Honorನಿಂದ 2 ಹೊಸ ಫೋನ್‌; ಒಂದಲ್ಲ ಎರಡಲ್ಲ ನಾಲ್ಕು ನಾಲ್ಕು ಕ್ಯಾಮೆರಾಗಳು!

ಮೊಬೈಲ್ ಕ್ಷೇತ್ರದಲ್ಲಿ ಚೀನಾ ಕಂಪನಿಗಳದ್ದೇ ಹವಾ. Honor ಕಂಪನಿ 2 ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಯಾವುವು ಆ ಫೋನ್ ಗಳು? ಹೇಗಿದೆ? ಬೆಲೆ ಎಷ್ಟು? ಇಲ್ಲಿದೆ ವಿವರ....
 

Honor 20 Honor 20 Lite Launched Price Specifications

ಇತ್ತೀಚೆಗೆ ಮೊಬೈಲ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ Honor ಕಂಪನಿಯು ಹೊಸ ಸ್ಮಾರ್ಟ್‌ಪೋನ್‌ಗಳನ್ನು ಬಿಡುಗಡೆ ಮಾಡಿದೆ. 

ಲಂಡನ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ Huawei ಅಂಗಸಂಸ್ಥೆಯಾಗಿರುವ Honor ಕಂಪನಿಯು Honor 20 ಹಾಗೂ Honor 20 Lite ನ್ನು ಮಾರುಕಟ್ಟೆಗೆ ಪರಿಚಯಿಸಿದೆ.

Honor 20 

ಡ್ಯುಯಲ್ ಸಿಮ್ ಕಾರ್ಡ್ ಸೌಲಭ್ಯ ಇರುವ Honor 20, ಆ್ಯಂಡ್ರಾಯಿಡ್ Pie ಆಪರೇಟಿಂಗ್ ಸಿಸ್ಟಮನ್ನು ಹೊಂದಿದೆ. ಪಂಚ್ ಹೋಲ್ ವಿನ್ಯಾಸವಿರುವ 6.26 ಇಂಚಿನ ಫುಲ್HD ಪರದೆ, 19.5:9  ಆ್ಯಸ್ಪೆಕ್ಟ್ ರೇಶ್ಯೋ, HiSilicon Kirin 980 ಪ್ರೊಸೆಸರ್ ಮತ್ತು 6GB RAMನ್ನು ಹೊಂದಿದೆ.

ಉತ್ತಮ ಗುಣಮಟ್ಟದ ಚಿತ್ರ/ವಿಡಿಯೋಗಳನ್ನು ಸೆರೆಹಿಡಿಯಲು Honor 20 ಹಿಂಬದಿಯಲ್ಲಿ 48, 16, ಎರಡು 2 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಹೊಂದಿಯಲ್ಲದೇ ಸೆಲ್ಫಿಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಈ ಫೋನ್ ಒಟ್ಟು 4 ಕ್ಯಾಮೆರಾಗಳನ್ನು ಹೊಂದಿದೆ.

ಇದನ್ನೂ ಓದಿ | ಪಾಪ್‌ ಅಪ್‌, ಸ್ಲೈಡಿಂಗ್‌ ಕ್ಯಾಮೆರಾ ಇರುವ 2019ರ ಸ್ಪೆಷಲ್‌ ಮೊಬೈಲ್‌ಗಳು

128 GB ಇನ್‌ಬಿಲ್ಟ್ ಸ್ಟೋರೆಜ್ ಸಾಮರ್ಥ್ಯವನ್ನು Honor 20 ಹೊಂದಿದೆ. ಆದರೆ, ಇದನ್ನು ಮೈಕ್ರೋ SD ಮೂಲಕ ವಿಸ್ತರಿಸಲಾಗದು. ಅಂಚಿನಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಹೊಂದಿರುವುದು ಈ ಫೋನ್ ವಿಶೇಷ.  

