ಭಾರತದ ಅತಿ ತೂಕದ ಮತ್ತು ಅತ್ಯಂತ ಸುಧಾರಿತ ಸಂವಹನ ಉಪಗ್ರಹ ಜಿಸ್ಯಾಟ್-11! ಫ್ರೆಂಚ್ ಗಯಾನಾದ ಉಡ್ಡಯನ ಕೇಂದ್ರದಿಂದ ಯಶಸ್ವಿ ಉಡಾವಣೆ! ಭಾರತದಲ್ಲಿ ಬ್ರಾಂಡ್ ಬಾಂಡ್‌ಗಳ ಸೇವೆಯನ್ನು ಹೆಚ್ಚಿಸಲು ಸಹಕಾರಿ! ಮುಂದಿನ ಪೀಳಿಗೆಗೆ ಸುಧಾರಿತ ತಂತ್ರಜ್ಞಾನಗಳ ಬಳಕೆಗೆ ಸಹಕಾರಿ! ಇಸ್ರೊ ವಿಜ್ಞಾನಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ಬೆಂಗಳೂರು(ಡಿ.05): ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ವಿಶ್ವದ ಶಕ್ತಿಯುತ ರಾಷ್ಟ್ರಗಳ ಸಾಲಿಗೆ ಸೇರಿರುವುದು ಹೊಸದೇನಲ್ಲ. ಆದರೆ ತನ್ನ ನಿರಂತರ ಬಾಹ್ಯಾಕಾಶ ಮತ್ತು ಉಪಗ್ರಹ ಉಡಾವಣಾ ಯೋಜನೆಗಳ ಮೂಲಕ ವಿಶ್ವವನ್ನು ಬೆರಗುಗೊಳಿಸುತ್ತಿರುವ ರೀತಿ ಮಾತ್ರ ನಿಜಕ್ಕೂ ಅದ್ಭುತ.

ಭಾರತದ ಅತಿ ತೂಕದ ಮತ್ತು ಅತ್ಯಂತ ಸುಧಾರಿತ ಸಂವಹನ ಉಪಗ್ರಹ ಜಿಸ್ಯಾಟ್-11 ಫ್ರೆಂಚ್ ಗಯಾನಾದ ಉಡ್ಡಯನ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಇದನ್ನು The Big Bird ಎಂದೇ ಕರೆಲಾಗಿದೆ.

Scroll to load tweet…

ಏರಿಯೆನ್ 5 ವಿಎ-246 ಉಡ್ಡಯನ ವಾಹಕ, ಫ್ರಾನ್ಸ್ ನ ಕೌರೋ ಉಡ್ಡಯನ ಮೂಲ ಕೇಂದ್ರದಿಂದ ಭಾರತದ ಸ್ಥಳೀಯ ಕಾಲಮಾನ ಇಂದು ನಸುಕಿನ ಜಾವ 2 ಗಂಟೆ 7 ನಿಮಿಷಕ್ಕೆ ಉಡಾವಣೆಗೊಂಡಿದೆ. ಇದೇ ವಾಹಕ ದಕ್ಷಿಣ ಕೊರಿಯಾದ ಜಿಇಒ-ಕೊಂಪ್ಯಾಸ್-2ಎ ಉಪಗ್ರಹವನ್ನು ಕೂಡ ಹೊತ್ತೊಯ್ದಿದೆ.

ಭಾರತದಲ್ಲಿ ಬ್ರಾಂಡ್ ಬಾಂಡ್ ಗಳ ಸೇವೆಯನ್ನು ಹೆಚ್ಚಿಸಲು ಮತ್ತು ಮುಂದಿನ ಪೀಳಿಗೆಗೆ ಸುಧಾರಿತ ತಂತ್ರಜ್ಞಾನಗಳ ಬಳಕೆಗೆ ಈ ಉಪಗ್ರಹ ಸಹಾಯವಾಗಲಿದ್ದು, ತಂತ್ರಜ್ಞಾನ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸಲಿದೆ ಎಂದು ಇಸ್ರೊ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.

5,854 ಕೆಜಿ ತೂಕದ ಜಿಸ್ಯಾಟ್-11 ಇಸ್ರೊ ಇದುವರೆಗೆ ನಿರ್ಮಿಸಿದ ಅತ್ಯಂತ ಭಾರತ ಉಪಗ್ರಹವಾಗಿದೆ. ಇದು 15 ವರ್ಷಕ್ಕಿಂತ ಹೆಚ್ಚು ಜೀವಿತಾವಧಿಯನ್ನು ಹೊಂದಿದೆ ಎಂದು ಇಸ್ರೊ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ಉಡ್ಡಯನ ವಾಹಕದಿಂದ ಉಪಗ್ರಹ ಬೇರ್ಪಟ್ಟ ನಂತರ ಕರ್ನಾಟಕದ ಹಾಸನದಲ್ಲಿರುವ ಇಸ್ರೊದ ಕೇಂದ್ರ ನಿಯಂತ್ರಣಾ ವ್ಯವಸ್ಥೆಯಲ್ಲಿ ಜಿಸ್ಯಾಟ್ -11 ನ ನಿಯಂತ್ರಣ ಹೊಂದಿರುತ್ತದೆ. ಎಲ್ಲಾ ಕಕ್ಷೆಯ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ನಂತರ ಉಪಗ್ರಹ ಕಾರ್ಯನಿರ್ವಹಿಸಲು ಆರಂಭಿಸುತ್ತದೆ.

Scroll to load tweet…

ಇನ್ನು ಇಸ್ರೊ ಉಪಗ್ರಹ ಉಡಾವಣೆ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ವಿಜ್ಞಾನಿಗಳಿಗೆ ಶುಭಾಶಯ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಭಾರತ ತನ್ನ ವಿಜ್ಞಾನಿಗಳ ಬಗ್ಗೆ ಹೆಮ್ಮೆಪಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.