ಪಾಸ್‘ವರ್ಡ್ ನಮ್ಮ ದೈನಂದಿನ ಹಲವು ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ವಹಿಸುವ ಅಂಶ. ಬ್ಯಾಂಕಿಂಗ್ ವ್ಯವಹಾರಗಳು, ವೈಯಕ್ತಿಕ ಮೇಲ್, ಸಾಮಾಜಿಕ ಜಾಲತಾಣಗಳು ಹೀಗೆ ಪ್ರತಿಯೊಂದರಲ್ಲೂ ಪಾಸ್‘ವರ್ಡ್ ಇದ್ದೇ ಇರುತ್ತೆ. ಆದರೆ, ಇತ್ತೀಚಿನ ದಿನಗಳಲ್ಲಿ ನೀವು ಎಷ್ಟೇ ಕಠಿಣ ಪಾಸ್‘ವರ್ಡ್ ಹಾಕಿದರೂ ಹ್ಯಾಕ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆಗಂತುಕನೊಬ್ಬ ನಿಮ್ಮ ವೈಯಕ್ತಿಕ ಮಾಹಿತಿಯನ್ನ ಕದ್ದು ಮಾಡಬಾರದ ಅವಾಂತರ ಮಾಡಿಬಿಡುತ್ತಾನೆ. ಇದನ್ನ ತಡೆಯಲು ಇರುವ ಏಕೈಕ ಮಾರ್ಗವೆಂದರೆ ನಿಮ್ಮ ಪಾಸ್ ವರ್ಡ್ ಸ್ಟ್ರಾಂಗ್ ಮಾಡುವುದು.. ಹಾಗಾದರೆ, ಪಾಸ್‘ವರ್ಡ್ ಸ್ಟ್ರಾಂಗ್ ಮಾಡೋದು ಹೇಗೆ..? ಎಂಬುದಕ್ಕೆ ಇಲ್ಲಿವೆ ಉಪಯುಕ್ತ ಟಿಪ್ಸ್

1. ನಿಮ್ಮ ಯಾವುದೇ ಪಾಸ್ ವರ್ಡ್ ಆದರೂ ಉದ್ದವಿರಲಿ, ಕನಿಷ್ಠ 8 ಪದಗಳಾದರೂ ಇರಲಿ. 14 ಪದಗಳು ಉತ್ತಮ 25 ಪದಗಳಿದ್ದರೆ ಅತ್ಯುತ್ತಮ.
2. ಪಾಸ್ ವರ್ಡ್‘ನಲ್ಲಿ ಪದಗಳು, ಸಂಖ್ಯೆಗಳು, ಚಿಹ್ನೆಗಳು ಹೀಗೆ ಹಲವು ತರಹದ ಕಾಂಬಿನೇಶನ್ ಇರಲಿ.
3. ಡಿಕ್ಶನರಿ ಪದಗಳನ್ನ ಪಾಸ್ ವರ್ಡ್ ಆಗಿ ಬಳಸಬೇಡಿ. ಪಾಸ್ ವರ್ಡ್ ಮಧ್ಯದಲ್ಲಿ ಸಂಖ್ಯೆಗಳನ್ನ ಮಿಕ್ಸ್ ಮಾಡಿ.
4. ಸಬ್‘ಸ್ಟಿಟ್ಯೂಟ್ ಕ್ಯಾರೆಕ್ಟರ್‘ಗಳನ್ನ ಬಳಸಿ, ಅಂದರೆ O ಪದದ ಬದಲಿಗೆ ಜೀರೋ ಬಳಸಿ s ಪದದ ಬದಲು ಡಾಲರ್ ಚಿಹ್ನೆ ಬಳಸಿ, ಹೀಗೆ ಪರ್ಯಾಯ ಅದೇ ಪದವನ್ನ ಹೋಲುವ ಸಂಖ್ಯೆಯನ್ನ ಪರ್ಯಾಯವಾಗಿ ಬಳಸಿ.
5. ಸುಲಭವಾಗಿ ಗುರ್ತಿಸಬಲ್ಲ ಪದಗಳನ್ನ ಬಳಸಬೇಡಿ. ನಿಮ್ಮ ಪ್ರೀತಿಯ ಪಾತ್ರರ ಹೆಸರು, ಕಂಪನಿ ಹೆಸರು, ಜನ್ಮ ಸ್ಥಳ ಹೀಗೆ.. ನಿಮ್ಮ ಪಾಸ್ ವರ್ಡ್‘ಗೆ ಯಾವುದೇ ನಿಮಗೆ ಸಂಬಂಧಿತ ಸುಲಭವಾದ ವಿಷಯದ ಹೆಸರುಗಳನ್ನ ಬಳಸಬೇಡಿ.
6. ಒಂದು ಅಕೌಂಟ್‘ಗೆ ನೀಡಿದ ಪಾಸ್ ಮರ್ಡ್ ಅನ್ನ ಮತ್ತೊಂದು ಅಕೌಂಟ್‘ಗೆ ಬಳಸಬೇಡಿ. ಒಂದು ಅಕೌಂಟ್‘ನ ಪಾಸ್ ವರ್ಡ್ ಮತ್ತೊಂದು ಅಕೌಂಟ್‘ನ ಪಾಸ್ ವರ್ಡ್ ಭಿನ್ನವಾಗಿರಲಿ.