3750mAh ಬ್ಯಾಟರಿ ಸಾಮರ್ಥ್ಯವಿರುವ, 30 ನಿಮಿಷಗಳಲ್ಲಿ 50 ಶೇ. ಬ್ಯಾಟರಿ ಚಾರ್ಜ್ ಆಗುವ 22.5W ಸೂಪರ್ ಚಾರ್ಜ್ ತಂತ್ರಜ್ಞಾನ ಹೊಂದಿರುವ Honor 20 ಬರೇ 174 ಗ್ರಾಂ ಭಾರ!

Honor 20 Lite

6.21ಇಂಚಿನ ಫುಲ್ HD ಪರದೆ,19.5:9 ಆ್ಯಸ್ಪೆಕ್ಟ್ ರೇಶ್ಯೋ, HiSilicon Kirin 710 ಪ್ರೊಸೆಸರ್, ಮತ್ತು 4GB RAM ಇವಿಷ್ಟು Honor 20 Liteನ ಸ್ಪೆಸಿಫಿಕೇಶನ್ಸ್.

ಈ ಫೋನಿನ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟಪ್ ಇದೆ.  ಮುಖ್ಯ ಕ್ಯಾಮೆರಾ  24 ಮೆಗಾಪಿಕ್ಸೆಲ್‌ ಸಾಮರ್ಥ್ಯದ್ದಾಗಿದ್ದರೆ, ಇನ್ನುಳಿದ 2 ಕ್ಯಾಮೆರಾಗಳು 8 ಮತ್ತು 2 ಮೆಗಾಪಿಕ್ಸೆಲ್ ಸಾಮರ್ಥ್ಯದ್ದಾಗಿವೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನಾಧಾರಿತ 32 ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಈ ಫೋನಿನ ಇನ್ನೊಂದು ವಿಶೇಷತೆ.Honor 20 Lite ಕೂಡಾ 128GB ಇನ್‌ಬಿಲ್ಟ್ ಸ್ಟೋರೆಜ್ ಹೊಂದಿದ್ದು, ಹಿಂಬದಿಯಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಇದೆ.

ಬರೇ 164 ಗ್ರಾಂ ಭಾರ ಇರುವ Honor 20 Lite  3400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.  

ಇದನ್ನೂ ಓದಿ | ಪ್ರಮುಖ ಫೀಚರ್‌ಗೆ ಕತ್ತರಿ ಹಾಕಿದ WhatsApp!

ಬೆಲೆ:
ಲಂಡನ್‌ನಲ್ಲಿ ಬಿಡುಗಡೆಯಾದ Honor 20 6GB RAM + 128GB  ಫೋನ್ ಬೆಲೆ 499 ಯೂರೋ, ಅಂದರೆ ಭಾರತದ ಸುಮಾರು 38800 ರೂ. ಬಿಳಿ, ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಈ ಫೋನ್ ಲಭ್ಯವಿದೆ.

ಯೂರೋಪ್‌ನಲ್ಲಿ Honor 20 Lite ಬೆಲೆ 299 ಯೂರೋ, ಭಾರತದ ಸುಮಾರು 23200 ರೂ. ಕಪ್ಪು, ನೀಲಿ ಮತ್ತು ಕೆಂಪು ಬಣ್ಣಗಳಲ್ಲಿ ಲಭ್ಯವಿದೆ.

ಆದರೆ ಭಾರತದಲ್ಲಿ ಬೆಲೆ ಎಷ್ಟಾಗಿರಲಿದೆ ಎಂಬ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಇನ್ನೂ ಪ್ರಕಟಿಸಿಲ್ಲ. ಜೂನ್ 11ಕ್ಕೆ ಭಾರತಕ್ಕೆ ಈ ಫೋನ್‌ಗಳು ಎಂಟ್ರಿ ನೀಡುವ ನಿರೀಕ್ಷೆ ಇದೆ. 

Latest Videos
Follow Us:
Download App:
  • android
  • ios