗ್ವಾರ್ ಐ ಪೇಸ್ ಎಲೆಕ್ಟ್ರಿಕಲ್ ಕಾರಿನ ವಿಶೇಷತೆ ಏನು? ಇದರ ಬೆಲೆ ಏಷ್ಟು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
 

ಬೆಂಗಳೂರು(ಜೂನ್.5):  ದುಬಾರಿ ಹಾಗೂ ಲಕ್ಸುರಿ ಕಾರ್‌ಗಳಲ್ಲಿ ಜಾಗ್ವಾರ್ ಮುಂಚೂಣಿಯಲ್ಲಿದೆ. ಇದೀಗ ಇದೇ ಜಾಗ್ವಾರ್ ಸಂಸ್ಥೆ ಮೊತ್ತ ಮೊದಲ ಎಲೆಕ್ಕ್ರಿಕಲ್ ಕಾರನ್ನ ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದೆ. ಜಿನೆವಾ ಮೋಟಾರ್ ಶೋನಲ್ಲಿ ಇತರ ಕಾರುಗಳನ್ನ ಹಿಂದಿಕ್ಕಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಕಾರು, ಇದೇ ಜಾಗ್ವಾರ್ ಐ ಪೇಸ್ ಎಲೆಕ್ಟ್ರಿಕಲ್ ಕಾರು.

ಆನ್ ರೋಡ್ ಹಾಗೂ ಆಫ್ ರೋಡ್ ಇರಲಿ ಜಾಗ್ವಾರ್ ಐ ಪೇಸ್ ಎಲೆಕ್ಟ್ರಿಕಲ್ ಕಾರು ಸ್ಮೂತ್ ಡ್ರೈವಿಂಗ್ ಅನುಭವ ನೀಡಲಿದೆ. ನೂತನ ಕಾರನ್ನ 30 ವರ್ಷಗಳ ಅನುಭವಿ ಅಲ್ಯುಮಿನಿಯಮ್ ತಯಾರಕರು ನಿರ್ಮಿಸಿದ್ದಾರೆ. ರೇಂಜ್ ರೋವರ್ ಸಂಸ್ಥೆ ಇದೇ ರೀತಿ ಅಲ್ಯೂಮಿನಿಯಮನ್ನು ಬಳಸುತ್ತಿದೆ. 

ಆಕರ್ಷಣೀಯ ವಿನ್ಯಾಸ ಹಾಗೂ 432 ಲೀಥಿಯಮ್ -ಐಯಾನ್ ಪೌಚಸ್‌ನಿಂದ 90kWh ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. ಹೀಗಾಗಿ 40 ನಿಮಿಷ ಚಾರ್ಜ್ ಮಾಡಿದರೆ ಶೇಕಡಾ 80 ರಷ್ಟು ಚಾರ್ಜಿಂಗ್ ಆಗಲಿದೆ. 15 ನಿಮಿಷಗಳ ಚಾರ್ಜಿಂಗ್‌ನಿಂದ 100 ಕಿಲೋ ಮೀಟರ್ ದೂರ ಪ್ರಯಾಣಿಸಬಹುದು.

ವಿಶೇಷ ಅಂದರೆ  ಜಾಗ್ವಾರ್ ಐ ಪೇಸ್ ಎಲೆಕ್ಟ್ರಿಕಲ್ ಕಾರು ಎಸ್‌ಯುವಿ ಇಂಜಿನ್ ಹೊಂದಿದೆ. ಆದರೆ ಕಾರಿನ  ವಿನ್ಯಾಸ ಹಾಗೂ ಶೈಲಿ ಹ್ಯಾಚ್‌ಬ್ಯಾಕ್ ಕಾರನ್ನ ಹೋಲುತ್ತೆ. ಈ ಕಾರಿಗೆ ವೈಪರ್ ಇರಲ್ಲ. ಅದೆಷ್ಟೇ ಮಳೆ ಬಿದ್ದದರೂ ಕಾರಿನ ಗಾಜಿನ ಮೇಲೆ ನೀರು ನಿಲ್ಲುವುದಿಲ್ಲ. 

ಕ್ಯಾಬಿನ್ ಸ್ಪೇನ್, ಡ್ಯಾಶ್ ಫ್ರಂಟ್‌ವಾರ್ಡ್ಸ್, ಸೆಂಟ್ರಲ್ ಕನ್ಸೋಲ್‌ಗಳ ವಿನ್ಯಾಸದಲ್ಲಿ ಅಲ್ಪ ಬದಲಾವಣೆ ಮಾಜಲಾಗಿದೆ. ಹೆಚ್ಚಿನ ಸ್ಪೇಸ್ ಲಭ್ಯವಿದೆ. ಹಿಂಬದಿ ಸೀಟ್ ಬಳಿಯೂ ಹೆಚ್ಚಿನ ಸ್ಪೇಸ್ ನೀಡಲಾಗಿದೆ. ರೆಡ್ ರೂಮ್ ಕೂಡ ಉತ್ತಮವಾಗಿದೆ. 

ಕಾರಿನ ವೇಗ ನಿಮ್ಮನ್ನ ಅಚ್ಚರಿಗೊಳಿಸಲಿದೆ. 0-100 ಕೀಮಿ ವೇಗವನ್ನ ಜಾಗ್ವಾರ್ ಐ ಪೇಸ್ ಎಲೆಕ್ಟ್ರಿಕಲ್ ಕಾರು ಕೇವಲ 4.8 ನಿಮಿಷದಲ್ಲಿ ತಲುಪಲಿದೆ. ನೂತನ ಜಾಗ್ವಾರ್ ಕಾರಿನ ಬೆಲೆಯನ್ನ ಬಹಿರಂಗ ಪಡಿಸಿಲ್ಲ. ಆದರೆ ಶೀಘ್ರದಲ್ಲೇ ಮಾರುಕಟ್ಟೆಗೆ ಜಾಗ್ವಾರ್ ಜಾಗ್ವಾರ್ ಐ ಪೇಸ್ ಎಲೆಕ್ಟ್ರಿಕಲ್ ಕಾರು ಬಿಡುಗಡೆಯಾಗಲಿದೆ.
 

loader