ಬೆಂಗಳೂರು(ಜು.17): ತಾಂತ್ರಿಕ ದೋಷದಿಂದ ಮುಂದೂಡಲ್ಪಟ್ಟಿರುವ ಚಂದ್ರಯಾನ-2 ಯೋಜನೆಯನ್ನು, ಇದೇ ಜುಲೈ 21 ಅಥವಾ 22ರಂದು ಕೈಗೆತ್ತಿಕೊಳ್ಳಲು ಇಸ್ರೋ ನಿರ್ಧರಿಸಿದೆ.

ಜುಲೈ 15ರಂದು ನಡೆಯಬೇಕಿದ್ದ ಉಡ್ಡಯನ ಕೊನೇ ಕ್ಷಣದಲ್ಲಿ ತಾಂತ್ರಿಕ ದೋಷದಿಂದಾಗಿ ರದ್ದಾಗಿತ್ತು. ಜಿಎಸ್‌ಲ್‌ವಿ-ಎಂಕೆಐ2 ರಾಕೆಟ್’ನಲ್ಲಿ ಕ್ರಯೋಜನಿಕ್ ಇಂಧನ ಸೋರಿಕೆ ಹಿನ್ನೆಲೆಯಲ್ಲಿ ಉಡ್ಡಯನ ರದ್ದುಪಡಿಸಲಾಗಿತ್ತು.

ವಿಜ್ಞಾನಿಗಳು ಹಾಗೂ ತಂತ್ರಜ್ಞರು ಇಂಧನ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸತತ ಪರಿಶ್ರಮ ವಹಿಸಿದ್ದು , ಜು.21 ರ ಮಧ್ಯಾಹ್ನ ಅಥವಾ ಜು.22ರ ಬೆಳಗಿನ ಜಾವ ಉಡ್ಡಯನ ನಡೆಸಲು ಇಸ್ರೋ ಯೋಚಿಸಿದೆ ಎನ್ನಲಾಗಿದೆ.