ಇಂಡಿಯನ್ ಆ್ಯಪಲ್ ಮಾರುಕಟ್ಟೆಗೆ ಬರುತ್ತಿದೆ; ಬೆಲೆಯೂ ಪಾಕೆಟ್ ಫ್ರೆಂಡ್ಲಿ!

ಭಾರತದಲ್ಲಿ ತಯಾರಾದ Apple ಕಂಪನಿಯ 2 ಹೊಸ iPhoneಗಳು ಶೀಘ್ರದಲ್ಲೇ ಬಿಡುಗಡೆ; ಇಲ್ಲೇ ತಯಾರಾಗಿರುವುದರಿಂದ ಬೆಲೆಯೂ ಕಡಿಮೆ ಆಗಿರಲಿದೆ ಎಂಬ ನಿರೀಕ್ಷೆ

Apple iPhone XR  XS assembled in India may hit stores in August

ಬೆಂಗಳೂರು (ಜು.13): ಭಾರತದ ಫಾಕ್ಸ್‌ಕಾನ್ ಘಟಕದಲ್ಲಿ ತಯಾರಾದ ಆ್ಯಪಲ್ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆಯಿಡಲು ರೆಡಿಯಾಗಿವೆ.

ಮುಂದಿನ ತಿಂಗಳು (ಆಗಸ್ಟ್‌ನಲ್ಲಿ) ಎರಡು iPhoneಗಳು ಬಿಡುಗಡೆಗೆ ಸಿದ್ಧವಾಗಿದ್ದು, ಭಾರತದಲ್ಲೇ ತಯಾರಾಗಿರುವುದರಿಂದ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿವೆ, ಎಂದು ವರದಿಯಾಗಿದೆ.

ಅಂತಿಮ ಹಂತದ ಅನುಮತಿ ಪ್ರಕ್ರಿಯೆ ಬಾಕಿಯಿದ್ದು, iPhone XR ಮತ್ತು iPhone XS ಮುಂದಿನ ತಿಂಗಳು ಮಾರುಕಟ್ಟೆಗೆ ಪದಾರ್ಪಣೆ ಮಾಡಲಿವೆ ಎಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕಂಪನಿ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.

ಇದನ್ನೂ ಓದಿ | ಭಾರತದ ಹಿರಿಮೆಗೆ ಮತ್ತೊಂದು ಗರಿ; ಆ್ಯಪಲ್‌ಗೆ ಭಾರತೀಯ ಉಪಾಧ್ಯಕ್ಷ!

ಭಾರತದಲ್ಲೇ ತಯಾರಾಗುವುದರಿಂದ ರಫ್ತು/ಆಮದು ಸುಂಕ ಉಳಿತಾಯ ಹಾಗೂ ಇನ್ನಿತರ ಮಾರುಕಟ್ಟೆ ಫ್ಯಾಕ್ಟರ್ ಹಿನ್ನೆಲೆಯಲ್ಲಿ ಕಡಿಮೆ ಬೆಲೆಯಲ್ಲಿ ಹೊಸ ಫೋನ್‌ಗಳು ಲಭ್ಯವಾಗಲಿವೆ ಎಂದು ಹೇಳಲಾಗುತ್ತಿದೆ.

ಗುಣಮಟ್ಟದ ಕಾರಣದಿಂದ Apple iPhoneಗಳು ಭಾರತದಲ್ಲಿ ಮನೆಮಾತಾಗಿದ್ದರೂ, ಬೆಲೆಯ ಕಾರಣದಿಂದ ಶ್ರೀಸಾಮಾನ್ಯನ ಪಾಕೆಟ್ ಸೇರೋದು ವಿರಳ.

ಕ್ಯಾಲಿಫೋರ್ನಿಯಾದ ಈ ಕಂಪನಿಗಾಗಿ ತಮಿಳುನಾಡಿನಲ್ಲಿರುವ ಫಾಕ್ಸ್‌ಕಾನ್ ಕಂಪನಿಯು ಈ ಹೊಸ ಫೋನ್‌ಗಳನ್ನು ತಯಾರಿಸಿದೆ.

ಬೆಂಗಳೂರು ಹೊರವಲಯದಲ್ಲಿರುವ ತೈವಾನ್‌ ಮೂಲದ ವಿಸ್ಟ್ರಾನ್ ಎಂಬ ಕಂಪನಿಯು ಆ್ಯಪಲ್‌ಗಾಗಿ iPhone SE ಹಾಗೂ iPhone 6s ಮೊಬೈಲ್‌ ಸಿದ್ಧಪಡಿಸುತ್ತಿದೆ. ಈಗ ಅದೇ ಕಂಪನಿಯು ಕಳೆದ ಮಾರ್ಚಿನಿಂದ iPhone 7ನ್ನು  ತಯಾರಿಸುವ ಪ್ರಕ್ರಿಯೆ ಆರಂಭಿಸಿದೆ.

Latest Videos
Follow Us:
Download App:
  • android
  • ios