Asianet Suvarna News Asianet Suvarna News

ಇಂಟರ್ನೆಟ್‌ಗೂ ತಟ್ಟಿದ ಲಾಕ್‌ಡೌನ್ ಬಿಸಿ, ಎ.14ವರೆಗೆ ಈ ಸೌಲಭ್ಯಕ್ಕೆ ಕತ್ತರಿ

  • ಕೊರೋನಾವೈರಸ್‌ ವಿರುದ್ಧ ಸೆಣಸಾಡುತ್ತಿರುವ ಭಾರತ
  • ಲಾಕ್‌ಡೌನ್‌ನಿಂದ ಜನಜೀವನ ಅಸ್ತವ್ಯಸ್ತ
  • ವರ್ಕ್ ಫ್ರಮ್ ಹೋಂ, ಇಂಟರ್ನೆಟ್‌ ಬಳಕೆಯಲ್ಲಿ ಹೆಚ್ಚಳ 
India Mobile Data Users Cant Stream HD Content During Lockdown
Author
Bengaluru, First Published Mar 27, 2020, 11:00 PM IST

ಬೆಂಗಳೂರು (ಮಾ.27): ಕೊರೋನಾವೈರಸ್‌  ವಿರುದ್ಧದ ಸಮರದಲ್ಲಿ ಲಾಕ್‌ಡೌನ್ ಅಸ್ತ್ರ ಪ್ರಯೋಗವಾಗಿದೆ. ಡಿಜಿಟಲ್ ಜಮಾನ ಆಗಿರುವುದರಿಂದ, ಬಹಳಷ್ಟು  ಮಂದಿ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ.

ಇಂಟರ್ನೆಟ್‌ ವರ್ಕ್‌ ಫ್ರಮ್‌ ಹೋಮ್‌ ವ್ಯವಸ್ಥೆಯ ಜೀವನಾಡಿ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ, ಇಂಟರ್ನೆಟ್ ಸೇವೆ ಒದಗಿಸುವ ಟೆಲಿಕಾಂ ಕಂಪನಿಗಳ ಮೇಲೆ ಒತ್ತಡ ಬಹಳ ಹೆಚ್ಚಾಗಿದೆ. ಆ ಹಿನ್ನೆಲೆಯಲ್ಲಿ, ವಿಡಿಯೋ ಸ್ಟ್ರೀಮಿಂಗ್‌ ಗುಣಮಟ್ಟವನ್ನು ಕಡಿಮೆ ಮಾಡಲು ನಿರ್ಧರಿಸಿಸಲಾಗಿದೆ.

ಮೊಬೈಲ್ ಇಂಟರ್ನೆಟ್ ಬಳಕೆದಾರರಿಗೆ ಏ.14ರವವರೆಗೆ ಎಚ್‌ಡಿ ಅಥವಾ ಅಲ್ಟ್ರಾ ಎಚ್‌ಡಿ ವಿಡಿಯೋ ಕಂಟೆಟ್‌ ಬದಲಾಗಿ ಎಸ್‌ಡಿ ಕಂಟೆಂಟ್‌ ಮಾತ್ರ ಸಿಗಲಿದೆ ಎಂದು ಸರ್ಕಾರಿ ಸ್ವಾಮ್ಯದ ಪ್ರಸಾರ ಭಾರತಿ ಹೇಳಿದೆ.

ತಮ್ಮ ಮೇಲಿನ ಒತ್ತಡ ಕಡಿಮೆ ಮಾಡುವಂತೆ ಟೆಲಿಕಾಂ ಕಂಪನಿಗಳು ವಿಡಿಯೋ ಸ್ಟ್ರೀಮಿಂಗ್ ಸೇವೆ ಒದಗಿಸುವ ಕಂಪನಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದುವು. ಅದರ ಬೆನ್ನಲ್ಲೇ, ಡಿಜಿಟಲ್ ಇಂಡಸ್ಟ್ರಿಯ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗಿದ್ದು, ಎಲ್ಲರೂ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ಸೋನಿ, ಗೂಗಲ್, ಫೇಸ್ಬುಕ್, ವಯೋಕಾಮ್, ಅಮೇಜಾನ್ ಪ್ರೈಮ್ ವಿಡಿಯೋ, ಝೀ, ಟಿಕ್‌ಟಾಕ್, ನೆಟ್‌ಫ್ಲಿಕ್ಸ್ ಮತ್ತು ಹಾಟ್‌ಸ್ಟಾರ್‌ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಮಾ.18ರವರೆಗಿನ ಅಂಕಿಅಂಶಗಳ ಪ್ರಕಾರ, ಒಂದು ವಾರದಲ್ಲೇ ಮೊಬೈಲ್ ಇಂಟರ್ನೆಟ್‌ ಬಳಕೆ 20 ಶೇ. ಹೆಚ್ಚಾಗಿದೆ. ಲಾಕ್‌ಡೌನ್‌ನಿಂದಾಗಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ, ಗೃಹಿಣಿಯರಿಂದ ಹಿಡಿದು ವೃತ್ತಿಪರರರೆಲ್ಲರೂ ಹೆಚ್ಚಿನ ಸಮಯವನ್ನು ಇಂಟರ್ನೆಟ್‌ನಲ್ಲಿ ಕಳೆಯುತ್ತಿದ್ದಾರೆ. 

ಈ ಹೊಸ ನಿಯಮ ಕೇವಲ ಮೊಬೈಲ್ ಇಂಟರ್ನೆಟ್ ಬಳಕೆದಾರರಿಗೆ ಮಾತ್ರ ಅನ್ವಯಿಸಲಿದ್ದು, ಬ್ರಾಡ್‌ಬ್ಯಾಂಡ್‌ ಸೇವೆಗಳು ಅಭಾದಿತವಾಗಿರಲಿವೆ ಎಂದು ಪ್ರಸಾರ ಭಾರತಿ ಸ್ಪಷ್ಟ ಪಡಿಸಿದೆ. 

Follow Us:
Download App:
  • android
  • ios