ಸೆಪ್ಟೆಂಬರ್ 4ರಂದು ಉದ್ಘಾಟನೆಗೊಂಡ ಜಿಯೋ ಉಚಿತ ಕರೆಯನ್ನು ನೀಡುವ ಮೂಲಕ ಓರ್'ಟೆಲ್, ವೊಡಾಫೋನ್ ಇತ್ಯಾದಿ ಟೆಲಿಕಾಂ ಸರ್ವಿಸ್ ಕಂಪೆನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ ಈ ಕಂಪೆನಿಗಳು 'ಒಂದು ನಿಮಿಷದ ಒಂದು ಕರೆಗೆ 14 ಪೈಸೆ ತಗುಲುತ್ತದೆ, ಆದರೆ ಜಿಯೋ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್)ದ ನಿಯಮ ಉಲ್ಲಂಘಿಸಿ ತನ್ನ ಗ್ರಾಹಕರಿಗೆ ಉಚಿತ ಕರೆ ಮಾಡುವ ಸೌಲಭ್ಯ ನೀಡಿದೆ ಎಂದು ಜಿಯೋ ವಿರುದ್ಧ ದೂರನ್ನೂ ನೀಡಿದ್ದವು. ಆದರೆ ಇದು ಜಿಯೋ 90 ದಿನಗಳ ಕಾಲ ನೀಡುತ್ತಿರುವ ಪ್ರಮೋಷನಲ್ ಆಫರ್, ಇದು ಟ್ರಾಯ್ ನಿಯಮಕ್ಕನುಗುಣವಾಗಿದೆ ಎಂದು ದೂರುದಾರರಿಗೆ ಸ್ಪಷ್ಟಪಡಿಸಿತ್ತು.
ಬಿಡುಗಡೆಗೊಂಡ ದಿನದಿಂದಲೂ ಒಂದಿಲ್ಲೊಂದು ವಿಚಾರದಿಂದ ಸದ್ದು ಮಾಡುತ್ತಲೇ ಇರುವ ರಿಲಾಯನ್ಸ್ ಜಿಯೋ ಇದೀಗ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡುವ ಸಾಧ್ಯತೆಗಳು ದಟ್ಟವಾಗಿವೆ. ತನ್ನ ವೆಲ್'ಕಂ ಆಫರ್'ನಲ್ಲಿ ಡಿಸೆಂಬರ್ 31 ಉಚಿತ ಕರೆ ಹಾಗೂ ಇಂಟರ್'ನೆಟ್ ಸೇವೆಯನ್ನು ತನ್ನ ಗ್ರಾಹರಿಗೆ ನೀಡಿದ್ದ ಜಿಯೋ ಇದೀಗ ಈ ಆಫರ್'ನ್ನು ಮಾರ್ಚ್ 2017 ರವರೆಗೆ ವಿಸ್ತರಿಸಲಿದೆ ಎಂಬ ವಿಚಾರ ತಿಳಿದು ಬಂದಿದೆ.
ಸೆಪ್ಟೆಂಬರ್ 4ರಂದು ಉದ್ಘಾಟನೆಗೊಂಡ ಜಿಯೋ ಉಚಿತ ಕರೆಯನ್ನು ನೀಡುವ ಮೂಲಕ ಓರ್'ಟೆಲ್, ವೊಡಾಫೋನ್ ಇತ್ಯಾದಿ ಟೆಲಿಕಾಂ ಸರ್ವಿಸ್ ಕಂಪೆನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ ಈ ಕಂಪೆನಿಗಳು 'ಒಂದು ನಿಮಿಷದ ಒಂದು ಕರೆಗೆ 14 ಪೈಸೆ ತಗುಲುತ್ತದೆ, ಆದರೆ ಜಿಯೋ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್)ದ ನಿಯಮ ಉಲ್ಲಂಘಿಸಿ ತನ್ನ ಗ್ರಾಹಕರಿಗೆ ಉಚಿತ ಕರೆ ಮಾಡುವ ಸೌಲಭ್ಯ ನೀಡಿದೆ ಎಂದು ಜಿಯೋ ವಿರುದ್ಧ ದೂರನ್ನೂ ನೀಡಿದ್ದವು. ಆದರೆ ಇದು ಜಿಯೋ 90 ದಿನಗಳ ಕಾಲ ನೀಡುತ್ತಿರುವ ಪ್ರಮೋಷನಲ್ ಆಫರ್, ಇದು ಟ್ರಾಯ್ ನಿಯಮಕ್ಕನುಗುಣವಾಗಿದೆ ಎಂದು ದೂರುದಾರರಿಗೆ ಸ್ಪಷ್ಟಪಡಿಸಿತ್ತು.
ಇಷ್ಟೆಲ್ಲಾ ಸದ್ದು ಮಾಡಿ ಜನರನ್ನು ತಲುಪಿದ ಜಿಯೋ ಇದೀಗ ಮತ್ತೆ ವೆಲ್ ಕಂ ಆಫರ್ ವಿಸ್ತರಿಸಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಡಿಸೆಂಬರ್ 28 ರಂದು ಈ ಕುರಿತಾದ ಅಧಿಕೃತ ಘೋಷಣೆ ಹೊರಬೀಳಲಿದೆ.