ಮತ್ತೆ ಮತ್ತೆ ಕಾಡುತ್ತಿದೆ ಏಲಿಯನ್ ದಾಳಿಯ ಭೀತಿ| ಮನುಷ್ಯನ ನಿದ್ದೆಗಡೆಸಿದ ನಿಗೂಢ ಹಾರುವ ತಟ್ಟೆಗಳು| ಏಲಿಯನ್ ಶಿಪ್ ಸೌರಮಂಡಲಕ್ಕೆ ಬಂದಾಗಿದೆ ಅಂತಿದ್ದಾರೆ ಅವಿ ಲೋಬ್| ಹಾವರ್ಡ್ ವಿವಿ ಖಗೋಳ ವಿಜ್ಞಾನಿಯ ಎಚ್ಚರಿಕೆ ಗಂಭೀರವಾಗಿ ಪರಿಗಣಿಸಬೇಕೆ?| ಗುರು ಗ್ರಹದ ಸುತ್ತ ತಿರುಗುತ್ತಿದೆಯಂತೆ ಏಲಿಯನ್ ಶಿಪ್| ಓಮುವಾಮುವಾ ಕ್ಷುದ್ರಗ್ರಹ ಅಲ್ವಂತೆ, ಏಲಿಯನ್ ಶಿಪ್ ಬಿಡಿ ಭಾಗವಂತೆ
ಫೋಟೋ ಕೃಪೆ: ದಿ ವಾಷಿಂಗ್ಟನ್ ಪೋಸ್ಟ್
ವಾಷಿಂಗ್ಟನ್(ಫೆ.05): ನಾವು ಏಲಿಯನ್ ಶಿಪ್ ಅಥವಾ ಪರಗ್ರಹ ಜೀವಿಗಳ ಯಾನವನ್ನು ನೋಡಿದ್ದಾಗಿ ವಾದ ಮಂಡಿಸುವವರು ಒಬ್ಬಿಬ್ಬರಲ್ಲ. ನೀಲಿ ಆಗಸದಲ್ಲಿ ಹಾರುವ ತಟ್ಟೆ ನೋಡಿದ ಕತೆಗಳು ವಿಶ್ವದ ಅನೇಕ ಭಾಗಗಲ್ಲಿ ಆಗಾಗ ಕೇಳಿ ಬರುತ್ತವೆ.
ಸಾಮಾನ್ಯ ಜನ ಈ ರೀತಿಯ ವಾದ ಮಂಡಿಸಿದರೆ ನಿರ್ಲಕ್ಷ್ಯ ಮಾಡಬಹುದೆನೋ?. ಆದರೆ ಖಗೋಳಶಾಸ್ತ್ರ ಶಾಖೆಯ ಬುದ್ದಿ ಜೀವಿಗಳೇ ಇಂತದ್ದೊಂದು ವಾದ ಮಂಡಿಸತೊಡಗಿದರೆ ಅದನ್ನು ವಿಶ್ವ ಗಂಭೀರವಾಗಿ ಪರಿಗಣಿಸಲೇಬೇಕು.
ಅದರಂತೆ ಅನ್ಯಗ್ರಹ ಜೀವಿಯ ಯಾನವೊಂದು ನಮ್ಮ ಸೌರಮಂಡಲದೊಳಗೆ ಪ್ರವೇಶ ಮಾಡಿದ್ದು, ಗುರು ಗ್ರಹದ ಸುತ್ತಮುತ್ತ ಈ ಯಾನ ತಿರುಗಾಡುತ್ತಿದೆ ಎಂದು ಹಾವರ್ಡ್ ವಿವಿಯ ಖ್ಯಾತ ಖಗೋಳಶಾಸ್ತ್ರಜ್ಞರೊಬ್ಬರು ಎಚ್ಚರಿಸಿದ್ದಾರೆ.
ಹೌದು, ಪರಗ್ರಹಿ ಯಾನವೊಂದು ಸೌರಮಂಡಲಕ್ಕೆ ಲಗ್ಗೆ ಇಟ್ಟಿದ್ದು, ಗುರು ಗ್ರಹದ ಸುತ್ತ ತಿರುಗಾಡುತ್ತಿದೆ ಎಂದು ಹಾವರ್ಡ್ ವಿವಿ ವಿಜ್ಞಾನಿ ಅವಿ ಲೋಬ್ ವಾದ ಮಂಡಿಸಿದ್ದಾರೆ.
ತಮ್ಮ ವಾದಕ್ಕೆ ಪುಷ್ಠಿಯಾಗಿ ಇತ್ತೀಚೆಗೆ ಸೌರಮಂಡಲ ಪ್ರವೇಶಿಸಿದ ಸೌರ ಮಂಡಲದ ಹೊರಗಿನ ಕ್ಷುದ್ರಗ್ರಹಗಳತ್ತ ಬೊಟ್ಟು ಮಾಡಿರುವ ಲೋಬ್, ಪರಗ್ರಹ ಜೀವಿಗಳ ತಮ್ಮ ಆಗಮನವನ್ನು ಈ ರೀತಿಯಾಗಿ ಘೋಷಿಸುತ್ತಿವೆ ಎಂದು ಹೇಳಿದ್ದಾರೆ.
ಇತ್ತೀಚಿಗೆ ಓಮುವಾಮುವಾ ಎಂಬ ಹೆಸರಿನ ಸೌರಮಂಡಲದ ಹೊರಗಿನ ಕ್ಷುದ್ರಗ್ರಹವೊಂದು ಸೌರಮಂಡಲದ ಒಳಗೆ ಪ್ರವೇಶ ಮಾಡಿತ್ತು. ಈ ಕುರಿತು ಅಧ್ಯಯನ ನಡೆಸಿದ್ದ ನಾಸಾ, ಅದರ ವೇಗ ಮತ್ತು ಗಾತ್ರದ ಕುರಿತು ಅಚ್ಚರಿ ವ್ಯಕ್ತಪಡಿಸಿತ್ತು.
ಆದರೆ ಲೋಬ್ ಅದನ್ನು ಕ್ಷುದ್ರಗ್ರಹ ಅಲ್ಲ ಎನ್ನುತ್ತಿದ್ದಾರೆ. ಅದು ಏಲಿಯನ್ ಶಿಪ್‌ವೊಂದರ ಬಿಡಿ ಭಾಗವಾಗಿದ್ದು, ಪರಗ್ರಹ ಯಾನ ಸೌರಮಂಡಲಕ್ಕೆ ಬಂದಾಗಿದೆ ಎಂದು ಎಚ್ಚರಿಸಿದ್ದಾರೆ.

ಆದರೆ ಮುಖ್ಯ ಧಾರೆಯ ವಿಜ್ಞಾನಿಗಳು ಲೋಬ್ ವಾದವನ್ನು ತಿರಸ್ಕರಿಸಿದ್ದು, ಇದು ಮತ್ತೊಂದು ನಕ್ಷತ್ರ ವ್ಯವಸ್ಥೆಯಿಂದ ಬಂದ ಕ್ಷುದ್ರಗ್ರಹವನ್ನು ಕಂಡು ಹಿಡಿದ ವಿಜ್ಞಾನಿಗಳ ತಂಡಕ್ಕೆ ಮಾಡುತ್ತಿರುವ ಅಪಮಾನ ಎಂದು ಆಪಾದಿಸಿದ್ದಾರೆ.
