ಗೂಗಲ್ ಮ್ಯಾಪ್ ಸಿದ್ಧವಾಗಿದ್ದೇ ಬೆಂಗಳೂರಿನಲ್ಲಿ; ಹಿಂದಿನ ಚಾಣಾಕ್ಷ ಬುದ್ಧಿಮತ್ತೆ ಯಾರದು ಗೊತ್ತಾ?

First Published 10, Feb 2018, 1:28 PM IST
Google Map Prepared By Lalitesh Katragadda
Highlights

ನಾವೆಲ್ಲೇ ಓಡಾಡಲಿ, ಪ್ರವಾಸಕ್ಕೆ ಪ್ಲಾನ್  ಮಾಡೋದರಿಂದ ಪಕ್ಕ ದ ಬೀದಿಗೆ ಹೋಗಬೇಕಂದ್ರೂ ನಮಗೆ ‘ಗೂಗಲ್  ಮ್ಯಾಪ್’  ಬೇಕು. ಒಂದು ವಿಳಾಸ ಹುಡುಕಲು ದಿನಗಟ್ಟಲೆ ಸಮಯ ಹಾಳುಮಾಡುತ್ತಿದ್ದವರಿಗೆ ಕ್ಷಣದಲ್ಲಿ ಸರಿಯಾದ ವಿಳಾಸ ತಿಳಿಸುವ ಸೌಲಭ್ಯ ಕಲಿಸಿದ್ದು ಈ ಮ್ಯಾಪ್.  ನ್ಯಾವಿಗೇಟರ್ ಸುಮಾರು 33 ಲಕ್ಷ 87 ಸಾವಿರ ಕಿಲೋಮೀಟರ್ ವಿಸ್ತೀರ್ಣವುಳ್ಳ  ದೇಶದಲ್ಲಿ ಸಂದಿಗೊಂದಿಗಳ ರೋಡ್ ಡೀಟೈಲ್ಸ್ ಅನ್ನು ಕೊಡುವ ಗೂಗಲ್ ಮ್ಯಾಪ್'ನ ಹಿಂದಿನ ಚಾಣಾಕ್ಷ ಬುದ್ಧಿಮತ್ತೆ ಯಾರದು? ಲಲಿತೇಶ್  ಕಾಟ್ರಗಡ್ಡ ಎಂಬ ಐಐಟಿ ಪದವೀಧರನದು! ಬೆಂಗಳೂರಿನ ಗೂಗಲ್  ಆಫೀಸ್'ನಲ್ಲಿ ಕುಳಿತು, ಉಪಗ್ರಹ ಚಿತ್ರಗಳ ಮೂಲಕ ಇಡೀ  ದೇಶದ ಗಲ್ಲಿ ಗಲ್ಲಿಗಳ ನಕ್ಷೆ ಬರೆದರು.

ಬೆಂಗಳೂರು (ಫೆ.10): ನಾವೆಲ್ಲೇ ಓಡಾಡಲಿ, ಪ್ರವಾಸಕ್ಕೆ ಪ್ಲಾನ್  ಮಾಡೋದರಿಂದ ಪಕ್ಕ ದ ಬೀದಿಗೆ ಹೋಗಬೇಕಂದ್ರೂ ನಮಗೆ ‘ಗೂಗಲ್  ಮ್ಯಾಪ್’  ಬೇಕು. ಒಂದು ವಿಳಾಸ ಹುಡುಕಲು ದಿನಗಟ್ಟಲೆ ಸಮಯ ಹಾಳುಮಾಡುತ್ತಿದ್ದವರಿಗೆ ಕ್ಷಣದಲ್ಲಿ ಸರಿಯಾದ ವಿಳಾಸ ತಿಳಿಸುವ ಸೌಲಭ್ಯ ಕಲಿಸಿದ್ದು ಈ ಮ್ಯಾಪ್.  ನ್ಯಾವಿಗೇಟರ್ ಸುಮಾರು 33 ಲಕ್ಷ 87 ಸಾವಿರ ಕಿಲೋಮೀಟರ್ ವಿಸ್ತೀರ್ಣವುಳ್ಳ  ದೇಶದಲ್ಲಿ ಸಂದಿಗೊಂದಿಗಳ ರೋಡ್ ಡೀಟೈಲ್ಸ್ ಅನ್ನು ಕೊಡುವ ಗೂಗಲ್ ಮ್ಯಾಪ್'ನ ಹಿಂದಿನ ಚಾಣಾಕ್ಷ ಬುದ್ಧಿಮತ್ತೆ ಯಾರದು? ಲಲಿತೇಶ್  ಕಾಟ್ರಗಡ್ಡ ಎಂಬ ಐಐಟಿ ಪದವೀಧರನದು! ಬೆಂಗಳೂರಿನ ಗೂಗಲ್  ಆಫೀಸ್'ನಲ್ಲಿ ಕುಳಿತು, ಉಪಗ್ರಹ ಚಿತ್ರಗಳ ಮೂಲಕ ಇಡೀ  ದೇಶದ ಗಲ್ಲಿ ಗಲ್ಲಿಗಳ ನಕ್ಷೆ ಬರೆದರು.

