Indian PC Market Shipment: 2021ರಲ್ಲಿ 1.5ಕೋಟಿ ಕಂಪ್ಯೂಟರ್ ಮಾರಾಟ: HPಗೆ ಅಗ್ರಸ್ಥಾನ

ಭಾರತೀಯ ಪಿಸಿ ಮಾರುಕಟ್ಟೆಯು 2021 ರಲ್ಲಿ 14.8 ಮಿಲಿಯನ್ ಶಿಪ್‌ಮೆಂಟ್‌ಗಳನ್ನು ಕಂಡಿದೆ, ವರ್ಷಕ್ಕೆ 44.5 ಶೇಕಡಾ ಬೆಳವಣಿಗೆಯಾಗಿದೆ: IDC

Indian PC Market Shippment Record 14 8 Million in 2021  44 5 Percent YoY Growth IDC Growth mnj

Tech Desk: ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಷನ್ (IDC) ವರದಿಯ ಪ್ರಕಾರ, 2021ರ ನಾಲ್ಕನೇ ತ್ರೈಮಾಸಿಕದಲ್ಲಿ (Q4 2021) 1.3 ಮಿಲಿಯನ್ ಯುನಿಟ್‌ಗಳನ್ನು ರವಾನಿಸುವುದರೊಂದಿಗೆ (Shipments) ಭಾರತದಲ್ಲಿ 2021 ರಲ್ಲಿ ಎಚ್‌ಪಿ HP ಒಟ್ಟಾರೆ PC ಮಾರುಕಟ್ಟೆಯಲ್ಲಿ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿದೆ. ಎಚ್‌ಪಿ ಒಟ್ಟು 31.5 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು  ಅದರ  ಕಳೆದ ವರ್ಷ ಸಾಗಣೆಯಲ್ಲಿ 58.7 ಪ್ರತಿಶತದಷ್ಟು ಬೆಳೆವಣಿಗೆ ಕಂಡಿದೆ ಎಂದು ವರದಿ ಹೇಳಿದೆ. 

ಇನ್ನು 2021 ರಲ್ಲಿ ಪರ್ಸನಲ್‌ ಕಂಪ್ಯೂಟರ್ (PC) ಮಾರಾಟಗಾರರು ಒಟ್ಟಾರೆ 14.8 ಮಿಲಿಯನ್ ಮಾಡೆಲ್‌ಗಳನ್ನು ರವಾನಿಸುವುದರೊಂದಿಗೆ PC ಮಾರುಕಟ್ಟೆಯು ಸ್ಥಿರ ಬೆಳವಣಿಗೆಯನ್ನು ಕಂಡಿದೆ. ವರ್ಕ್‌ ಫ್ರಾಮ್‌ ಹೋಮ್ (Work From Home) ಬೇಡಿಕೆ ಮತ್ತು ಉತ್ತಮ ಪೂರೈಕೆಗಳಿಂದ‌ ಈ ಮಾರುಕಟ್ಟೆ ಬೆಳವಣಿಗೆ ಕಂಡಿದೆ.  ನೋಟ್‌ಬುಕ್ (Notebook) ಕಂಪ್ಯೂಟರ್‌ಗಳು  11.6 ಮಿಲಿಯನ್ ಯುನಿಟ್‌ ಸಾಗಣೆಗಳನ್ನು ದಾಖಲಿಸಿದ್ದು ಅತಿ ದೊಡ್ಡ ಪಾಲನ್ನು ಹೊಂದಿವೆ. ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳು 2020 ಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ 30 ಪ್ರತಿಶತದಷ್ಟು ಬೆಳೆವಣಿಗೆಯಾಗಿದೆ

