ಜಿಯೋದಿಂದ  ಧಮಾಕಾ ಆಫರ್.. ನಿಮ್ಮ ಇಷ್ಟದ  ಮೊಬೈಲ್ ನಂಬರ್ ನಿಮ್ಮದಾಗಿಸಿಕೊಳ್ಳಿ 

ರಿಲಯನ್ಸ್ ಜಿಯೋ ಟೆಲಿಕಾಂ ಕಂಪನಿ ತನ್ನ ಬಳಕೆದಾರರಿಗೆ jio choice number scheme ಅಡಿಯಲ್ಲಿ ಹೊಸ ಆಫರ್ ನೀಡುತ್ತಿದೆ. ಈ ಸ್ಕೀಮ್‌ ಅಡಿಯಲ್ಲಿ ನಿಮ್ಮಿಷ್ಟದ ಮೊಬೈಲ್ ನಂಬರ್ ನಿಮ್ಮದಾಗಿಸಿಕೊಳ್ಳಬಹುದು.

getting custom mobile number under jio choice scheme for postpaid users mrq

ಮುಂಬೈ: ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಹೊಸ ಅವಕಾಶವೊಂದನ್ನು ನೀಡುತ್ತಿದೆ. ಈ ಅವಕಾಶ ಬಳಸಿಕೊಂಡು ನಿಮ್ಮಿಷ್ಟದ ಮೊಬೈಲ್ ನಂಬರ್ ಪಡೆದುಕೊಳ್ಳಬಹುದಾಗಿದೆ. ನಿಮ್ಮಿಷ್ಟದ ಸರಣಿ  ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳುವ ಸೌಲಭ್ಯವನ್ನು ಬಳಕೆದಾರರಿಗೆ ನೀಡಲಾಗುತ್ತಿದೆ. ಈ ಯೋಜನೆಯು ಬಳಕೆದಾರು ತಮ್ಮ ಆಯ್ಕೆಯ ಪ್ರಕಾರ ಅವರ ಸಂಖ್ಯೆಯನ್ನು ಆಯ್ಕೆ ಮಾಡಲು ಬಯಸುವ ಅಥವಾ ಅವರ ಸದ್ಯ ಚಾಲ್ತಿಯಲ್ಲಿರುವ ಸಂಖ್ಯೆಯನ್ನು ಕಸ್ಟಮೈಸ್ ಮಾಡಲು ಬಯಸುವ ಜನರಿಗೆ ಈ ಅವಕಾಶ ನೀಡಲಾಗುತ್ತಿದೆ. ಜನ್ಮದಿನ, ವಿವಾಹ ವಾರ್ಷಿಕೋತ್ಸವ ಅಥವಾ ಯಾವುದೇ ವಿಶೇಷ ಸಂಖ್ಯೆಯನ್ನು ನೀವು ನೆನಪಿಟ್ಟುಕೊಳ್ಳಲು ಬಯಸುತ್ತಿರುವ ಜನರಿಗೆ ಜಿಯೋ ಹೊಸ ಆಯ್ಕೆಯನ್ನು ಪರಿಚಯಿಸುತ್ತಿದೆ. Jio ಚಾಯ್ಸ್ ನಂಬರ್ ಸ್ಕೀಮ್ ಅಡಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಿಸಿಕೊಳ್ಳಬಹುದಾಗಿದೆ. 

ಜಿಯೋ ಚಾಯ್ಸ್ ನಂಬರ್ ಸ್ಕೀಮ್ ಅಡಿಯಲ್ಲಿ ಬಳಕೆದಾರರು 499 ರೂಪಾಯಿ ಪಾವತಿಸಿ ತಮ್ಮಿಷ್ಟದ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಯೋಜನೆಯಡಿಯಲ್ಲಿ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯ ಕೊನೆಯ 4 ರಿಂದ 6 ನಂಬರ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗುತ್ತದೆ. ಒಂದು ವೇಳೆ ನಿಮ್ಮಿಷ್ಟದ ಸಂಖ್ಯೆ ಲಭ್ಯವಾಗದಿದ್ದರೆ ಪಿನ್ ಕೋಡ್ ಆಧಾರದ ಮೇಲೆ ಕೆಲವು ಆಯ್ಕೆಗಳು ನಿಮಗೆ ಸಿಗುತ್ತವೆ. ಈ ಸೇವೆ ಜಿಯೋ ಪೋಸ್ಟ್ ಪೇಯ್ಡ್  ಬಳಕೆದಾರರಿಗೆ ಮಾತ್ರ ಅನ್ವಯವಾಗುತ್ತದೆ. ನಿಮ್ಮಿಷ್ಟದ  ನಂಬರ್ ಸಿಕ್ಕ ನಂತರ ಹೊಸ ಸಿಮ್ ಕಾರ್ಡ್ ನೀಡಲಾಗುತ್ತದೆ. ಹಾಗಾದ್ರೆ ಹೊಸ ನಂಬರ್ ಆಯ್ಕೆ  ಮಾಡಿಕೊಳ್ಳೋದು ಹೇಗೆ ಅಂತ ನೋಡೋಣ ಬನ್ನಿ. 

