Asianet Suvarna News Asianet Suvarna News

ಮಾರುಕಟ್ಟೆಗೆ ಲಗ್ಗೆಯಿಟ್ಟ ಐಬಾಲ್‌ ಕಾಂಪ್‌ಬುಕ್‌ ನೆಟಿಜನ್! ಏನಿದೆ? ಎಷ್ಟಿದೆ?

ಕಂಪ್ಯೂಟರ್, ಲ್ಯಾಪ್ ಟಾಪ್ ಹಾಗೂ ಇನ್ನಿತರ ಇಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಐಬಾಲ್ ಕಂಪನಿಯಿಂದ, ಬಹಳ ಹಗುರವಾದ ಲ್ಯಾಪ್ ಟಾಪ್ ಮಾರುಕಟ್ಟೆಗೆ. ಇಲ್ಲಿದೆ ಡೀಟೆಲ್ಸ್...
 

Iball Launches Compbook Netizen Laptop in India
Author
Bengaluru, First Published Mar 2, 2019, 6:10 PM IST

ಐಬಾಲ್‌ ಕಂಪನಿಯು ಇತ್ತೀಚೆಗೆ ಮಾರುಕಟ್ಟೆಗೆ ಹೊಸ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಿದೆ. ಅದರ ಹೆಸರು ‘ದಿ ಕಾಂಪ್‌ಬುಕ್‌ ನೆಟಿಜೆನ್‌’.ಇದು ಇಂಟರ್‌ನೆಟ್‌ಗಾಗಿಯೇ ತಯಾರಿಸಲಾದ ಉಪಕರಣವಾಗಿದ್ದು, ಸಂಪರ್ಕ ಮತ್ತು ಉತ್ಪಾದಕತೆಗಾಗಿಯೇ ವಿಶೇಷವಾಗಿ ನಿರ್ಮಿಸಲಾಗಿದೆ. 

ಇದು ಹಗುರವಾಗಿದ್ದು, ಎಲ್ಲಿ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದಾಗಿದೆ. ಇದರಲ್ಲಿ ಪ್ರೀ ಇನ್‌ಸ್ಟಾಲ್ಡ್‌ ವಿಂಡೋಸ್‌ 10 ಸಾಫ್ಟ್‌ವೇರ್‌ ಅಳವಡಿಸಲಾಗಿದೆ. 

ಇದನ್ನೂ ಓದಿ: ಗಡಿಯಾರಕ್ಕೆ ಬ್ಯಾಟರಿ ಬೇಕಿಲ್ಲ, ಗೋಮೂತ್ರ ಸಾಕು -ವಿದ್ಯಾರ್ಥಿಗಳ ಆವಿಷ್ಕಾರ!

ಇಂಟೆಲ್‌ ಎನ್‌ 3350 ಡ್ಯುಯೆಲ್‌ ಕೋಡ್‌ ಪ್ರೊಸೆಸರ್‌ 2.4 ಜಿಎಚ್‌ಜೆಡ್‌ವರೆಗಿನ ವೇಗದ ಪ್ರೊಸೆಸಿಂಗ್‌, 4ಜಿಬಿ ಡಿಡಿಆರ್‌ 3ಜಿಬಿ ರಾರ‍ಯಮ್‌, 37 ಡಬ್ಲ್ಯುಎಚ್‌/ 38 ಡಬ್ಲ್ಯುಎಚ್‌ ಬ್ಯಾಟರಿ ಬ್ಯಾಕಪ್‌ ಇದರಲ್ಲಿದೆ. 

ಸ್ಟಿರಿಯೋ ಸೌಂಡ್‌, ಇನ್‌ಬಿಲ್ಟ್‌ 64ಜಿಬಿ ಸ್ಟೋರೇಜ್‌, 128 ಜಿಬಿ ಮೈಕ್ರೊ ಎಸ್‌ಡಿ ಸ್ಲಾಟ್‌ ಮತ್ತು 2 ಟಿಬಿಗೆ ವಿಸ್ತರಿಸಬಹುದಾದ, ಲ್ಯಾಪ್‌ಟಾಪ್‌ ಒಳಗಡೆ ಹಾರ್ಡ್‌ ಡಿಸ್ಕ್‌ ಡ್ರೈವ್‌/ಎಸ್‌ಎಸ್‌ಡಿ* (7ಎಂಎಂವರೆಗೆ)ಗೆ ಅವಕಾಶ ಇದೆ.

ಕಂಪನಿ ನಿಗದಿಪಡಿಸಿದ ಬೆಲೆ ರೂ. 24,999. ಆದರೆ ಆನ್ ಲೈನ್ ನಲ್ಲಿ ರಿಯಾಯಿತಿ ಬಳಿಕ ಆಕರ್ಷಕ ದರಗಳಲ್ಲಿ ಲಭ್ಯವಿದೆ.  

Follow Us:
Download App:
  • android
  • ios