ಈ ಮೇಡ್-ಇನ್-ಇಂಡಿಯಾ ಅಪ್ಲಿಕೇಶನ್ ಮೂಲಭೂತವಾಗಿ ನಿಮ್ಮ ಡಾಕ್ಯುಮೆಂಟ್‌ಗಳನ್ನು ಸುರಕ್ಷಿತವಾಗಿ ಡಿಜಿಟಲ್ ಮೋಡ್‌ನಲ್ಲಿ ಶೇಖರಿಸುವ ಒಂದು ಫೂಲ್ ಪ್ರೂಫ್ ಮಾರ್ಗವಾಗಿದೆ
DigiLocker: ನಿಮ್ಮ ಪ್ರಮುಖ ದಾಖಲೆಗಳನ್ನು ನಿಮ್ಮ ಜತೆ ಕೊಂಡೊಯ್ಯಲು ಕಷ್ಟಪಡುತ್ತಿದ್ದರೆ, ಕೇಂದ್ರ ಸರ್ಕಾರ ‘ಡಿಜಿ ಲಾಕರ್’ಆ್ಯಪ್ ನಿಮ್ಮ ಸಹಾಯಕ್ಕೆ ಬರುತ್ತದೆ. ಆಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿ ಲಭ್ಯವಿರುವ ಮೇಡ್-ಇನ್-ಇಂಡಿಯಾ ಅಪ್ಲಿಕೇಶನ್ ಮೂಲಭೂತವಾಗಿ ನಿಮ್ಮ ಡಾಕ್ಯುಮೆಂಟ್‌ಗಳನ್ನು ಸುರಕ್ಷಿತವಾಗಿ ಡಿಜಿಟಲ್ ಮೋಡ್‌ನಲ್ಲಿ ಶೇಖರಿಸುವ ಒಂದು ಫೂಲ್ ಪ್ರೂಫ್ ಮಾರ್ಗವಾಗಿದೆ. ತಮ್ಮ ಬಳಿ ಯಾವುದೇ ಮೂಲ ದಾಖಲೆಗಳನ್ನು ಕೊಂಡೊಯ್ಯುವ ಬದಲಿಗೆ ಡಿಜಿ ಲಾಕರ್‌ನಲ್ಲಿರುವ ದಾಖಲೆ ನೀವು ಬಳಸಬಹುದು.
ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಬಳಿಕ ಅಲ್ಲಿ ಆಧಾರ್, ಚಾಲನಾ ಪರವಾನಗಿ, ಆರ್‌ಸಿ, ವಿಮೆ ಇನ್ನಿತರ ದಾಖಲೆಗಳು ಇರುತ್ತವೆ. ತಮ್ಮಗೆ ಅಗತ್ಯವಿರುವ ದಾಖಲೆಗಳನ್ನು ನೊಂದಣಿ ಸಂಖ್ಯೆ ದಾಖಲೆಸಿ ದಾಖಲಾತಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
ಇದರಿಂದ ಮಳೆಗಾಲ ಹಾಗೂ ಮೂಲ ದಾಖಲೆಗಳನ್ನು ಕೊಂಡೊಯ್ಯುವುದು ತಪ್ಪಲಿದೆ. ಜತೆಗೆ ಪೊಲೀಸರ ಪರಿಶೀಲನೆಗೂ ಸುಲಭವಾಗಲಿದೆ. ಡಿಜಿಲಾಕರ್ ಅಪ್ಲಿಕೇಶನನ್ನು ಹೇಗೆ ಬಳಸುವುದು ಮತ್ತು ಸೆಟಪ್ ಮಾಡುವುದು ಹೇಗೆ ಎಂಬುದಎ ಮಾಹಿತಿ ಇಲ್ಲಿದೆ.
- ಮೊದಲು ನೀವು ಡಿಜಿಲಾಕರ್ ಅಪ್ಲಿಕೇಶನನ್ನು ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬೇಕು. ಅಪ್ಲಿಕೇಶನ್ ಡೌನ್‌ಲೋಡ್ ಆದ ಬಳಿಕ ಅದನ್ನು ತೆರೆಯಿರಿ.
- ಮುಂದೆ, ಮುಖ್ಯ ಪುಟದ ಕೆಳಭಾಗದಲ್ಲಿರುವ 'Get Started' ಬಟನನ್ನು ಕ್ಲಿಕ್ ಮಾಡಿ. ನಂತರ 'Create Account' (ಖಾತೆ ರಚಿಸಿ) ಆಯ್ಕೆಮಾಡಿ. ನೀವು ಈಗಾಗಳೆ ಖಾತೆ ರಚಿಸಿದ್ದರೆ Sign In ಆಯ್ಕೆ ಮಾಡಬಹುದು

- ಖಾತೆ ರಚನೆ ಪುಟದಲ್ಲಿ, ನೀವು ಮಾಹಿತಿ ನೀಡಬೇಕಾದ ಬಹಳಷ್ಟು ಕಾಲಮ್‌ಗಳಿವೆ. ಇವುಗಳು ನಿಮ್ಮ ಪೂರ್ಣ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ನಿಮ್ಮ ಆಧಾರ್ ಸಂಖ್ಯೆಯಂತಹ ಅಂಶಗಳನ್ನು ಒಳಗೊಂಡಿರುತ್ತದೆ. ಒಮ್ಮೆ ಈ ಎಲ್ಲ ಮಾಹಿತಿ ತುಂಬಿದ ನಂತರ, ಅಪ್ಲಿಕೇಶನ್ ಫೋನ್ ಸಂಖ್ಯೆಗೆ ಓಟಿಪಿಯನ್ನು (OTP) ಕಳುಹಿಸುತ್ತದೆ ಅದನ್ನು ನೀವು ಮೌಲ್ಯೀಕರಿಸಲು ನಮೂದಿಸಬೇಕು.
