ಎಲ್ಲಾ ಫೋಟೋಗಳಲ್ಲೂ ಒಂದೇ ಬಗೆಯ ಮೋಡ| ಟ್ರೋಲಿಗರಿಗೆ ಆಹಾರವಾದ ಫೇಮಸ್ Travel Influencer| ಒಂದು ಟ್ವೀಟ್‌ನಿಂದ ಬಯಲಾಯ್ತು ಫೋಟೋ ಹಿಂದಿನ ಅಸಲಿಯತ್ತು

ಅರ್ಜೆಂಟೈನಾ[ಆ.31]: ಸೋಶಿಯಲ್ ಮೀಡಿಯಾದಲ್ಲಿ ತನ್ನ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಲು ಜನರು ನಾನಾ ದಾರಿ ಕಂಡುಕೊಳ್ಳುತ್ತಾರೆ. ತಮ್ಮ ಅತ್ಯುತ್ತಮ ಫೋಟೋಗಳನ್ನು ಅಪ್ಲೋಡ್ ಮಾಡಿ ಹಿಂಬಾಲಕರನ್ನು ಸೆಳೆಯುವ ಯತ್ನ ನಡೆಸುತ್ತಾರೆ. ಒಂದು ವೇಳೆ ಫೋಟೋ ಚೆನ್ನಾಗಿಲ್ಲವೆಂದಾದರೆ ಫೋಟೋಶಾಪ್ ಮೂಲಕ ಅದೆಷ್ಟು ಚೆನ್ನಾಗಿ ಎಡಿಟ್ ಮಾಡುತ್ತಾರೆಂದರೆ, ನೋಡುಗರು ನೋಡುತ್ತಲೇ ಇರಬೇಕು. 

ಆದರೀಗ ಅರ್ಜೆಂಟೈನಾದ ಟ್ರಾವೆಲ್ ಬ್ಲಾಗರ್ ಫೋಟೋಶಾಪ್ ಬಳಕೆಯಿಂದ ಮುಜುಗರ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಟುಪೀ ಸರಾವಿಯಾಳ ಫೋಟೋಗಳಲ್ಲಿದ್ದ ಬಹುದೊಡ್ಡ ಎಡವಟ್ಟನ್ನು ಕಂಡು ಹಿಡಿದ ಆಕೆಯ ಹಿಂಬಾಲಕರು, ಸದ್ಯ ಆಕೆಯ ಫೋಟೋ ಟ್ರೋಲಿಗರಿಗೆ ಆಹಾರವಾಗಿದೆ. ತಮಾಷೆಯ ವಿಷಯವೆಂದರೆ ಈಕೆಯ ಪ್ರತಿ ಫೋಟೋಗಳಲ್ಲೂ ಒಂದೇ ರೀತಿಯ ಮೋಡಗಳನ್ನು ಗಮನಿಸಬಹುದಾಗಿದೆ. 

Scroll to load tweet…

ಸೋಶಿಯಲ್ ಮೀಡಿಯಾ ಅದರಲ್ಲೂ ವಿಶೇಷವಾಗಿ ಇನ್ಸ್ಟಾಗ್ರಾಂನಲ್ಲಿ 'Influencer'ಗಳ ದೊಡ್ಡ ಸೈನ್ಯವೇ ಇದೆ. ಇವರು ತಮ್ಮ ಫೋಟೋಗಳ ಮೂಲಕವೇ ಹಿಂಬಲಕರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಾರೆ. Fashion Influencer, Travel Influencerಗಳಿಗೆ ಇಲ್ಲಿ ಬರವಿಲ್ಲ. ಅರ್ಜೆಂಟೈನಾದ ಟುಪಿ ಕೂಡಾ ಈರ್ವ Travel Influencer ಆಗಿದ್ದು, ಈಕೆ ಬರೋಬ್ಬರಿ 3,04,000 ಫಾಲೋವರ್ಸ್ ಹೊಂದಿದ್ದಾರೆ. 

Scroll to load tweet…

ಆದರೀಗ ಇವರ ಫೋಟೋಗಳು ಮಾತ್ರ ತಮಾಷೆಯ ವಿಷಯವಾಗಿ ಮಾರ್ಪಾಡಾಗಿವೆ. ಟ್ವಿಟರ್ ಮ್ಯಾಟ್ ನವಾರಾ ಎಂಬಾಕೆ ಇವರ ಇನ್ಸ್ಟಾಗ್ರಾಂ ಪೋಸ್ಟ್ ಗಳ ಹಲವಾರು ಸ್ಕ್ರೀನ್ ಶಾಟ್ ಗಳನ್ನು ತೆಗೆದುಕೊಂಡು 'ಈ ಇನ್ಸ್ಟಾಗ್ರಾಂ Influencerನ ಎಲ್ಲಾ ಫೋಟೋಗಳಲ್ಲೂ ಒಂದೇ ರೀತಿಯ ಮೋಡಗಳಿವೆ' ಎಂದಿದ್ದಾರೆ. 

Scroll to load tweet…
Scroll to load tweet…
Scroll to load tweet…
Scroll to load tweet…

ಈ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ಅನೇಕರು ಈ ವಿಚಾರದ ಕುರಿತು ಗಮನಹರಿಸಿದ್ದಾರೆ. ಅಲ್ಲದೇ ಈಕೆ ಎಲ್ಲರನ್ನೂ ಮೂರ್ಖಳನ್ನಾಗಿಸುತ್ತಿದ್ದಾಳೆ ಎಂದು ಪ್ರತಿಕ್ರಿಯಿಸಲಾರಂಭಿಸಿದ್ದಾರೆ.