Asianet Suvarna News Asianet Suvarna News

Cryogenic Engine Test: ಮಾನವಸಹಿತ ಗಗನಯಾನದ ಎಂಜಿನ್‌ ಪರೀಕ್ಷೆ ಯಶಸ್ವಿ!

*ಇನ್ನೂ 4 ಬಾರಿ 1810 ಸೆಕೆಂಡ್‌ಗಳ ಕಾಲ ಪರೀಕ್ಷೆ: ಇಸ್ರೋ
*2023 ರಲ್ಲಿ ಮೊದಲ ಮಾನವಸಹಿತ ಗಗನ್‌ಯಾನ ಮಿಷನ್‌
*ಮಾನವಸಹಿತ ಗಗನಯಾನ ಯೋಜನೆಯಲ್ಲಿ  ಮೈಲುಗಲ್ಲು
 

Gaganyaan Mission Isro successfully conducts cryogenic engine test of the human rated GSLV rocket mnj
Author
Bengaluru, First Published Jan 14, 2022, 7:53 AM IST

ಬೆಂಗಳೂರು (ಜ. 14): ಭಾರತದ ಮೊಟ್ಟಮೊದಲ ಮಾನವಸಹಿತ ಗಗನಯಾನ ಯೋಜನೆಯಲ್ಲಿ (Gaganyaan Mission) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇನ್ನೊಂದು ಮಹತ್ವದ ಸಿದ್ಧತಾ ಘಟ್ಟವನ್ನು ಪೂರೈಸಿದ್ದು, ಗಗನಯಾನ ನೌಕೆಯ ಕ್ರಯೋಜನಿಕ್‌ ಎಂಜಿನ್‌ನ (cryogenic engine)  ಅರ್ಹತಾ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ನಿರಂತರ 720 ಸೆಕೆಂಡ್‌ಗಳ ಕಾಲ ಎಂಜಿನ್‌ನ ಪರೀಕ್ಷೆ ನಡೆಸಲಾಗಿದೆ.

ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಷನ್‌ ಕಾಂಪ್ಲೆಕ್ಸ್‌ನಲ್ಲಿ ಮಾನವಸಹಿತ ಗಗನಯಾನ ನೌಕೆಯ ಎಂಜಿನ್‌ ಪರೀಕ್ಷೆ ಬುಧವಾರ ನಡೆದಿದೆ ಎಂದು ಇಸ್ರೋ ತಿಳಿಸಿದೆ. ‘ಈ ಯಶಸ್ವಿ ಪರೀಕ್ಷೆಯು ಮಾನವಸಹಿತ ಗಗನಯಾನ ಯೋಜನೆಯಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಇದು ನಮ್ಮ ಕ್ರಯೋಜನಿಕ್‌ ಎಂಜಿನ್‌ನ ವಿಶ್ವಾಸಾರ್ಹತೆ ಮತ್ತು ದಕ್ಷತೆಯನ್ನು ಸಾಬೀತುಪಡಿಸಿದೆ. ಇನ್ನೂ ನಾಲ್ಕು ಬಾರಿ ಒಟ್ಟು 1810 ಸೆಕೆಂಡ್‌ಗಳ ಕಾಲ ಎಂಜಿನ್‌ ಪರೀಕ್ಷೆ ನಡೆಯಲಿದೆ. ನಂತರ ಇನ್ನೊಂದು ಎಂಜಿನ್ನನ್ನು ಎರಡು ಬಾರಿ ಪರೀಕ್ಷೆ ನಡೆಸಲಾಗುತ್ತದೆ. ಆಗ ಕ್ರಯೋಜನಿಕ್‌ ಎಂಜಿನ್‌ ವ್ಯವಸ್ಥೆಯ ಪರೀಕ್ಷೆ ಸಂಪೂರ್ಣವಾಗಲಿದೆ’ ಎಂದು ಇಸ್ರೋ ಹೇಳಿದೆ.

ಇದನ್ನೂ ಓದಿ: Gaganyaan 2023: ಗಗನಯಾನಕ್ಕೂ ಮುನ್ನ ಮೊದಲ ಮಾನವ ರಹಿತ ಮಿಷನ್ ಉಡಾವಣೆ!

"ಎಂಜಿನ್ನ ಕಾರ್ಯಕ್ಷಮತೆಯು ಪರೀಕ್ಷಾ ಉದ್ದೇಶಗಳನ್ನು ಪೂರೈಸಿದೆ ಮತ್ತು ಎಂಜಿನ್ ಪ್ಯಾರಾಮೀಟರ್‌ ಪೂರ್ವ ನಿರ್ಧರಿಸಿದಂತೆ ಪರೀಕ್ಷೆಯ ಸಂಪೂರ್ಣ ಅವಧಿಯಲ್ಲಿ  ಹೊಂದಾಣಿಕೆಯಾಗಿವೆ. ಈ ಯಶಸ್ವಿ ದೀರ್ಘಾವಧಿಯ ಪರೀಕ್ಷೆಯು ಮಾನವ ಬಾಹ್ಯಾಕಾಶ ಕಾರ್ಯಕ್ರಮ ಗಗನಯಾನಗಗೆ ಪ್ರಮುಖ ಮೈಲುಗಲ್ಲು. ಇದು ಗಗನ್‌ಯಾನ್‌ಗಾಗಿ ಮಾನವ-ರೇಟೆಡ್ ಉಡಾವಣಾ ವಾಹನ ಇಂಡಕ್ಷನ್‌ಗಾಗಿ ಕ್ರಯೋಜೆನಿಕ್ ಎಂಜಿನ್‌ನ ವಿಶ್ವಾಸಾರ್ಹತೆ ಮತ್ತು ದೃಢತೆಯನ್ನು ಖಚಿತಪಡಿಸುತ್ತದೆ" ಎಂದು ಇಸ್ರೋ ಹೇಳಿದೆ. 

