ಸರ್ಚ್ ಇಂಜಿನ್ ಗೂಗಲ್ ತನ್ನೊಂದು ಆ್ಯಪ್ ಬಳಸಿದರೆ, ಅದಕ್ಕೆ ಪ್ರತಿಯಾಗಿ ಕ್ಯಾಶ್ ರಿವಾರ್ಡ್ ನೀಡುತ್ತಿದೆ. ಗೂಗಲ್ ಸಪೋರ್ಟ್ ಪೇಜ್‌ನಲ್ಲಿ ನೀಡಿರುವ ಮಾಹಿತಿ ಅನ್ವಯ, ಗೂಗಲ್ ತನ್ನ ವಿಡಿಯೋ ಕಾಲಿಂಗ್ ಆ್ಯಪ್ Duo ಬಳಸಿದರೆ ಹಾಗೂ ಹೊಸ ಗ್ರಾಹಕರನ್ನು ಇನ್ವೈಟ್ ಮಾಡಿದರೆ ಕ್ಯಾಶ್ ರಿವಾರ್ಡ್ ನೀಡುತ್ತಿದ್ದು, ಇದು ನೇರವಾಗಿ ಗೂಗಲ್ ಪೇ ಅಕೌಂಟ್‌ಗೆ ಕ್ರೆಡಿಟ್ ಆಗಲಿದೆ. ಲಭ್ಯವಾದ ಮಾಹಿತಿ ಅನ್ವಯ ಗೂಗಲ್ ಪೇ ಆಫರ್ ಅನ್ವಯ ಬಳಕೆದಾರರು ಒಂದು ವರ್ಷದಲ್ಲಿ ಸರಿ ಸುಮಾರು 9000 ರೂಪಾಯಿ ಗಳಿಸಬಹುದಾಗಿದೆ.

ಈ ಕುರಿತಾಗಿ ಗೂಗಲ್ ಸಪೋರ್ಟ್ ಪೇಜ್‌ನಲ್ಲಿ ಮಾಹಿತಿ ನೀಡಲಾಗಿದ್ದು 'ಒಂದು ವೇಳೆ ನಿಮ್ಮ ಬಳಿ ಭಾರತೀಯ ಫೋನ್ ನಂಬರ್ ಹಾಗೂ ಭಾರತೀಯ ಬ್ಯಾಂಕ್‌ನಲ್ಲಿ ಅಕೌಂಟ್ ಇದ್ದರೆ, ಆ್ಯಪ್ ಮೂಲಕ ಮೊದಲ ಕರೆ ಮಾಡಿದ ಮರುಕ್ಷಣದಿಂದ ಗೂಗಲ್ ಪೇ ಕ್ಯಾಶ್ ರಿವಾರ್ಡ್ ಪಡೆಯಲು ಅರ್ಹರಾಗುತ್ತೀರಿ' ಎಂದು ಬರೆದಿದ್ದಾರೆ. ಇನ್ನು ಬಳಕೆದಾರರು ತಮ್ಮ ಕಾಂಟ್ಯಾಕ್ಟ್ಕ್ಗಳಿಗೆ ಗೂಗಲ್ ಡ್ಯುವೋ ಬಳಸಲು ಆಮಂತ್ರಿಸುವ ಮೂಲಕವೂ ಕ್ಯಾಶ್ ರಿವಾರ್ಡ್ ಗಳಿಸಬಹುದು ಎಂಬ ಮಾಹಿತಿಯೂ ಲಭ್ಯವಾಗಿದೆ.

