ಆ್ಯಂಡ್ರಾಯ್ಡ್ ಫೋನ್‌ಗಳಿಗೆ ಗೂಗಲ್‌ನಿಂದ ಹೊಸ ಸೇವೆ!
ಬರುತ್ತಿದೆ ಆ್ಯಂಡ್ರಾಯ್ಡ್ ಪೈ | 2018ರ ಅಂತ್ಯದಲ್ಲಿ ಗ್ರಾಹಕರಿಗೆ ತಲುಪುವ ಸಾಧ್ಯತೆ
ಇನ್ನೂ ಬಹುತೇಕರ ಮೊಬೈಲ್‌ನಲ್ಲಿ ಆ್ಯಂಡ್ರಾಯ್ಡ್ ಓರಿಯೋ ವರ್ಶನ್ ಇನ್ನೂ ಬಂದಿರಲಿಕ್ಕಿಲ್ಲ. ಆದರೆ ಈಗಾಗಲೇ ಗೂಗಲ್ ತನ್ನ ಸೇವೆಯನ್ನು ಮತ್ತಷ್ಟು ಉತ್ಕೃಷ್ಟವಾಗಿಸುವ ನಿಟ್ಟಿನಲ್ಲಿ ಆ್ಯಂಡ್ರಾಯ್ಡ್ ಪೈ ಎನ್ನುವ ಹೊಸ ಒಎಸ್ ಪರಿಚಯಿಸಲು ಮುಂದಾಗಿದೆ.
ಇದು ಈಗ ಇರುವ ಓರಿಯೋ ವರ್ಶನ್‌ಗಿಂತಲೂ ಹತ್ತು ಪಟ್ಟು ವೇಗ, ಹೆಚ್ಚಿನ ಫೀಚರ್‌ಗಳನ್ನು ಹೊಂದಿರಲಿದೆ.
ದೇಶದಲ್ಲಿ 5G ತಂತ್ರಜ್ಞಾನ ಈಗಷ್ಟೇ ಅಭಿವೃದ್ಧಿ ಹೊಂದುತ್ತಿರುವ ಹೊತ್ತಿನಲ್ಲಿ ಗೂಗಲ್ ತನ್ನ ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿದ್ದು, 2018ರ ಅಂತ್ಯದಲ್ಲಿ ಈ ಸೇವೆ ಗ್ರಾಹಕರಿಗೆ ತಲುಪುವ ಎಲ್ಲಾ ಅವಕಾಶಗಳಿವೆ.