7 ಲಕ್ಷ ಕೆಟ್ಟ App ನ್ನು ಕಿತ್ತೊಗೆದ ಗೂಗಲ್

First Published 1, Feb 2018, 6:36 PM IST
Google Remove 7 lakh App from Playstore
Highlights

ಗೂಗಲ್ ಪ್ಲೇ ಸ್ಟೋರ್ ತೆರೆದರೆ ಅದರಲ್ಲಿ ನಿಮಗೆ ಲಕ್ಷಾಂತರ ಆ್ಯಪ್‌ಗಳು ಸಿಗುತ್ತವೆ. ಅವುಗಳಲ್ಲಿ ವಿಶ್ವಾಸಾರ್ಹ ಆ್ಯಪ್‌ಗಳು ಕೆಲವಷ್ಟೇ ಇರುತ್ತವೆ. ಬಹಳಷ್ಟು ಕೆಟ್ಟ ಆ್ಯಪ್‌ಗಳೇ ಇರುತ್ತವೆ. ಆ ಕೆಟ್ಟ ಆ್ಯಪ್‌ಗಳನ್ನು ನಿರ್ಮೂಲನೆಗೊಳಿಸುವ ಕೆಲಸಕ್ಕೆ ಗೂಗಲ್ ಮುಂದಾಗಿದೆ.

ಬೆಂಗಳೂರು (ಫೆ.01): ಗೂಗಲ್ ಪ್ಲೇ ಸ್ಟೋರ್ ತೆರೆದರೆ ಅದರಲ್ಲಿ ನಿಮಗೆ ಲಕ್ಷಾಂತರ ಆ್ಯಪ್‌ಗಳು ಸಿಗುತ್ತವೆ. ಅವುಗಳಲ್ಲಿ ವಿಶ್ವಾಸಾರ್ಹ ಆ್ಯಪ್‌ಗಳು ಕೆಲವಷ್ಟೇ ಇರುತ್ತವೆ. ಬಹಳಷ್ಟು ಕೆಟ್ಟ ಆ್ಯಪ್‌ಗಳೇ ಇರುತ್ತವೆ. ಆ ಕೆಟ್ಟ ಆ್ಯಪ್‌ಗಳನ್ನು ನಿರ್ಮೂಲನೆಗೊಳಿಸುವ ಕೆಲಸಕ್ಕೆ ಗೂಗಲ್ ಮುಂದಾಗಿದೆ.

ಈಗಾಗಲೇ ಸುಮಾರು 7 ಲಕ್ಷ ಆ್ಯಪ್‌ಗಳನ್ನು ಕಿತ್ತೆಸೆದಿದೆ. ಜೊತೆಗೆ ಒಂದು ಲಕ್ಷ ಡೆವಲಪರ್‌'ಗಳನ್ನೂ ಗೂಗಲ್ ಲಿಸ್ಟ್‌ನಿಂದ ತೆಗೆದು ಹಾಕಲಾಗಿದೆ.

ಮಾಲ್‌'ವೇರ್‌ಗಳಿಂದ ತೊಂದರೆ ಕೊಡುತ್ತಿದ್ದ, ಒಳ್ಳೆಯ ಉದ್ದೇಶ ಹೊಂದಿಲ್ಲದ, ಬಳಕೆದಾರರಿಗೆ ತೊಂದರೆ ನೀಡುವಂತಿದ್ದ ಕಳಪೆ ಆ್ಯಪ್‌ಗಳನ್ನು ತೆಗೆದು ಹಾಕಿರುವುದಾಗಿ ಗೂಗಲ್ ಹೇಳಿಕೊಂಡಿದೆ. ಅನೇಕರು ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ.

 

loader