Asianet Suvarna News Asianet Suvarna News

Global Tech Summit: ನ. 29ರಿಂದ ಕಾರ್ನೆಗಿ ಇಂಡಿಯಾ ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆ

Geopolitics of Technology: ಬಹುನಿರೀಕ್ಷಿತ  7ನೇ ಕಂತಿನ ಕಾರ್ನೆಗಿ ಇಂಡಿಯಾ ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆ ನವೆಂಬರ್ 29 ರಿಂದ ಆರಂಭಗೊಳ್ಳುತ್ತಿದೆ

Global Tech Summit Geopolitics of Technology Carnegie India Ministry of External Affairs 29 November to 1st December 2022 mnj
Author
First Published Oct 31, 2022, 12:51 PM IST

ನವದೆಹಲಿ (ಅ. 31): ಬಹುನಿರೀಕ್ಷಿತ ಕಾರ್ನೆಗಿ ಇಂಡಿಯಾ ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆಗೆ ತಯಾರಿಗಳು ಆರಂಭಗೊಂಡಿದೆ. ನವೆಂಬರ್ 29 ರಿಂದ 7ನೇ ಕಂತಿನ ಕಾರ್ನೆಗಿ ಇಂಡಿಯಾ ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆ ಆರಂಭಗೊಳ್ಳುತ್ತಿದೆ. ವಿದೇಶಾಂಗ ವ್ಯವಹಾರ ಸಚಿವಾಲಯ ಹಾಗೂ ಭಾರತ ಸರ್ಕಾರದ ಸಹಭಾಗಿತ್ವದಲ್ಲಿ ಈ ಶೃಂಗಸಭೆ ಆಯೋಜಿಸಲಾಗಿದೆ. ಈ ಶೃಂಗಸಭೆಗೆ ಕರ್ನಾಟಕ ಸರ್ಕಾರ ಹಾಗೂ ಭಾರತದ ಹಲವು ತಂತ್ರಜ್ಞಾನ ಸಂಸ್ಥೆಗಳು ಬೆಂಬಲ ಸೂಚಿಸಿದೆ. ಜಿಟಿಎಸ್‌ನ ಈ ಆವೃತ್ತಿ ಜಿಯೋಪಾಲಿಟಿಕ್ಸ್ ಆಫ್ ಟೆಕ್ನಾಲಜಿ
ಅಡಿಯಲ್ಲಿ ನಡೆಯಲಿದೆ. 

ನವೆಂಬರ್ 29 ರಿಂದ ಆರಂಭಗೊಳ್ಳಲಿರುವ ಈ ಶೃಂಗಸಭೆ ಡಿಸೆಂಬರ್ 1ರ ವರೆಗೆ ನಡೆಯಲಿದೆ. ಟೆಕ್ನಾಲಜಿ ಪಾಲಿಸಿ, ಸೈಬರ್ ಸ್ಥಿತಸ್ಥಾಪಕತ್ವ, ಡಿಜಿಟಲ್ ಆರೋಗ್ಯ, ಡಿಜಿಟಲ್ ಮೂಲಸೌಕರ್ಯ,  ಸೆಮಿಕಂಡಕ್ಟರ್,  ಭಾರತದ G20 ಅಧ್ಯಕ್ಷತೆ ಸೇರಿದಂತೆ ಹಲವು ವಿಷಯಗಳು ಕುರಿತು ಈ ಬಾರಿಯ ಶೃಂಗಸಭೆ ಬೆಳಕು ಚೆಲ್ಲಲಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸಂವಾದಗಳು ನಡೆಯಲಿದೆ. ಭಾರತ ಹಾಗೂ ವಿದೇಶದಲ್ಲಿ ಪ್ರಭಾವ ಬೀರಿರುವ ಸಚಿವರ ವಿವರ, ಮುಖ್ಯ ಭಾಷಣ, ಸರ್ಕಾರ, ಉದ್ಯಮ, ಶೈಕ್ಷಣಿಕ ಹಾಗೂ ನಾಗರಿಕ ಸಮಾಜದ ಪ್ರಾತಿನಿತ್ಯದೊಂದಿಗೆ ಸಂಭಾಷಣೆ ನಡೆಯಲಿದೆ.

