2020ರಲ್ಲಿ ಭಾರತದಲ್ಲಿ 109 ಬಾರಿ ಇಂಟರ್ನೆಟ್ ಕಡಿತ

ಭಾರತದಲ್ಲಿ ವಿವಿಧ ರೀತಿಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಇಂಟರ್ನೆಟ್ ಸೇವೆಯನ್ನು ಪದೇ ಪದೇ ಸ್ಥಗಿತಗೊಳಿಸಲಾಗುತ್ತದೆ. 2020 ರಲ್ಲಿ 109 ಬಾರಿ ಇಂಟರ್ನೆಟ್ ಸ್ಥಗಿತ ಮಾಡಲಾಗಿತ್ತು. 

India shut down internet 109 times in 2020 snr

ನವದೆಹಲಿ (ಮಾ.05): 2020ರಲ್ಲಿ ಭಾರತದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಬಾರಿ ಇಂಟರ್‌ನೆಟ್‌ ಕಡಿತಗೊಳಿಸಲಾಗಿತ್ತು ಎಂಬ ವರದಿ ಬಹಿರಂಗಗೊಂಡಿದೆ.

 ಡಿಜಿಟಲ್‌ ಹಕ್ಕು ಸಂಸ್ಥೆ ಆ್ಯಕ್ಸೆಸ್‌ ನೌ ಈ ಕುರಿತ ಜಾಗತಿಕ ವಿಶ್ಲೇಷಣಾ ವರದಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಅದರಲ್ಲಿ ಕಳೆದ ವರ್ಷ ಜಾಗತಿಕವಾಗಿ 155 ಬಾರಿ ಇಂಟರ್‌ನೆಟ್‌ ಕಡಿತ ಮಾಡಲಾಗಿತ್ತು. ಈ ಪೈಕಿ ಭಾರತವೊಂದರಲ್ಲಿಯೇ ಬರೋಬ್ಬರಿ 109 ಬಾರಿ ಇಂಟರ್‌ನೆಟ್‌ ಕಡಿತ ಮಾಡಲಾಗಿತ್ತು ಎಂದು ತಿಳಿಸಿದೆ. 

2027ರಲ್ಲಿ ಅಂತರಿಕ್ಷದಲ್ಲಿ ಮೊದಲ ಹೋಟೆಲ್‌: 400 ಜನರಿಗೆ ರೂಂ, ಬಾರ್‌, ಜಿಮ್!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೇ ಅತಿ ಹೆಚ್ಚು ಬಾರಿ ಕಡಿತ ಮಾಡಲಾಗಿದೆ. ಹಾಗೆಯೇ ಇಂಟರ್‌ನೆಟ್‌ ಕಡಿತದಲ್ಲಿ ಯೆಮನ್‌ (6) ಮತ್ತು ಇಥಿಯೋಪಿಯಾ (4) ಕ್ರಮವಾಗಿ 2 ಮತ್ತು ಮೂರನೇ ಸ್ಥಾನ ಪಡೆದಿವೆ ಎಂದು ತಿಳಿಸಿದಿದೆ.

Latest Videos
Follow Us:
Download App:
  • android
  • ios