- ಬಳಿಕ ನಿಮ್ಮ ಖಾತೆಗಾಗಿ ಯೂನಿಕ್ ಬಳಕೆದಾರ ಹೆಸರನ್ನು (User Name) ರಚಿಸಿ. ನೀವು ಆಯ್ಕೆ ಮಾಡಿದ ಬಳಕೆದಾರ ಹೆಸರನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆಯೇ ಎಂದು ನಿಮ್ಮ ಅಪ್ಲಿಕೇಶನ್ ನಿಮಗೆ ತಿಳಿಸುತ್ತದೆ. ಅದು ಈಗಾಗಲೇ ತೆಗೆದುಕೊಳ್ಳಲಾಗಿದ್ದರೆ ಬೇರೆ ಹೆಸರು ಟ್ರೈ ಮಾಡಿ

- ಈ ಹಂತಗಳನ್ನು ಮಾಡಿದ ನಂತರ, ನಿಮ್ಮ ಖಾತೆಯನ್ನು ರಚಿಸಲಾಗುತ್ತದೆ. ಈಗ, ನೀವು ಮಾಡಬೇಕಾಗಿರುವುದು ನಿಮ್ಮ ಅಗತ್ಯ ದಾಖಲೆಗಳನ್ನು ಅಪ್ಲಿಕೇಶನ್‌ಗೆ ತರುವುದು.
ನಿಮ್ಮ ದಾಖಲೆಗಳನ್ನು ಪಡೆಯುವುದು ಹೇಗೆ?
- ಮುಖ್ಯ ಪುಟದಲ್ಲಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಮತ್ತು ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರದಂತಹ ಸಾಮಾನ್ಯವಾಗಿ ಪಡೆಯುವ ಡಾಕ್ಯುಮೆಂಟ್‌ಗಳಿಗೆ ನೀವು ತ್ವರಿತ ಶಾರ್ಟ್‌ಕಟ್‌ಗಳನ್ನು ಪಡೆಯುತ್ತೀರಿ. ನೀವು ಇವುಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದು ಮತ್ತು ಇವುಗಳನ್ನು ಪಡೆದುಕೊಳ್ಳಲು ಸೂಚನೆಗಳನ್ನು ಅನುಸರಿಸಿ.
- ಸೂಚನೆಗಳು ಸಾಮಾನ್ಯವಾಗಿ ನಿಮ್ಮ ಡಾಕ್ಯುಮೆಂಟ್‌ಗಳನ್ನು ಪ್ರವೇಶಿಸಲು ಅಪ್ಲಿಕೇಶನ್‌ಗೆ ಸಮ್ಮತಿ ನೀಡುವುದು ಮತ್ತು ನಿಮ್ಮನ್ನು ಪರಿಶೀಲಿಸಲು ಓಟಿಪಿಯನ್ನು ನಮೂದಿಸುವುದನ್ನು ಒಳಗೊಂಡಿರುತ್ತದೆ.
- ಮುಖ್ಯ ಪುಟದಲ್ಲಿ ಪಟ್ಟಿ ಮಾಡದ ಕೆಲವು ಡಾಕ್ಯುಮೆಂಟ್‌ಗಳನ್ನು ನೀವು ಹುಡುಕುತ್ತಿದ್ದರೆ, ಹತ್ತನೇ ತರಗತಿ ಅಥವಾ ಪಿಯುಸಿ ಮಾರ್ಕ್‌ಶೀಟ್‌ಗಳಂತಹ ಹೆಚ್ಚಿನ ಆಯ್ಕೆಗಳನ್ನು ಪರಿಶೀಲಿಸಲು "Explore More" ಬಟನನ್ನು ಕ್ಲಿಕ್ ಮಾಡಿ. ನಿಮ್ಮ ದಾಖಲೆಗಳನ್ನು ಮರುಪಡೆಯುವ ವಿಧಾನವು ಮೇಲೆ ತಿಳಿಸಿದಂತೆಯೇ ಇರುತ್ತದೆ.
- ನಿಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲಿಕೇಶನ್‌ನಲ್ಲಿ ಪಡೆದ ನಂತರ, ಅಗತ್ಯವಿದ್ದಾಗ ನೀವು ಅವುಗಳನ್ನು ನೇರವಾಗಿ ಅಪ್ಲಿಕೇಶನ್‌ನಿಂದ ಡಿಜಿಟಲ್ ರೂಪದಲ್ಲಿ ಬಳಸಬಹುದು, ಅಂದರೆ ನೀವು ಪ್ರಯಾಣದಲ್ಲಿರುವಾಗ ನಿಮ್ಮ ಭೌತಿಕ (Hard Copy) ದಾಖಲೆಗಳನ್ನು ಮನೆಯಲ್ಲಿಯೇ ಬಿಡಬಹುದು.
ಇದನ್ನೂ ಓದಿ:ಇನ್ನುಮುಂದೆ ಆನ್‌ಲೈನಲ್ಲೇ ಜಮೀನು ಸ್ಕೆಚ್, ನಕ್ಷೆ ಲಭ್ಯ!
