ನವದೆಹಲಿ(ಸೆ. 15): ಆಧಾರ್ ಕಾರ್ಡ್ ನೀಡಿದರೆ ಕೇವಲ 1,700 ರೂ. ಡೌನ್'ಪೇಮೆಂಟ್'ನಲ್ಲಿ ಐಫೋನ್ ಸಿಗಬಹುದೆಂಬ ಸುದ್ದಿ ನಿನ್ನೆ ಬಂದಿತ್ತು. ಇಂದು ಆ್ಯಪಲ್ ಸಂಸ್ಥೆಯು ಭಾರತಕ್ಕೆ ಇನ್ನಷ್ಟು ಭರ್ಜರಿ ಕೊಡುಗೆ ನೀಡಲು ಮುಂದಾಗಿದೆ. ಐಫೋನ್-6ನ ಕೆಲ ಮಾಡೆಲ್'ಗಳ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿರುವುದಾಗಿ ಆ್ಯಪಲ್ ಹೇಳಿಕೊಂಡಿದೆ. ಐಫೋನ್ 6ಎಸ್ ಮತ್ತು ಐಫೋನ್ 6ಎಸ್ ಪ್ಲಸ್'ನ 128 ಜಿಬಿ ಮಾಡೆಲ್'ಗಳು ಹಾಗೂ ಐಫೋನ್ ಎಸ್'ಇಯ 64 ಜಿಬಿ ಮಾಡೆಲ್'ಗಳ ಬೆಲೆಯಲ್ಲಿ ಇಳಿಕೆಯಾಗಿದೆ.
iPhone 6s 128GB ಫೋನ್'ನ ಬೆಲೆಯಲ್ಲಿ 22 ಸಾವಿರ ರೂ. ಇಳಿಕೆಯಾಗಿದ್ದು, ಈಗದು 60 ಸಾವಿರಕ್ಕೆ ಸಿಗುತ್ತದೆ. ಇನ್ನು, iPhone 6s Plus 128GB ಫೋನ್ ಕೂಡ 22 ಸಾವಿರ ರೂಪಾಯಿ ಕಡಿಮೆಯಾಗಿದ್ದು 70 ಸಾವಿರಕ್ಕೆ ಲಭ್ಯವಿರಲಿದೆ.
iPhone SE ಸ್ಮಾರ್ಟ್'ಫೋನ್'ನ 64ಜಿಬಿ ಮಾಡೆಲ್'ನ ಬೆಲೆ 49 ಸಾವಿರದಿಂದ 44 ಸಾವಿರ ರೂ.ಗೆ ಇಳಿಕೆಯಾಗಿದೆ. ಇದರ 16 ಜಿಬಿ ಮಾಡೆಲ್'ನ ಬೆಲೆ 39 ಸಾವಿರ ರೂಪಾಯಿ ಇದೆ.
ಇನ್ನು, ಭಾರತದಲ್ಲಿ ಬಿಡುಗಡೆಯಾಗಬೇಕಿರುವ ಐಫೋನ್7 ಸ್ಮಾರ್ಟ್'ಫೋನ್'ಗಳ ಬೆಲೆ 60-90 ಸಾವಿರ ರೂಪಾಯಿ ಇರಲಿದೆ.