ಅದು 2004 ನೇ ಇಸವಿ, ಇಂಟರ್ನೆಟ್ ವ್ಯವಸ್ಥೆ ಇಂದಿನಷ್ಟು ವೇಗವಾಗಿರಲಿಲ್ಲ. ಇ ದಕ್ಕೆ ತಗುಲುವ ವೆಚ್ಚವೂ ಕಡಿಮೆಯೇನಿರಲಿಲ್ಲ. ಆದರೆ ಲಲಿತೇಶ್ ಮತ್ತು ಅವರ ಗೆಳೆಯರ ರಾತ್ರಿ ಹಗಲ ಪರಿಶ್ರಮದಿಂದ 2008 ರಲ್ಲಿ ಗೂಗ... ಮ್ಯಾಪ್ ಲೋಕಾರ್ಪಣೆಗೊಂಡಿತು. ಅತೀ ಕಡಿಮೆ ವೆಚ್ಚ ದಲ್ಲಿ ತಯಾರಾದ ಅತ್ಯುತ್ತಮ ಗುಣಮಟ್ಟದ ಮ್ಯಾಪ್  ಅನ್ನುವ ಹೆಗ್ಗಳಿಕೆಗೂ ಇ ದು ಪಾತ್ರವಾಯ್ತು. ವಿಶ್ವದ 184 ರಾಷ್ಟ್ರಗಳಿಗೆ ಮಾದರಿಯಾಗಿ ಲಲಿತೇಶ್  ನಿರ್ಮಿತ ಮ್ಯಾಪನ್ನು ಕಳುಹಿಸಲಾಯ್ತು. ಮ್ಯಾಪ್'ನಲ್ಲಿ ಶೇ.95 ರಷ್ಟು  ನಿಖರತೆ, ಗುಣಮಟ್ಟ ಬಯಸುತ್ತಿದ್ದ ಐರೋಪ್ಯ ರಾಷ್ಟ್ರಗಳೂ ಈ ಮ್ಯಾಪ್ ಕಂಡು ಅಚ್ಚರಿಪಟ್ಟವು. ಏಕೆಂ ದರೆ ಶೇ.97 ರಷ್ಟು ಗುಣಮಟ್ಟ, ನಿಖರತೆ ಇದ್ದ  ಮ್ಯಾಪ್ ಇದಾಗಿತ್ತು.

ಯಾರು ಈ ಲಲಿತೇಶ್?

ಲಲಿತೇಶ್ ಕಾಟ್ರಗಡ್ಡ ಅವರ ಊರು ಆಂಧ್ರದ ತನಕು ಎಂಬ ಜಿಲ್ಲಾಕೇಂದ್ರ. ಆದರೆ ಇವರು ಹುಟ್ಟಿ  ಬೆಳೆದದ್ದೆಲ್ಲ ಮುಂಬೈನಲ್ಲಿ. ಇವರ ತಂದೆ ಮುಂಬೈ ಐಐಟಿಯಲ್ಲಿ ಉದ್ಯೋಗಿಯಾಗಿದ್ದರು. ಏರೋಸ್ಪೇಸ್  ಇಂಜಿನಿಯರಿಂಗ್'ನಲ್ಲಿ ಪದವಿ ಹಾಗೂ ಉನ್ನತ ಪದವಿ ಪಡೆ ದ ಲಲಿತೇಶ್  ಫಿಸಿಕ್ಸ್ ಮತ್ತು ಕಂಪ್ಯೂಟರ್'ಗಳೆರಡರ ಮೇಲಿನ ಆಸಕ್ತಿಯಿಂದ ಮುಂದೆ ರೋಬೋಟಿಕ್ಸ್'ನಲ್ಲಿ ಎಂಡಿಎ  ಮಾಡಿದ್ರು.

ಹೇಗೆ ಶುರುವಾಯ್ತು ಗೂಗಲ್ ಮ್ಯಾಪ್?

