ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ J8;ಹೇಗಿದೆ? ಏನೇನಿದೆ?

J8 enters Indian Market what is this
Highlights

ಜನಪ್ರಿಯ ಮೊಬೈಲ್ ಫೋನ್ ಕಂಪನಿ ಸ್ಯಾಮ್ ಸಂಗ್ ಗುರುವಾರ ಭಾರತೀಯ ಮಾರುಕಟ್ಟೆಗೆ ಹೊಸ ಹ್ಯಾಂಡ್ ಸೆಟ್ J8ನ್ನು ಬಿಡುಗಡೆ ಮಾಡಿದೆ. ಈ ಹೊಸ ಫೋನ್ ಹೇಗಿದೆ? ಮತ್ತು ಯಾವ್ಯಾವ ಫೀಚರ್ ಗಳನ್ನು ಹೊಂದಿದೆ ನೋಡೋಣ...

ಜನಪ್ರಿಯ ಮೊಬೈಲ್ ಫೋನ್ ಕಂಪನಿ ಸ್ಯಾಮ್ ಸಂಗ್ ಗುರುವಾರ ಭಾರತೀಯ ಮಾರುಕಟ್ಟೆಗೆ ಹೊಸ ಹ್ಯಾಂಡ್ ಸೆಟ್ J8ನ್ನು ಬಿಡುಗಡೆ ಮಾಡಿದೆ. ಈ ಹೊಸ ಫೋನ್ ಹೇಗಿದೆ? ಮತ್ತು ಯಾವ್ಯಾವ ಫೀಚರ್ ಗಳನ್ನು ಹೊಂದಿದೆ ನೋಡೋಣ...

 ಬಿಡುಗಡೆಯಾಗಿರುವ ಸ್ಯಾಮ್ ಸಂಗ್ J8 ಬೆಲೆಯು ರೂ. 18990 ಆಗಿದ್ದು, 4ಜಿಬಿ RAM, 64 ಜಿಬಿ ಸ್ಟೋರೆಜ್ ಹೊಂದಿದೆ.

ಸ್ಯಾಮ್ ಸಂಗ್ ಇ-ಶಾಪ್, ಪೇಟಿಎಮ್ ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ಗಳಲ್ಲಿ ಫೋನ್ ಖರೀದಿಗೆ ಲಭ್ಯವಿದೆ.

ಇನ್ನು ಫೋನ್, 720X1480 ಪಿಕ್ಸೆಲ್ ರೆಸಲ್ಯೂಶನ್ ಇರುವ  6 ಇಂಚು HD ಪರದೆ ಹೊಂದಿದೆ.  

ಆಕ್ಟಾಕೋರ್ ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 450 ಪ್ರೊಸೆಸರ್ ಹೊಂದಿದೆ.  

64 ಜಿಬಿ ಆಂತರಿಕ ಸ್ಟೋರೇಜ್ ಹೊಂದಿದ್ದು, ಅದನ್ನು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256 ಜಿಬಿವರೆಗೆ  ವಿಸ್ತರಿಸಬಹುದಾಗಿದೆ. 

16 ಮೆಗಾ ಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಜೊತೆಗೆ 16 ಮೆಗಾಪಿಕ್ಸೆಲ್ ಮುಂಬದಿ ಕ್ಯಾಮೆರಾವನ್ನು ಕೂಡಾ ಹೊಂದಿದೆ. 

3500 mAh ಸಾಮರ್ಥ್ಯದ ಬ್ಯಾಟರಿಯನ್ನು J8 ಹೊಂದಿದೆ.

ಕಳೆದ ಮೇಯಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ J8,ಗ್ಯಾಲಕ್ಸಿ J6, A6 ಮತ್ತು A6+ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿತ್ತು. 

loader