ಈ ಬಳಕೆದಾರರಿಗಷ್ಟೇ ಸಿಗಲಿದೆ ರಿವಾರ್ಡ್

ನೂತನ ಬಳಕೆದಾರರಿಗೆ ಆಮಂತ್ರಣ ನೀಡಿದರಷ್ಟೇ ಕ್ಯಾಶ್ ರಿವಾರ್ಡ್ ಪಡೆಯಲು ಸಾಧ್ಯ ಎಂಬುವುದು ಗಮನಾರ್ಹ. ಒಂದು ಬಾರಿ ನೀವು ಕಳುಹಿಸಿದ ಇನ್ವೈಟ್ Accept ಮಾಡಿಕೊಂಡರೆ ಇಬ್ಬರಿಗೂ ಕ್ಯಾಶ್ ರಿವಾರ್ಡ್ ಸಿಗುತ್ತದೆ. ನೂತನ ಬಳಕೆದಾರ ತನ್ನ ಅಕೌಂಟ್ ಆ್ಯಕ್ಟಿವ್ ಮಾಡಿಕೊಂಡರೆ ನಿಮಗೆ ಹಾಗೂ ನೂತನ ಬಳಕೆದಾರನಿಗೆ ಇಬ್ಬರಿಗೂ 1000 ರೂಪಾಯಿವರೆಗಿನ ಒಂದು ಸ್ಕ್ರ್ಯಾಚ್ ಕಾರ್ಡ್ ನೀಡಲಾಗುತ್ತದೆ. ಇನ್ನು ನೂತನ ಬಳಕೆದಾರ ಈ ಹಿಂದೆ ಬಳಸದ ನಂಬರ್ ನಿಂದಲೇ Duo ರಿಜಿಸ್ಟರ್ ಮಾಡಿಕೊಳ್ಳಬೇಕೆಂಬುವುದು ಅತಿ ಮುಖ್ಯ ವಿಚಾರ.

ಗೆಳೆಯರನ್ನು ಇನ್ವೈಟ್ ಮಾಡುವುದು ಹೇಗೆ?

ನೂತನ ಬಳಕೆದಾರರಿಗೆ ಇನ್ವೈಟ್ ಕಳುಹಿಸಲು ಡ್ಯುವೋ ಆ್ಯಪ್ನಲ್ಲಿ Invite friends > Share invite ಲಿಂಕ್ ಕ್ಲಿಕ್ ಮಾಡಬೇಕು. ಈ ಲಿಂಕ್ ಯಾರಿಗೆ ಕಳುಹಿಸುತ್ತೀರೋ, ಅವರು ಆ್ಯಪ್‌ನಲ್ಲಿ ರಿಜಿಸ್ಟರ್ ಆದ ಬಳಿಕ ರಿವಾರ್ಡ್‌ಗೆ ಸಂಬಂಧಿಸಿದ ಇಮೇಲ್ ಒಂದು ಲಿಂಕ್ ಕಳುಹಿಸಿದವರಿಗೆ ಸಿಗುತ್ತದೆ. Duo ಆ್ಯಫ್‌ನಲ್ಲಿ ಲಾಗಿನ್ ಆಗಿ ಕೂಡಾ ಕ್ಯಾಶ್ ಪಡೆಯಬಹುದಾಗಿದೆ. ಇದಕ್ಕಾಗಿ More ಎಂಬ ಆಯ್ಕೆಯನ್ನು ಕ್ಲಿಕದ್ ಮಾಡಿ. ಇದಾದ ಬಳಿಕ ಕ್ಯಾಶ್ ನೇರವಾಗಿ ನೀವು ಲಿಂಕ್ ಮಾಡಿರುವ ಅಕೌಂಟ್ಗೆ ಸೇರುತ್ತದೆ.

ರಿವಾರ್ಡ್ ಕ್ಯಾಶ್ ಎಷ್ಟು ಸಿಗುತ್ತದೆ?

ಬಳಕೆದಾರರು ಬಳಕೆದಾರರು ಗರಿಷ್ಟ ಎಂದರೆ 30 ರಿವಾರ್ಡ್ ಪಡೆದುಕೊಳ್ಳಬಹುದು ಮತ್ತು ಪ್ರತಿ ಸ್ಕ್ರ್ಯಾಚ್ ಕಾರ್ಡ್ ಇಮಿಟ್ 1000 ರೂಪಾಯಿ ಆಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ನಿಯಮಗಳಿಗಾಗಿ ಆ್ಯಪ್ ನಲ್ಲಿ ನೀಡಲಾದ ಟರ್ಮ್ಸ್ ಆ್ಯಂಡ್ ಕಂಡೀಷನ್ಸ್ ನೋಡಬಹುದಾಗಿದೆ. ಅದೇನಿದ್ದರೂ ಈ ಆ್ಯಪ್ ಬಳಸಿ ನೀವು ಗರಿಷ್ 9 ಸಾವಿರ ರೂಪಾಯಿ ಗಳಿಸಬಹುದು.