ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಒದಗಿಸುತ್ತಿರುವ ಸಂಸ್ಥೆ Infinix  ಈಗ ಹೊಸ Smart 3 ಮೊಬೈಲ್‌ ಅನ್ನು ಪರಿಚಯಿಸಿದೆ. ಇದೇ ಮೊದಲ ಬಾರಿಗೆ ಮೂರು ಬ್ಯಾಕ್‌ ಕ್ಯಾಮೆರಾದ ಸ್ಮಾರ್ಟ್‌ಫೋನ್‌ ಅನ್ನು ಹೊರತಂದಿದ್ದು, ಏಪ್ರಿಲ್‌ 30ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಸಿಗಲಿದೆ.

ಈ ಫೋನ್‌ ಎಐ ತಂತ್ರಜ್ಞಾನದಲ್ಲಿ 2GB ರಾರ‍ಯಮ್‌ ಮತ್ತು 32 GB ಸ್ಟೋರೆಜ್‌ ಸೌಲಭ್ಯ ಇದೆ. 9.0 ಆಂಡ್ರಾಯ್ಡ್‌ ಪೈ ವರ್ಷನ್‌ ಹೊಂದಿದ್ದು, 13 ಹಾಗೂ 2MPಯ ಮೂರು ರೇರ್‌ ಕ್ಯಾಮೆರಾ ಹಾಗೂ 8 MP ಫ್ರಂಟ್‌ ಕ್ಯಾಮೆರಾ, 6.21 ಎಚ್‌ಡಿ+ ಡ್ರಾಪ್‌ ನಾಚ್‌ ಡಿಸ್‌ಪ್ಲೇ, 3500 ಬ್ಯಾಟರಿ ಸಾಮರ್ಥ್ಯ, 2.5 ಎಚ್‌ಡಿ ಗ್ಲಾಸ್‌ ಪ್ರೊಟೆಕ್ಷನ್‌ ಇದರಲ್ಲಿದೆ.

ಇದನ್ನೂ ಓದಿ: ಇಂಟರ್ನೆಟ್: ಡೌನ್‌ಲೋಡ್ ಸ್ಪೀಡ್ ಯಾರು ಮುಂದೆ?

ಫೋನ್‌ನಲ್ಲಿ ಗೇಮ್‌ ಬೂಸ್ಟ್‌ ಇದೆ. ಸ್ಮಾರ್ಟ್‌ ಫೋನ್‌ ಕ್ಲೀನರ್‌, ನಕಲಿ ಪತ್ತೆ, ಫೇಸ್‌ ಅನ್‌ಲಾಕ್‌ ಹೀಗೆ ಹಲವು ಹೊಸ ಫೀಚರ್‌ ಇದೆ. ಈ ಫೋನ್‌ ಏಪ್ರಿಲ್‌ 30ರ ಬೆಳಗ್ಗೆ ಇ-ಕಾಮರ್ಸ್‌ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ.

ಬೆಲೆ : 6999ರು.