ಗೂಗಲ್  ಮ್ಯಾಪ್'ನಲ್ಲಿ ಹೊಸ ದಾರಿಯ ಹುಡುಕಾಟ 2015 ನೇ ಇಸವಿ. ಗೂಗಲ್ ಮ್ಯಾಪ್ ಮಾಡುವ ಹೊಣೆಗಾರಿಕೆ ಲಲಿತೇಶ್  ಹೆಗಲೇರಿತ್ತು. ಆ ಜರ್ನಿಯನ್ನು ಅವರು ವಿವರಿಸೋದು ಹೀಗೆ,‘ನಾನು  ಭಾರತಕ್ಕೆ ಬಂದಾಗ ನಾನಿದ್ದ  ಜಾಗದ ಅಕ್ಕ ಪಕ್ಕದ ಮಾರ್ಗಗಳ ಪರಿಚಯವೂ ಇರಲಿಲ್ಲ. ಎಲ್ಲೇ ಹೋಗ ಬೇಕೆಂ ದರೂ ಪರಿಚಿತರಲ್ಲಿ  ದಾರಿ ಕೇಳಿ, ನಾನೇ ಮ್ಯಾಪ್ ರೆಡಿ ಮಾಡಿ ಹೋಗುತ್ತಿದ್ದೆ.  ಆಗ ನನಗೇ ಅನಿಸಿತ್ತು,  ಬೇರೆಯವ್ರಿಗೆ ಈ ನಗರದಲ್ಲಿ ಓಡಾಡುವುದಕ್ಕೆ ನನಗೇ ಒಂದು ಮ್ಯಾಪ್'ನ ಅವಶ್ಯಕತೆ ಇದೆ ಅಂತ. ಆ ನಿಟ್ಟಿನಲ್ಲಿ ಎಲ್ಲರಿಗೂ ಸಹಾಯವಾಗುವ,  ದೇಶದ ಅಭಿವೃದ್ಧಿಗೆ ಪೂರಕವಾದ ಮ್ಯಾಪ್ ಸಿದ್ಧಪಡಿಸಲೇ ಬೇಕೆಂದು  ನಿರ್ಧರಿಸಿದೆ.

ನಾನು ನಕ್ಷೆ ಸಿದ್ಧಪಡಿಸಲು ಜಿಪಿಎಸ್ ಇದ್ದ  ಟ್ರಕ್ ಅನ್ನು ಡ್ರೈವ್  ಮಾಡಿಕೊಂಡು ಹೋದರೂ ಕಿಲೋಮೀಟರ್' ಗೆ 10 ರಿಂ ದ 15 ಡಾಲರ್'ನಷ್ಟು  ಖರ್ಚು ಬೀಳುತ್ತಿತ್ತು. ಇನ್ನು ಇಡೀ  ದೇಶ ಸುತ್ತ ಬೇಕಾದರೆ 45  ದಶಲಕ್ಷ ಡಾಲರ್...! ಇನ್ನು ಐದು ವರ್ಷಕ್ಕೊಮೆ 3/4  ರಸ್ತೆಗಳೆಲ್ಲ ಬದಲಾಗುತ್ತವೆ. ಆಗ ಮತ್ತೆ 45  ಲಕ್ಷ ಡಾಲರ್ ವ್ಯಯಿಸಬೇಕು. ಕೇವಲ ಒಂದು ಮ್ಯಾಪ್'ಗಾಗಿ ಅಷ್ಟೆಲ್ಲ ವ್ಯಯಿಸಲು ಗೂಗಲ್  ಸಿದ್ಧವಿರಲಿಲ್ಲ. ಯಾಹೂವಿನಂಥ ಬೃಹತ್  ಜಾಲತಾಣವನ್ನು ನೆರವು  ನೀಡಲು ಕೋರಿದೆವು. ಆದರೆ ಹಾಕಿದ ಹಣ ವಾಪಾಸ್  ಬರುವ ಯಾವ  ನಿರೀಕ್ಷೆಯೂ ಇಲ್ಲ ದ ಕಾರಣ ಅವರು ಈ ಪ್ರಪೋಸಲ್  ಅನ್ನು ತಿರಸ್ಕರಿಸಿದರು’ ಎನ್ನುವ ಲಲಿತೇಶ್  ಸಹಾಯಕ್ಕೆ ಬಂದದ್ದು  ಉತ್ತಮ ಗುಣಮಟ್ಟದ ಉಪಗ್ರಹ ಚಿತ್ರಗಳು. ತನ್ನ ಗೆಳೆಯ ಸಂಜಯ್ ಜೈನ್  ಅವರೊಂದಿಗೆ 2 ವರ್ಷಗಳ ಸತತ ಪರಿಶ್ರಮದಿಂದ ಮೂಲ ನಕಾಶೆ ಸಿದ್ಧಪಡಿಸುವುದು ಸಾಧ್ಯವಾಯಿತು.

ಈ ಗೂಗಲ್  ಮ್ಯಾಪ್  ಈಗ ಜಗತ್ತಿನ 187 ರಾಷ್ಟ್ರಗಳ 1.5 ಬಿಲಿಯನ್ ಜನರನ್ನು ತಲುಪಿದೆ. ಇಂಗ್ಲೆಂಡ್'ನಂಥ ರಾಷ್ಟ್ರಗಳಲ್ಲಿ ರಕ್ಷಣಾ ಕಾರ್ಯಗಳಿಗೂ ಈ ಮ್ಯಾಪ್  ಮೇಕರ್ ಅನ್ನು ಬಳಸುತ್ತಿದ್ದಾರೆ. ಈ ಕಾರ್ಯ ಯಶಸ್ವಿಯಾದ ಕೂಡಲೇ ಲಲಿತೇಶ್ ಗೂಗಲ್  ತೊರೆದರು. ಈಗ ಕೇಂದ್ರ ಸರ್ಕಾರ ಪಾಲಿಸಿ ಮೇಕಿಂಗ್  ಮತ್ತು ತಂತ್ರಗಾರಿಕೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

loader