ಮುಂಬೈ(ಸೆ.26):  ಎಚ್‌ಪಿ ಕಂಪೆನಿ ಸುರಕ್ಷಿತ ಕಮರ್ಷಿಯಲ್ ಡಿವೈಸ್‌ಗಳು ಮತ್ತು ಸುಲಭವಾಗಿ ನಿರ್ವಹಣೆ ಮಾಡಬಹುದಾದ ಪಿಸಿಗಳನ್ನು ಬಿಡುಗಡೆ ಮಾಡಿದೆ. ಎಚ್‌ಪಿ ಎಲೈಟ್ ಸೀರೀಸ್‌ನಲ್ಲಿ ಇವು ಬಿಡುಗಡೆಯಾಗಿವೆ. ಎಚ್‌ಪಿ ಎಲೈಟ್‌ಬುಕ್‌ಎಕ್ಸ್ 360 1030 ಜಿ3, ಎಚ್‌ಪಿ ಪ್ರೊಬುಕ್ ಜಿ4 ನೋಟ್‌ಬುಕ್, ಎಚ್‌ಪಿ ಎಲೈಟ್ ಡಿಸ್‌ಪ್ಲೇ ಇ273, ಎಚ್‌ಪಿಝಡ್ ಬುಕ್ ಸ್ಟುಡಿಯೋಎಕ್ಸ್ 360 ಎಂಬ ಲ್ಯಾಪ್ ಟಾಪ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿವೆ. 

ಕಡಿಮೆ ತೂಕ, ಹೆಚ್ಚು ಸಾಮರ್ಥ್ಯದ ಈ ಪಿಸಿಗಳ ಬ್ಯಾಟರಿ ಬಹಳ ಕಾಲ ಬರುತ್ತದೆ. ಅತ್ಯಾಧುನಿಕ ಬ್ಯುಸಿನೆಸ್ ಡಿವೈಸ್‌ಗಳಾಗಿದ್ದು, ದೊಡ್ಡ ಫೈಲ್ ಆ್ಯಪ್‌ಗಳನ್ನು ವೇಗವಾಗಿ ಬಳಸಬಹುದಾಗಿದೆ. ಎಚ್‌ಪಿ ಎಲೈಟ್‌ಬುಕ್‌ಎಕ್ಸ್ 360 1030 ಜಿ3 ವಿಶ್ವದ ಅತ್ಯಂತ ಚಿಕ್ಕ ಬ್ಯುಸಿನೆಸ್ ಲ್ಯಾಪ್‌ಟಾಪ್. ಇದರ ತೂಕ 1.3 ಕೆಜಿಗಳಷ್ಟಿವೆ. 15.8 ಮಿಲಿಮೀಟರ್ ದಪ್ಪವಾಗಿದೆ.

ಇದರ ಬ್ಯಾಟರಿ ಅವಧಿ 18 ಗಂಟೆಗಳವರೆಗೆ ಇರುತ್ತದೆ. 4ಜಿ ಕ್ಯಾಟ್ 9 ಎಲ್‌ಟಿಇ ತಂತ್ರಜ್ಞಾನ ಇರುವ ಕಾರಣ ಸಂಪರ್ಕ ಸಮಸ್ಯೆ ಎದುರಾಗದು. ಇನ್ನೊಂದು ಡಿವೈಸ್ ಎಚ್‌ಪಿ ಎಲೈಟ್‌ಡಿಸ್‌ಪ್ಲೇ ಇ273  ಆಧುನಿಕ ಬ್ಯುಸಿನೆಸ್ ಡಿಸ್‌ಪ್ಲೇ ಹೊಂದಿದೆ. ಎಚ್‌ಪಿ ಪೊ ್ರಬುಕ್ ಜಿ4 ನೋಟ್‌ಬುಕ್ ಡಿವೈಸ್, ಉದ್ದಿಮೆ ಭದ್ರತೆ, ನಿರ್ವಹಣೆಗೆ ಪೂರಕವಾದ ತಂತ್ರಜ್ಞಾನ ಹೊಂದಿದೆ.

ಎಚ್‌ಪಿಝಡ್ ಬುಕ್ ಸ್ಟುಡಿಯೋಎಕ್ಸ್ 360 ಲ್ಯಾಪ್‌ನಲ್ಲಿ ದೊಡ್ಡ ಫೈಲ್‌ಗಳನ್ನು ಲೋಡ್ ಮಾಡಬಹುದು. ಒಂದಕ್ಕಿಂತ ಹೆಚ್ಚು ಆ್ಯಪ್‌ಗಳು ಬೇಗ ತೆರೆದುಕೊಳ್ಳುತ್ತವೆ. ಜೊತೆಗೆ ಸುಲಭವಾಗಿ ಹೈ-ರೆಸಲೂಶನ್ ಫೋಟೋಗಳನ್ನು ಎಡಿಟ್ ಮಾಡಬಹುದು.