Asianet Suvarna News Asianet Suvarna News

ಪ್ರಧಾನಿ ಮೋದಿ ವೆಬ್‌ಸೈಟೇ ಅಸುರಕ್ಷಿತ!

ದೇಶದ ಪ್ರಧಾನಿ ಮೋದಿಯವರ ವೆಬ್‌ಸೈಟ್ ಸುರಕ್ಷಿತವಾಗಿಲ್ಲ. ಹೀಗಂತ ಫ್ರೆಂಚ್‌ನ ಹ್ಯಾಕರ್ ಒಬ್ಬರು ಎಚ್ಚರಿಸಿದ್ದಾರೆ.

French Hacker Alerts Indian PM of Security Breach on His Website Offers to Fix
Author
New Delhi, First Published Jan 16, 2019, 4:38 PM IST

ನವದೆಹಲಿ[ಜ.16]: ಪ್ರಧಾನಿ ನರೇಂದ್ರ ಮೋದಿಯವರ ವೆಬ್‌ಸೈಟ್ www.narendramodi.in ಸುರಕ್ಷಿತವ್ಲಲವಂತೆ. ಹೀಗಂತ ಯಾರೋ ಹೇಳಿದ್ದಲ್ಲ, ಫ್ರಾನ್ಸ್ ನ ಸೆಕ್ಯುರಿಟಿ ರಿಸರ್ಚರ್ ಹಾಗೂ ಎಥಿಕಲ್ ಹ್ಯಾಕರ್ ಇಲಿಯಟ್ ಆ್ಯಂಡರ್ಸನ್ ಎಂಬರು ಮಾಹಿತಿ ನೀಡಿದ್ದಾರೆ. ಟ್ವೀಟ್ ಮಾಡುವ ಮೂಲಕ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ ಸ್ಕ್ರೀನ್‌ಶಾಟ್ ಒಂದನ್ನು ಶೇರ್ ಮಾಡಿರುವ ಇಲಿಯಟ್ 'ಹಾಯ್ @narendramodi, ನಿಮ್ಮ ವೆಬ್‌ಸೈಟಿನಲ್ಲಿ ಭದ್ರತೆಯ ಕೊರತೆಯೊಂದು ಕಂಡು ಬಂದಿದೆ. ಅಪರಿಚಿತ ಮೂಲದಿಂದ ನನ್ನ ಹೆಸರಿನಲ್ಲಿ ನಿಮ್ಮ ವೆಬ್ ಸೈಟಿಗೆ ಫೈಲ್ ಒಂದನ್ನು ಅಪ್ಲೋಡ್ ಮಾಡಲಾಗಿದೆ. ಅವರ ಬಳಿ ನಿಮ್ಮ ಡೇಟಾಬೇಸ್ ನ ಸಂಪೂರ್ಣ ಮಾಹಿತಿ ಇದೆ. ನೀವು ಸಾಧ್ಯವಾದಷ್ಟು ಬೇಗ ನನ್ನನ್ನು ಸಂಪರ್ಕಿಸಿ ನಿಮ್ಮ ವೆಬ್ ಸೈಟ್ ನ್ನು ಸುರಕ್ಷಿತಗೊಳಿಸಬೇಕು' ಎಂದಿದ್ದಾರೆ.

ಇದಾದ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಇಲಿಯಟ್ http://narendramodi.in ತಂಡವು ನನ್ನನ್ನು ಸಂಪರ್ಕಿಸಿದೆ. ಹಾಗೂ ವೆಬ್ ಸೈಟಿನಲ್ಲಿ ಕಂಡು ಬಂದ ಭದ್ರತಾ ಲೋಪವನ್ನು ಪರಿಹರಿಸುವ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ. ಇದಕ್ಕೂ ಮುನ್ನ ಇಲಿಯಟ್ ಆ್ಯಂಡರ್ಸನ್ ಭಾರತೀಯರ ಆಧಾರ್ ಸಂಖ್ಯೆಯ ಗೌಪ್ಯತೆ ಹಾಗೂ ಅದರ ಡೇಟಾಬೇಸ್ ಸುರಕ್ಷಿತವಾಗಿಲ್ಲ ಎಂದು ತಿಳಿಸಿದ್ದರು.
 

Follow Us:
Download App:
  • android
  • ios