ಇದನ್ನೂ ಓದಿ: Cyber Crime: ಸೈಬರ್‌ ದಾಳಿ ಸರ್ಕಾರದ ಗಮನಕ್ಕೆ ತನ್ನಿ: ರಾಜೀವ್‌ ಚಂದ್ರಶೇಖರ್‌

ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಷನ್ (IDC) ವರದಿಯ ಪ್ರಕಾರ, ಭಾರತದಲ್ಲಿ ಪಿಸಿ ಸಾಗಣೆಗೆ ಸಂಬಂಧಿಸಿದಂತೆ ಎಚ್‌ಪಿ ಒಟ್ಟಾರೆ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಪಡೆದಿದ್ದು,  Q4 2021 ರಲ್ಲಿ ತ್ರೈಮಾಸಿಕದಲ್ಲಿ 1 ಮಿಲಿಯನ್ ಯೂನಿಟ್‌ಗಳನ್ನು ರವಾನಿಸಿದ್ದರಿಂದ 23.6 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿರುವ ಡೆಲ್ (Dell) ಎರಡನೇ ಸ್ಥಾನದಲ್ಲಿದೆ.  IT ಮತ್ತು ITES (ಮಾಹಿತಿ ತಂತ್ರಜ್ಞಾನ ಸಕ್ರಿಯಗೊಳಿಸಿದ ಸೇವೆಗಳು) ಮತ್ತು ಕಂಪನಿಯ ಜಾಗತಿಕವಾಗಿ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ 38 ಪ್ರತಿಶತದಷ್ಟು ಪಾಲನ್ನು ಹೊಂದಿರುವ ಎಂಟರ್‌ಪ್ರೈಸ್ ವಿಭಾಗದಲ್ಲಿ ಡೆಲ್‌ (Dell) ಮುನ್ನಡೆ ಸಾಧಿಸಿದೆ. 

ಲೆನೊವೊ (Lenevo)  2021ರ ನಾಲ್ಕನೇ ತ್ರೈಮಾಸಿಕ ಮತ್ತು ಕ್ಯಾಲೆಂಡರ್ ವರ್ಷ 2021 ಎರಡರಲ್ಲೂ ಮೂರನೇ ಸ್ಥಾನದಲ್ಲಿ ಉಳಿದಿದ್ದು, ವರ್ಷದಿಂದ ವರ್ಷಕ್ಕೆ 22.8 ಶೇಕಡಾ ಬೆಳವಣಿಗೆ ಕಂಡಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳ (SME ಗಳು) ವಿಭಾಗದಿಂದ ಬೇಡಿಕೆಗೆಯಿಂದಾಗಿ, ವರದಿಯ ಪ್ರಕಾರ, 24.7 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿರುವ ಎಚ್‌ಪಿ ಹಿಂದಿಕ್ಕಿ ಲೆನೋವೋ ಎರಡನೇ ಸ್ಥಾನದಲ್ಲಿದೆ. ಇನ್ನು ಕಂಪನಿಯ ಒಟ್ಟಾರೆ ಸಾಗಣೆಗಳ ಮೇಲೆ ಪೂರೈಕೆಗಳಲ್ಲಿನ ನಿರ್ಬಂಧಗಳು ಪರಿಣಾಮ ಬೀರಿವೆ ಎಂದು ವರದಿ ಹೇಳಿದೆ. 

ಇದನ್ನೂ ಓದಿ: ಏಶ್ಯಾ ಪೆಸಿಫಿಕ್ ಸಂಸ್ಥೆಗಳಿಗೆ ಸೈಬರ್ ಭದ್ರತೆ, ಐಬಿಎಂನಿಂದ ನೂತನ ಸೈಬರ್ ಸೆಕ್ಯುರಿಟಿ ಹಬ್

ಇನ್ನು ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿ ಏಸರ್ (Acer) ಮತ್ತು ಆಸುಸ್ (Asus) ಇವೆ, ಎರಡು ಕಂಪನಿಗಳು ಕ್ರಮವಾಗಿ 8.2 ಮತ್ತು 5.9 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದ್ದು ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ವರದಿಯ ಪ್ರಕಾರ ಡೆಸ್ಕ್‌ಟಾಪ್ ವರ್ಗದ ಚೇತರಿಕೆಯ ಮುಖ್ಯ ಫಲಾನುಭವಿಗಳಲ್ಲಿ ಏಸರ್ ಕೂಡ ಒಂದು. ಏಸರ್‌ನ ಸ್ಥಾಪಿತ ವಾಣಿಜ್ಯ ಡೆಸ್ಕ್‌ಟಾಪ್ (Desktop) ವ್ಯವಹಾರಗಳಿಂದಾಗಿ, ವಾಣಿಜ್ಯ ವಿಭಾಗದಲ್ಲಿ ಇದು 25.8 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿರುವ  ಎಚ್‌ಪಿ ನಂತರ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಏತನ್ಮಧ್ಯೆ, ಆಸುಸ್ 2021 ರಲ್ಲಿ ವರ್ಷದಿಂದ ವರ್ಷಕ್ಕೆ 36.1 ಪ್ರತಿಶತದಷ್ಟು ಬೆಳೆದಿದೆ ಹಾಗೂ  ಐಡಿಸಿ ವರದಿಯ ಪ್ರಕಾರ ವಾರ್ಷಿಕವಾಗಿ 227.2 ಶೇಕಡಾ ಬೆಳವಣಿಗೆಯೊಂದಿಗೆ ವಾಣಿಜ್ಯ ವಿಭಾಗದಲ್ಲಿ (Commercial Segment) ಪ್ರವೇಶವನ್ನು ಮಾಡಿದೆ.

Latest Videos
Follow Us:
Download App:
  • android
  • ios