 

 

2023 ರಲ್ಲಿ ಮೊದಲ ಮಾನವಸಹಿತ ಮಿಷನ್‌!

ಈ ವರ್ಷದ ಮೊದಲ  ಬಾಹ್ಯಾಕಾಶ ನೌಕೆಯನ್ನು ಆಗಸ್ಟ್‌ 15ರಂದು ನಡೆಯಲಿರುವ ದೇಶದ 75 ಸ್ವಾತಂತ್ರ್ಯೋತ್ಸವದ ಒಳಗೆ ಉಡ್ಡಯನ ಮಾಡಬೇಕೆಂದು ಇಸ್ರೋ ಯೋಜಿಸಿದೆ. ಆದರೆ, ಕೊರೋನಾವೈರಸ್‌ ಸಮಸ್ಯೆಯಿಂದಾಗಿ ಅದು ಮುಂದೆ ಹೋಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಭಾರತದ ಮೊದಲ ಮಾನವ ಬಾಹ್ಯಾಕಾಶ ಮಿಷನ್ "ಗಗನಯಾನ" ಅನ್ನು 2023 ರಲ್ಲಿ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ಕಳೆದ ವರ್ಷ ಹೇಳಿತ್ತು. ಈ ಉಡಾವಣೆಯೊಂದಿಗೆ, ಭಾರತವು ಯುಎಸ್ಎ (US), ರಷ್ಯಾ (Russia) ಮತ್ತು ಚೀನಾ (China) ನಂತರ ಮಾನವ ಬಾಹ್ಯಾಕಾಶ ಯಾನ ಮಿಷನ್ ಅನ್ನು ಪ್ರಾರಂಭಿಸುವ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ.

ಇದನ್ನೂ ಓದಿ: ISRO Gaganyaan Project : ಪ್ರಧಾನಿಗೆ, ಸಿಎಂ ಬೊಮ್ಮಾಯಿಗೆ ಕೆಪಿಸಿಸಿ ಅಧ್ಯಕ್ಷರ ಪತ್ರ

"ಪ್ರಮುಖ ಕಾರ್ಯಾಚರಣೆಗಳು ಅಂದರೆ, ಕ್ರೂ ಎಸ್ಕೇಪ್ ಸಿಸ್ಟಮ್ ಕಾರ್ಯಕ್ಷಮತೆಯ ಮೌಲ್ಯಮಾಪನಕ್ಕಾಗಿ ಪರೀಕ್ಷಾ ವಾಹನ ಹಾರಾಟ ಮತ್ತು ಗಗನಯಾನ್ (G1) ನ 1 ನೇ ಮಾನವರಹಿತ (Uncrewed) ಯೋಜನೆ ಅನ್ನು 2022 ರ ದ್ವಿತೀಯಾರ್ಧದ ಆರಂಭದಲ್ಲಿ ನಿಗದಿಪಡಿಸಲಾಗಿದೆ. ಇದರ ನಂತರ ಎರಡನೇ ಮಾನವರಹಿತ ಯೋಜನೆ 2022 ರ ಕೊನೆಯಲ್ಲಿ ಇಸ್ರೋ ಅಭಿವೃದ್ಧಿಪಡಿಸಿದ "ವ್ಯೋಮಮಿತ್ರ" (Vyommitra) ಬಾಹ್ಯಾಕಾಶ ಯಾನ ಮಾನವ ರೋಬೋಟ್ ಅನ್ನು ಹೊತ್ತೊಯ್ಯುತ್ತದೆ ಮತ್ತು ಅಂತಿಮವಾಗಿ 2023 ರಲ್ಲಿ ಮೊದಲ ಮಾನವಸಹಿತ ಗಗನ್‌ಯಾನ ಮಿಷನ್‌ ನಡೆಯಲಿದೆ" ಎಂದು ಕೇಂದ್ರ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ವಿಜ್ಞಾನ ಮತ್ತು ತಂತ್ರಜ್ಞಾನದ ಜಿತೇಂದ್ರ ಸಿಂಗ್ ( Jitendra Singh) ಹೇಳಿದ್ದಾರೆ.

2018 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಸ್ವಾತಂತ್ರ್ಯ ದಿನದ ಭಾಷಣವನ್ನು ಉಲ್ಲೇಖಿಸಿ, ಭಾರತೀಯ ಗಗನಯಾತ್ರಿಗಳು, ಅದು ಪುರುಷ ಅಥವಾ ಮಹಿಳೆಯಾಗಿರಬಹುದು, 2022 ರ ವೇಳೆಗೆ 'ಗಗನಯಾನ್' ನಲ್ಲಿ ಬಾಹ್ಯಾಕಾಶ ಯೋಜನೆಯಲ್ಲಿ ಪಾಲ್ಗೊಳ್ಳಲಿದ್ದಾರೆ, ಆದರೆ ಕೋವಿಡ್ ನಿರ್ಬಂಧಗಳಿಂದಾಗಿ ಕಾರ್ಯಕ್ರಮವು ಸ್ವಲ್ಪ ವಿಳಂಬವಾಗಿದೆ ಎಂದು ಸಿಂಗ್ ಹೇಳಿದ್ದಾರೆ. 

Follow Us:
Download App:
  • android
  • ios