Asianet Suvarna News Asianet Suvarna News

HPಯಿಂದ ಹೊಸ ಲ್ಯಾಪ್ ಟಾಪ್; ಎಷ್ಟು ತೆಳು ಇದೆ ಎಂದರೆ....

ಎಚ್‌ಪಿ ಪ್ರೋಬುಕ್‌ 445 ಜಿ6 ಲ್ಯಾಪ್‌ಟಾಪ್‌ ಬಿಡುಗಡೆ; ತುಂಬಾ ಹಗುರ ಮತ್ತು ತೆಳು; 180 ಡಿಗ್ರಿ ತೆರೆದುಕೊಳ್ಳುವ ಸಾಮರ್ಥ್ಯ
 

HP Pro Book 445 G6 Laptop Launched Price Features
Author
Bengaluru, First Published Jul 26, 2019, 6:59 PM IST
  • Facebook
  • Twitter
  • Whatsapp

ಈಗಿನ ಡಿಜಿಟಲ್ ಯುಗದಲ್ಲಿ ಎಲ್ಲಾ ಗ್ಯಾಜೆಟ್‌ಗಳು ಹ್ಯಾಂಡಿಯಾಗಿರಬೇಕು, ಭಾರ ಇರಬಾರದು ಎಂದೇ ಎಲ್ಲರ ಬಯಕೆ. ಲ್ಯಾಪ್‌ಟಾಪ್ ಕೂಡಾ ಅದಕ್ಕೆ ಹೊರತಲ್ಲ. 

ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತಿತರ ಡಿಜಿಟಲ್ ಉಪಕರಣಗಳಿಗೆ ಪ್ರಸಿದ್ಧವಾಗಿರುವ HP ಕಂಪನಿಯು ತುಂಬಾ ಹಗುರ ಮತ್ತು ತೆಳುವಾಗಿರುವ ಹೊಸ ಲ್ಯಾಪ್‌ಟಾಪ್‌ ಅನ್ನು ಲೋಕಾರ್ಪಣೆ ಮಾಡಿದೆ. 

ಇದನ್ನೂ ಓದಿ | ಇಂಡಿಯನ್ ಆ್ಯಪಲ್ ಮಾರುಕಟ್ಟೆಗೆ ಬರುತ್ತಿದೆ; ಬೆಲೆಯೂ ಪಾಕೆಟ್ ಫ್ರೆಂಡ್ಲಿ!

ಆ ಲ್ಯಾಪ್‌ಟಾಪ್‌ ಹೆಸರು HP ಪ್ರೋಬುಕ್‌ 445 ಜಿ6. ನೋಡುವುದಕ್ಕೂ ಹಿಡಿದುಕೊಳ್ಳುವುದಕ್ಕೂ ಖುಷಿ ಕೊಡುವ ಲ್ಯಾಪ್‌ಟಾಪ್‌ ಇದು. 

ಎಎಂಡಿ ರೈಜನ್‌ ಕ್ವಾಡ್‌ ಕೋರ್‌ ಪ್ರೊಸೆಸರ್‌ ಹೊಂದಿದೆ. ಇದು ಎಷ್ಟು ತೆಳು ಇದೆ ಎಂದರೆ ಇದರ ದಪ್ಪ 18 ಎಂಎಂ ಮಾತ್ರ. 

180 ಡಿಗ್ರಿ ತೆರೆದುಕೊಳ್ಳುವ ಸಾಮರ್ಥ್ಯ ಇರುವ ಈ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವುದೇ ಒಂದು ಖುಷಿಯ ವಿಚಾರ ಎಂದು HP ಹೇಳಿದೆ. ಇದರ ಬೆಲೆ ರು. 67,260.

Follow Us:
Download App:
  • android
  • ios