ಈ ಶೃಂಗಸಭೆಯಲ್ಲಿ ಮಾತನಾಡಲಿರುವ ಪ್ರಮುಖ ಸಂಪನ್ಮೂಲ ವ್ಯಕ್ತಿಗಳ ವಿವರ ಇಂತಿದೆ: ಇಂಡಿಯಾ ಜಿ20 ಶೆರ್ಫಾದ ಅಮಿತಾಬ್ ಕಾಂತ್, ಕೇಂದ್ರ ಸರ್ಕಾರ  ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಕುಮಾರ್ ಸೂದ್, ಜಪಾನ್‌ನ ಆರ್ಥಿಕ ಭದ್ರತಾ ಸಚಿವ ಸನೇ ತಕೈಚಿ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಆರ್‌ಎಸ್ ಶರ್ಮಾ, ಇಂಟೆಲ್ ಕಾರ್ಪೋರೇಶನ್‌ನ ಭಾರತದ  ಮುಖ್ಯಸ್ಥ ನಿವ್ರುತಿ ರೈ, ಮೈಕ್ರೋಸಾಫ್ಟ್ ಎಷ್ಯಾ ಪ್ರಾದೇಶಿ ನಿರ್ದೇಶಕ (ಸರ್ಕಾರಿ ವ್ಯವಹಾರಗಳು ಮತ್ತು ಸಾರ್ವಜನಿಕ ನೀತಿ) ಮಾರ್ಕಸ್ ಬೇರ್ಟ್ಲಿ ಜಾನ್ಸ್, ಮೆಟಾದ ಗೌಪ್ಯತೆ ನೀತಿ ನಿರ್ದೇಶಕ ಮೆಲಿಂದಾ ಕ್ಲೇಬಾಗ್,  UNICEF ಸಹ ಸಂಸ್ಥಾಪಕ ಹಾಗೂ ಸಂಯೋಜಕ  ಡಿಜಿಟಲ್ ಹೆಲ್ತ್ ಸೆಂಟರ್ ಆಫ್ ಎಕ್ಸಲೆನ್ಸ್ ಸೀನ್ ಬ್ಲಾಷ್ಕೆ, ವಿಶ್ವಸಂಸ್ಥೆಯ ತಂತ್ರಜ್ಞಾನದ ಮುಖ್ಯ ರಾಯಭಾರಿಯಾಗಿರುವ ಅಮನದೀಪ್ ಸಿಂಗ್ ಗಿಲ್ ಈ ಶೃಂಗಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಲಿದ್ದಾರೆ.  

ಉದ್ಯಮ ಕ್ಷೇತ್ರದ ಪರಿಣಿತರು, ವ್ಯಾಪಾರ ಕ್ಷೇತ್ರದ ನಾಯಕರು, ನೀತಿ ನಿರೂಪಕರು, ಶಿಕ್ಷಣ ತಜ್ಞರು ಸೇರಿದಂತೆ ನುರಿತರಿಂದ ಮಾಹಿತಿಗಳನ್ನು ಪಡೆಯುವು ವಿಶೇಷ ಅವಕಾಶ ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆಯಲ್ಲಿ ಸಿಗಲಿದೆ. ಮುಕ್ತವಾಗಿ ಶೃಂಗಸಭೆಯಲ್ಲಿ ವರ್ಚುವಲ್ ರೂಪಾದಲಲ್ಲಿ ಪಾಲ್ಗೊಳ್ಳಬಹುದಾಗಿದೆ.  ನಿಮ್ಮ ಭಾಗವಹಿಸುವಿಕೆಯನ್ನು ಖಾತ್ರಿ ಪಡಿಸಲು ಇಲ್ಲಿ ಕ್ಲಿಕ್ ಮಾಡಿ.

ಕಾರ್ನೆಗಿ ಇಂಡಿಯಾ ವಿವರ: ಕಾರ್ನೆಗಿ ಇಂಡಿಯಾ ದೆಹಲಿ ಮೂಲದ ಚಿಂತಕರ ಚಾವಡಿಯಾಗಿದೆ. ಬಿಜಿಂಗ್, ಬೈರುತ್, ಬ್ರಸೆಲ್ಸ್, ವಾಷಿಂಗ್ಟನ್ ಸೇರಿದಂತೆ ಹಲವು ರಾಷ್ಟ್ರಗಳ 150ಕ್ಕೂ ವಿದ್ವಾಂಸಗಳನ್ನು ಒಳಗೊಂಡಿರುವ ಜಾಗತಿಕ ಜಾಲವಾಗಿದೆ. ಕಾರ್ನೆಗಿ ಇಂಡಿಯಾ ತಂತ್ರಜ್ಞಾನ, ಸಾಮಾಜಿಕ, ರಾಜಕೀಯ, ಆರ್ಥಿಕತೆ ಹಾಗೂ ಭದ್ರತಾ ಅಧ್ಯಯನಗಳನ್ನು ಕೇಂದ್ರಿಕರಿಸಿ ವಿಷಯ ಪ್ರಸ್ತುತಪಡಿಸುತ್ತದೆ.

 

 

Follow Us:
Download App:
  • android
  • ios