ಫೇಸ್‌ಬುಕ್‌ ಖಾತೆ ಹ್ಯಾಕ್‌ ಆದಾಗ ನಿಮ್ಮ ಚಿತ್ರಗಳು, ಸಂದೇಶಗಳು ಹಾಗೂ ನಿಮ್ಮ ವೈಯಕ್ತಿಕ ಮಾಹಿತಿ ವಂಚಕರ ಪಾಲಾಗುವ ಸಾಧ್ಯತೆಗಳಿರುತ್ತದೆ . ನಿಮ್ಮ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದ್ದರೆ ನೀವು ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ

ನಿಮ್ಮ ಫೇಸ್‌ಬುಕ್ ಖಾತೆಯು ನಿಮ್ಮ ವೈಯಕ್ತಿಕ ಸ್ಥಳವಾಗಿದ್ದು, ನಿಮ್ಮ ಅನುಮತಿಯಿಲ್ಲದೆ ಇತರರು ಪ್ರವೇಶ ಪಡೆಯುವುದು ಅಪರಾಧವಾಗಿದೆ. ಆದಾಗ್ಯೂ, ಫೇಸ್‌ಬುಕ್ ಖಾತೆಗಳು ಹ್ಯಾಕ್ ಆಗುವ ಪ್ರಕರಣಗಳು ಸಾಮಾನ್ಯವಲ್ಲ. ಫೇಸ್‌ಬುಕ್ ಬಳಕೆದಾರರು ತಮ್ಮ ಖಾತೆಯನ್ನು ಹ್ಯಾಕ್‌ ಆಗಿದೆ ಎಂದು ಹೇಳುವ ಪೋಸ್ಟ್‌ಗಳನ್ನು ನೀವು ಹಲವಾರು ಬಾರಿ ನೋಡಿರಬಹುದು. ಆದರೆ ಫೇಸ್‌ಬುಕ್ ಹ್ಯಾಕ್ ಆದಾಗ ತಕ್ಷ ಏನು ಮಾಡಬೇಕೆಂದು ಹಲವರಿಗೆ ತೋಚುವುದಿಲ್ಲ. ಫೇಸ್‌ಬುಕ್‌ ಖಾತೆ ಹ್ಯಾಕ್‌ ಆದಾಗ ನಿಮ್ಮ ಚಿತ್ರಗಳು, ಸಂದೇಶಗಳು ಹಾಗೂ ನಿಮ್ಮ ವೈಯಕ್ತಿಕ ಮಾಹಿತಿ ವಂಚಕರ ಪಾಲಾಗುವ ಸಾಧ್ಯತೆಗಳಿರುತ್ತವೆ. ನಿಮ್ಮ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದ್ದರೆ ನೀವು ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ. ನಿಮ್ಮ ಖಾತೆಯನ್ನು ಮರಳಿ ಪಡೆಯುಲು ಹಲವು ಮಾರ್ಗಗಳಿವೆ.

ಯಾರಾದರೂ ಫೇಸ್‌ಬುಕ್ ಖಾತೆಗೆ ಪ್ರವೇಶವನ್ನು ಪಡೆಯುವ ಏಕೈಕ ಮಾರ್ಗವೆಂದರೆ ನಿಮ್ಮ ಪಾಸ್‌ವರ್ಡ್ ಊಹಿಸುವುದು ಅಥವಾ ಅದನ್ನು ಪಡೆಯಲು ಅವರ ಹ್ಯಾಕಿಂಗ್ ಕೌಶಲ್ಯಗಳನ್ನು ಬಳಸುವುದು. ನಿಮ್ಮ ಖಾತೆ ಹ್ಯಾಕ್‌ ಆಗಿದೆ ಎಂದು ತಿಳಿಯುವ ವಿವಿಧ ವಿಧಾನಗಳಿವೆ. ಫೇಸ್‌ಬುಕ್‌ನ ಮಾತಿನಲ್ಲಿ ಹೇಳುವುದಾದರೆ, ನಿಮ್ಮ ಇಮೇಲ್ ಅಥವಾ ಪಾಸ್‌ವರ್ಡ್ ಬದಲಾಗಿದ್ದರೆ, ನಿಮ್ಮ ಹೆಸರು ಅಥವಾ ಜನ್ಮದಿನ ಬದಲಾಗಿದ್ದರೆ, ನಿಮಗೆ ಪರಿಚಯವಿಲ್ಲದವರಿಗೆ ಸ್ನೇಹಿತರ ವಿನಂತಿಗಳನ್ನು ಕಳುಹಿಸಿದ್ದರೆ, ನೀವು ಬರೆಯದ ಸಂದೇಶಗಳನ್ನು ಇತರರಿಗೆ ರವಾನೆಯಾಗಿದ್ದರೆ ಮತ್ತು ಪೋಸ್ಟ್‌ಗಳನ್ನು ಕಳುಹಿಸಿದ್ದರೆ ನೀಮ್ಮ ಖಾತೆ ಹ್ಯಾಕಾಗಿರುವ ಸಾಧ್ಯತೆಯಿರುತ್ತದೆ. 

ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ತಿಳಿದ ನಂತರ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಪಾಸ್‌ವರ್ಡ್ ಬದಲಾಯಿಸುವುದು.‌

  • "Settings and Privacy" ಗೆ ಹೋಗಿ.
  • "Password and Security" ಆಯ್ಕೆಮಾಡಿ
  • ತದನಂತರ "Change Password" ಕ್ಲಿಕ್ ಮಾಡಿ. ಪಾಸವರ್ಡ್‌ ಬದಲಾಯಿಸಲು ನಿಮ್ಮ ಈ ಹಿಂದಿನ ಪಾಸವರ್ಡ್‌ ನೆನಪಿನಲ್ಲಿಡುವುದು ಅತ್ಯಗತ್ಯ

ಇದನ್ನೂ ಓದಿಭಾರತೀಯ ಮಕ್ಕಳು ಆನ್‌ಲೈನ್ ವಂಚನೆ ಬಲಿಯಾಗುವ ಸಾಧ್ಯತೆ ಹೆಚ್ಚು: McAfee 2022 ವರದಿ

ಅದೇ "Password and Security" ಪುಟದಲ್ಲಿ, ನೀವು ಲಾಗ್ ಇನ್ ಆಗಿರುವ ಸಾಧನಗಳ ಪಟ್ಟಿಯನ್ನು ಸಹ ನೀವು ಪರಿಶೀಲಿಸಬಹುದು. "Where You’re Logged in" ಎಂಬ ಶೀರ್ಷಿಕೆಯ ಪಟ್ಟಿಯ ಮೇಲೆ ಕ್ಲಿಕ್ ಮಾಡಿ. ನಿಮಗೆ ಸಂಬಂಧಿಸದ ಸಾಧನ ಅಥವಾ ನೀವು ಬಳಸದ ಸಿಸ್ಟಮ್ ಇದೆ ಎಂದು ನೀವು ಕಂಡುಕೊಂಡರೆ, ನೀವು ತಕ್ಷಣ ನಿಮ್ಮ ಖಾತೆಯನ್ನು ಆ ಸಿಸ್ಟಮ್‌ನಿಂದ ತೆಗೆದುಹಾಕಬೇಕು. 

  • Suspicious log in ಮೇಲೆ ಕ್ಲಿಕ್ ಮಾಡಿ
  • Secure Account ಆಯ್ಕೆಮಾಡಿ
  • ನಂತರ ನಿಮ್ಮ ಖಾತೆಯನ್ನು ಸುರಕ್ಷಿತಗೊಳಿಸಲು ಫೇಸ್‌ಬುಕ್ ತೋರಿಸುವ ಹಂತಗಳನ್ನು ಅನುಸರಿಸಿ.

ಅಲ್ಲದೇ ನೀವು ಬೆಂಬಲ ಪುಟದ (Support Page) ಮೂಲಕ ಫೇಸ್‌ಬುಕ್‌ ತಂಡವನ್ನು ಸಂಪರ್ಕಿಸಬಹುದು

  • Password and Security ಪುಟಕ್ಕೆ ಹೋಗಿ
  • "Get Help" ಮೇಲೆ ಕ್ಲಿಕ್ ಮಾಡಿ
  • ನಂತರ ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ವರದಿ (Report) ಮಾಡಿ

ಇದನ್ನೂ ಓದಿ:ಮಾರಕ Google Chrome ಬಗ್ಸ್ ನಿವಾರಣೆ ಹೇಗೆ? ಇಲ್ಲಿವೆ ಟಿಪ್ಸ್

ನಿಮ್ಮ ಫೇಸ್‌ಬುಕ್ ಖಾತೆಯಿಂದ ಹ್ಯಾಕರ್ ಲಾಗ್ ಔಟ್ ಮಾಡಿದ್ದರೆ, Facebook.com/ hacked ಗೆ ಹೋಗಿ. ನಿಮ್ಮ ಫೇಸ್‌ಬುಕ್ ಖಾತೆಗೆ ಲಿಂಕ್ ಮಾಡಲಾದ ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. ನೀವು ನಮೂದಿಸಿದ ಸಂಖ್ಯೆಯು ನಿಮ್ಮ ನೋಂದಾಯಿತ ಸಂಖ್ಯೆಯೊಂದಿಗೆ ಹೊಂದಾಣಿಕೆಯಾದರೆ, ನಿಮ್ಮ ಫೇಸ್‌ಬುಕ್ ಖಾತೆಗೆ ಪ್ರವೇಶವನ್ನು ಮರಳಿ ಪಡೆಯಲು ಫೇಸ್‌ಬುಕ್‌ ನಿಮಗೆ ಸಹಾಯ ಮಾಡುತ್ತದೆ.