ನವದೆಹಲಿ[ಮಾ.07]: ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಜಿಯೋ ಕಂಪನಿಯ ಮೂಲಕ ಅಗ್ಗದ ದರಕ್ಕೆ ದೂರ ಸಂಪರ್ಕ ಸೇವೆ ಆರಂಭಿಸಿದ ಪರಿಣಾಮವಾಗಿ ಭಾರತದಲ್ಲಿ ಮೊಬೈಲ್‌ ಡೇಟಾ ವಿಶ್ವದಲ್ಲೇ ಅಗ್ಗ ಎನಿಸಿಕೊಂಡಿದೆ. ವಿಶ್ವದ ಸರಾಸರಿ 600 ರು.ಗೆ 1 ಜಿಬಿ (ಗಿಗಾ ಬೈಟ್‌) ಡೇಟಾ ಲಭ್ಯವಾಗುತ್ತಿದ್ದರೆ, ಭಾರತದಲ್ಲಿ 1ಜಿಬಿ ಡೇಟಾ 18.5 ರು.ಗೆ ಸಿಗುತ್ತಿದೆ.

್ರಟನ್‌ನಲ್ಲಿ 1 ಜಿಬಿ ಡೇಟಾಕ್ಕೆ 468 ರು. ಆಗಿದೆ. ಅದೇ ಅಮೆರಿಕದಲ್ಲಿ 1 ಜಿಬಿ ಡೇಟಾ ಬಳಕೆಗೆ 878 ರು. ನೀಡಬೇಕಿದೆ ಎಂದು ದರ ಹೋಲಿಕೆ ವೆಬ್‌ ಸೈಟ್‌ ಕೇಬಲ್‌ ಡಾಟ್‌ ಕೋ ಡಾಟ್‌ ಯು.ಕೆ. ಸಂಶೋಧನೆ ತಿಳಿಸಿದೆ. ಒಂದು ಜಿ.ಬಿ. ಬಳಕೆಗೆ ಜಾಗತಿಕವಾಗಿ ಸರಾಸರಿ 605 ರು. ವೆಚ್ಚವಾಗುತ್ತಿದೆ. 2018ರ ಅ.23ರಿಂದ ನ.28ರ ಅವಧಿಯಲ್ಲಿ 230 ದೇಶಗಳ 6,313 ಮೊಬೈಲ್‌ ಡೇಟಾ ಪ್ಲಾನ್‌ಗೆ ಹೋಲಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ.

43 ಕೋಟಿ ಮೊಬೈಲ್‌ ಬಳಕೆದಾರರೊಂದಿಗೆ ಭಾರತ ಚೀನಾದ ಬಳಿಕ ವಿಶ್ವದಲ್ಲೇ ಎರಡನೇ ಅತಿದೊಡ್ಡ ಮೊಬೈಲ್‌ ಮಾರುಕಟ್ಟೆಎನಿಸಿಕೊಂಡಿದೆ. 2016ರಲ್ಲಿ ಮುಕೇಶ್‌ ಅಂಬಾನಿ ಜಿಯೋ 4ಜಿ ಸೇವೆಯನ್ನು ಬಿಡುಗಡೆ ಮಾಡುವ ಮೂಲಕ ದೂರ ಸಂಪರ್ಕ ಮಾರುಕಟ್ಟೆಗೆ ಪ್ರವೇಶಿಸಿದ್ದರು. ಇದುವರಗೆ ಜಿಯೋ ಕಂಪನಿ 28 ಕೋಟಿ ಗ್ರಾಹಕರನ್ನು ಸಂಪಾದಿಸಿದೆ.