ಇಂದು ರಾತ್ರಿ ಆಗಸದಲ್ಲಿ ನಡೆಯಲಿದೆ ವಿಸ್ಮಯ| ಖಗೋಳದಲ್ಲಿ ಘಟಿಸಲಿದೆ ವಿಸ್ಮಯಕಾರಿ ಘಟನೆ| ಇಂದು ರಾತ್ರಿ 9 ಗಂಟೆಗೆ ಜೆಮಿನಿಡ್ ಉಲ್ಕಾಪಾತ| ಟೆಲಿಸ್ಕೋಪ್‌ ಸಹಾಯ ಇಲ್ಲದೆ ವೀಕ್ಷಣೆ ಮಾಡಬಹುದು|ಜೆಮಿನಿಡ್ ಉಲ್ಕಾಪಾತದ ಕುರಿತು ಗೂಗಲ್‌ ಡೂಡಲ್‌ನಲ್ಲಿ ವಿವರಣೆ 

ಬೆಂಗಳೂರು(ಡಿ.13): ಇಂದು ಖಗೋಳದಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆಯಲಿದ್ದು, ಇದನ್ನು ಇಂದಿನ ಗೂಗಲ್ ಡೂಡಲ್ ನಲ್ಲಿ ಕಾಣಬಹುದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ನಡೆಯಲಿರುವ ಜೆಮಿನಿಡ್ ಉಲ್ಕಾಪಾತದ ಕುರಿತ ಅದ್ಭುತ ವಿದ್ಯಮಾನವನ್ನು ಗೂಗಲ್‌ ಡೂಡಲ್‌ನಲ್ಲಿ ವಿವರಿಸಲಾಗಿದೆ. ಇಂದು ರಾತ್ರಿ 9 ಗಂಟೆಗೆ ಆಕಾಶದಲ್ಲಿ ನಡೆಯಲಿರುವ ಘಟನೆಯನ್ನು ಟೆಲಿಸ್ಕೋಪ್‌ ಸಹಾಯ ಇಲ್ಲದೆ ವೀಕ್ಷಣೆ ಮಾಡಬಹುದು. 

ಪ್ರತಿ ವರ್ಷ ಡಿಸೆಂಬರ್ ವೇಳೆಗೆ ಭೂಮಿಯ ಕಕ್ಷೆ 3200 ಫೀಥಾನ್‌ನಷ್ಟು ಕೆಳಗಿಳಿಯುತ್ತದೆ. ಈ ವೇಳೆ ಆಗಸದಲ್ಲಿರುವ ಅವಶೇಷಗಳು ಗಂಟೆಗೆ 79 ಸಾವಿರ ಮೈಲುಗಳಷ್ಟು ವೇಗದಲ್ಲಿ ವಾತಾವರಣದ ಮೇಲೆ ಕುಸಿಯುತ್ತದೆ. 

ಮಧ್ಯರಾತ್ರಿಯ ವೇಳೆಗೆ ಈ ಖಗೋಳ ವಿಸ್ಮಯ ಹೆಚ್ಚಾಗಲಿದ್ದು ಗಂಟೆಗೆ 120 ಉಲ್ಕೆಗಳು ಚಲಿಸುತ್ತವೆ ಎಂದು ಖಗೋಳ ವಿಜ್ಞಾನಿಗಳು ಅಂದಾಜಿಸಿದ್ದಾರೆ.