ನವದೆಹಲಿ[ಜು.25]: ರಿಲಯನ್ಸ್‌ ಜಿಯೋಗೆ ಅಗತ್ಯವಿರುವ ಅಂತರ್‌ ಸಂಪರ್ಕ ವ್ಯವಸ್ಥೆ ಒದಗಿಸದೇ ಲೋಪ ಎಸಗಿದ ಪ್ರಕರಣದಲ್ಲಿ ಏರ್‌ಟೆಲ್‌, ವೊಡಾಫೋನ್‌ ಐಡಿಯಾ ನೆಟ್‌ವರ್ಕ್ಗಳಿಗೆ 3050 ಕೋಟಿ ರು. ದಂಡ ವಿಧಿಸುವ ಪ್ರಸ್ತಾವನೆಗೆ ಡಿಜಿಟಲ್‌ ಕಮ್ಯೂನಿಕೇಷನ್ಸ್‌ ಕಮಿಷನ್‌(ಡಿಸಿಸಿ) ಅನುಮೋದನೆ ನೀಡಿದೆ.

ಏರ್‌ಟೆಲ್‌ ಹಾಗೂ ವೊಡಾಫೋನ್‌ಗೆ ತಲಾ 1050 ಕೋಟಿ ರು. ಹಾಗೂ ಐಡಿಯಾ ಮೇಲೆ 950 ಕೋಟಿ ರು. ದಂಡ ವಿಧಿಸಲಾಗಿದೆ. ಆದರೆ, ಇದೀಗ ಐಡಿಯಾ ಮತ್ತು ವೊಡಾಫೋನ್‌ ಸಂಸ್ಥೆಗಳು ವಿಲೀನಗೊಂಡಿದ್ದರಿಂದ ಒಟ್ಟಾರೆ 2 ಸಾವಿರ ಕೋಟಿ ರು. ದಂಡದ ಮೊತ್ತವನ್ನು ವೊಡಾಫೋನ್‌ ಕಟ್ಟಿಕೊಡಬೇಕಿದೆ.

2016ರಲ್ಲಿ ತನಗೆ ಅಗತ್ಯವಿರುವಷ್ಟುಇಂಟರ್‌ಕನೆಕ್ಟಿವಿಟಿಯನ್ನು ಏರ್‌ಟೆಲ್‌, ವೊಡಾಫೋನ್‌ ಮತ್ತು ಐಡಿಯಾ ನೀಡುತ್ತಿಲ್ಲ. ಇದರಿಂದ ತನ್ನ ಗ್ರಾಹಕರ ಶೇ.75ಕ್ಕಿಂತ ಹೆಚ್ಚು ಕರೆಗಳು ಸಂಪರ್ಕ ಪಡೆಯುವಲ್ಲಿ ವಿಫಲವಾಗುತ್ತಿವೆ ಎಂದು ಟ್ರಾಯ್‌ಗೆ ರಿಲಯನ್ಸ್‌ ಜಿಯೋ ದೂರಿತ್ತು.