ಆಯ್ಕೆ 1: ವೆಬ್‌ಸೈಟ್ ಮೂಲಕ
1.ಮೊದಲಿಗೆ  https://www.jio.com/selfcare/choice-number ಗೆ ಹೋಗಬೇಕು. 
2.ಈ ಲಿಂಕ್ ಓಪನ್ ಆದಾಗ ಮೊಬೈಲ್ ಸಂಖ್ಯೆ ಕೇಳುತ್ತದೆ. ಅಲ್ಲಿ ನಿಮ್ಮ ಜಿಯೋ ಪೋಸ್ಟ್‌ಪೇಯ್ಡ್ ಸಂಖ್ಯೆಯನ್ನು ಎಂಟ್ರಿ ಮಾಡಿ. 
3.ನಂತರ ನಿಮ್ಮ ಸಂಖ್ಯೆಗೆ ಬರುವ OTP ನಂಬರ್ ಎಂಟ್ರಿ ಮಾಡಿದಾಗ ಅದು ವೆರಿಫೈ ಆಗುತ್ತದೆ. 
4.ಇದಾದ ಬಳಿಕ ಹೊಸ ಪೇಜ್ ಓಪನ್ ಆಗುತ್ತದೆ. ಇಲ್ಲಿ ನಿಮ್ಮಿಷ್ಟದ 4-6 ಸಂಖ್ಯೆಗಳನ್ನು ಕ್ರಮವಾಗಿ ನಮೂದಿಸಿ. ಹೆಸರು ಮತ್ತು  ಪಿನ್ ಕೋಡ್ ಸಹ ಎಂಟ್ರಿ ಮಾಡಬೇಕು. 
5.ನಂತರ ನಿಮಗೆ ಪಿನ್ ಕೋಡ್ ಆಧಾರದ ಮೇಲೆ  ಲಭ್ಯವಿರೋ ಸಂಖ್ಯೆಗಳು ಕಾಣಿಸಿಕೊಳ್ಳುತ್ತವೆ. 
6.ಇಲ್ಲಿ ನಿಮ್ಮಿಷ್ಟದ ನಂಬರ್ ಆಯ್ಕೆ ಮಾಡಿಕೊಂಡು ಪೇಮೆಂಟ್ ಮಾಡಬೇಕು.

ಜಿಯೋದಿಂದ ಸೂಪರ್ ಪ್ಲಾನ್ - ಜಸ್ಟ್ 175 ರೂಪಾಯಿಗೆ ಡೇಟಾ ಜೊತೆ 12 OTT ಪ್ಲಾಟ್‌ಫಾರಂಗೆ ಎಂಟ್ರಿ

ಆಯ್ಕೆ 2: ಮೈಜಿಯೋ ಆಪ್ ಮೂಲಕ
1.ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ MyJio ಆಪ್ ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಳ್ಳಬೇಕು.
2.ಆಪ್‌ನಲ್ಲಿ ಜಿಯೋ ಪೋಸ್ಟ್ ಪೇಯ್ಡ್ ನಂಬರ್ ನಮೂದಿಸಿ. 
3.ಆಪ್‌ನಲ್ಲಿ ಲಭ್ಯವಿರೋ ಸಂಖ್ಯೆಯ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 
4.ನಂತರ ಬುಕ್ ಮಾಡಿ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಆ ಬಳಿ ಕ ನಿಮ್ಮಿಷ್ಟದ ಸಂಖ್ಯೆ, ಹೆಸರು, ಪಿನ್ ಕೋಡ್‌ ನಂಬರ್ ದಾಖಲಿಸಿ , ಲಭ್ಯವಿರುವ ಸಂಖ್ಯೆಗಳ ಮೇಲೆ ಕ್ಲಿಕ್ ಮಾಡಬೇಕು. 
5.ತದನಂತರ ನಿಮಗೆ ಲಭ್ಯವಿರುವ ಸಂಖ್ಯೆಗಳು ಕಾಣಿಸುತ್ತವೆ. ನಿಮ್ಮಿಷ್ಟದ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡು ಪೇಮೆಂಟ್ ಮಾಡಬೇಕು.

ಒಬ್ಬರ ರೀಚಾರ್ಜ್‌ನಿಂದ ಮನೆಯ ನಾಲ್ಕು ಜನರಿಗೆ ಲಾಭ... ದಿನವಿಡೀ ಮಾತಿನ ಜೊತೆ ಸೂಪರ್‌ಫಾಸ್ಟ್ ಇಂಟರ್‌ನೆಟ್ ಲಭ್ಯ !

Latest Videos
Follow Us:
Download App:
  • android
  • ios