Huawei ಕಂಪನಿಯು P30 ಮಾಡೆಲ್‌ನ ಹೊಸ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಫೋನ್‌  ಅಮೆಜಾನ್‌ನಲ್ಲಿ  ಇಂದಿನಿಂದ [ಏಪ್ರಿಲ್‌ 25ರ ಮಧ್ಯಾಹ್ನ 12ರಿಂದ] ಲಭ್ಯವಿದೆ. ಕಂಪನಿ ಈ ಹೊಸ ಸ್ಮಾರ್ಟ್‌ಫೋನ್‌ ಅನ್ನು ಹಲವು ಫೀಚ​ರ್ಸ್ ಹಾಗೂ ಕೊಡುಗೆಗಳೊಂದಿಗೆ ಪರಿಚಯಿಸಿದೆ. 

ಮಿಡ್‌ನೈಟ್‌ ಬ್ಲಾಕ್‌ ಹಾಗೂ ಪಿಕಾಕ್‌ ಬ್ಲ್ಯೂನ ಎರಡು ಬಣ್ಣಗಳಲ್ಲಿ ಮೊಬೈಲ್‌ ಲಭ್ಯ. ಎರಡು ಮಾದರಿಯಲ್ಲಿ ಫೋನ್‌ ಸಿಗಲಿದೆ. ಒಂದು 6GB RAM, 128 GB ಸ್ಟೋರೇಜ್‌. ಇದರ ಬೆಲೆ ರೂ.22,990. ಇನ್ನೊಂದು ಮೊಬೈಲ್‌ 4GB RAM, 128 GB ಸ್ಟೋರೇಜ್‌ ಹೊಂದಿದೆ. ಅದರ ಬೆಲೆ ರೂ.19,990.

ಇದನ್ನೂ ಓದಿ: Huawei P30 Pro ಹವಾಕ್ಕೆ ಮೊಬೈಲ್ ಪ್ರಿಯರು ಫಿದಾ! ಹೇಗಿದೆ? ಬೆಲೆ ಎಷ್ಟಿದೆ?

P30 ಫೋನ್‌ನ ವಿಶೇಷವೆಂದರೆ 6.47 ಇಂಚಿನ ಎಲ್‌ಸಿಡಿ ಡಿಸ್‌ಪ್ಲೆ ಮತ್ತು ರೇರ್‌ ಕ್ಯಾಮೆರಾ. 24 ಮೆಗಾ ಪಿಕ್ಸೆಲ್‌ನ ಮೂರು ರೇರ್‌ ಕ್ಯಾಮೆರಾವನ್ನು ಈ ಮೊಬೈಲ್‌ ಹೊಂದಿದೆ. ಫ್ರಂಟ್‌ ಕ್ಯಾಮೆರಾದ ಸಾಮರ್ಥ್ಯ 32 ಮೆಗಾ ಪಿಕ್ಸೆಲ್‌. 4,200 mAh ಬ್ಯಾಟರಿ ಸಾಮರ್ಥ್ಯ ಇದ್ದು, ಟೈಪ್‌ ಸಿ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವಿದೆ.

ಫಿಂಗರ್‌ ಪ್ರಿಂಟ್‌ ಸೆನ್ಸಾರ್‌ ಹೊಂದಿರುವ P30ನಲ್ಲಿ ವೈರ್‌ಲೆಸ್‌ ಚಾರ್ಜಿಂಗ್‌ ಸಹ ಇದೆ. ಜೊತೆಗೆ ಜಿಯೋ ಬಳಕೆದಾರರಿಗೆ 2.2 ಟೆರ್ರಾಬೈಟ್‌ ಡಾಟಾ ಮತ್ತು 2200 ಕ್ಯಾಶ್‌ಬ್ಯಾಕ್‌ನ ವಿಶೇಷ ಆಫರ್‌ ಸಹ ನೀಡಿದೆ. ಗ್ರಾಹಕರಿಗೆ ಆರು ತಿಂಗಳ ನೊ ಕಾಸ್ಟ್‌ ಇಎಂಐ ಸೌಲಭ್ಯ Huawei ನೀಡುತ್ತಿದೆ. ಈ ಸ್ಮಾರ್ಟ್‌ಫೋನ್‌ ಇಂದಿನಿಂದ ಅಮೆಜಾನ್‌ನಲ್ಲಿ ಸಿಗುತ್ತಿದೆ.