ನೀವು ಯೋಚಿಸಿದಂತೆಯಲ್ಲಾ ನಿಮ್ಮ ಹಳೆಯ ಸ್ಮಾರ್ಟ್'ಫೋನ್'ಗಳನ್ನು ಹೇಗೆಲ್ಲಾ ಬಳಸಬಹುದು ಎಂಬ ಹೊಸ ಹೊಸ ಐಡಿಯಾಗಳು ಬರುತ್ತವೆ. ಹಳೆಯ ಫೋನನ್ನು ಸುಮ್ಮನೆ ಬಿಸಾಡುವ ಮುನ್ನ ಈ ಬಗ್ಗೆ ಒಮ್ಮೆ ಗಮನ ಹರಿಸುವುದು ಯುಕ್ತ.
ಈಗಂತೂ ಪ್ರತೀ ವರ್ಷ ಸ್ಮಾರ್ಟ್'ಫೋನ್'ಗಳು ಅಪ್'ಗ್ರೇಡ್ ಆಗುತ್ತಲೇ ಇರುತ್ತವೆ. ಹೊಸ ಹೊಸ ತಂತ್ರಜ್ಞಾನಗಳು ಅಡಕವಾಗುತ್ತಿರುತ್ತವೆ. ಹೀಗಾಗಿ, ಹಳೆಯ ಸ್ಮಾರ್ಟ್'ಫೋನ್ ಇದ್ದರೂ ಹೊಸ ಸ್ಮಾರ್ಟ್'ಫೋನ್ ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಹಳೆಯದನ್ನು ಏನು ಮಾಡಬೇಕು ಎಂಬುದು ತಿಳಿಯದೇ ಗೊಂದಲದಲ್ಲಿರುವವರಿಗೆ ಒಂದಷ್ಟು ಟಿಪ್ಸ್ ಇಲ್ಲಿದೆ.
1) ವೈರ್'ಲೆಸ್ ಸೆಕ್ಯೂರಿಟಿ ಕ್ಯಾಮೆರಾ:
ಐಪಿ ವೆಬ್'ಕ್ಯಾಮ್ ಮೊದಲಾದ ಆ್ಯಪ್'ಗಳ ಮೂಲಕ ನಿಮ್ಮ ಹಳೆಯ ಸ್ಮಾರ್ಟ್'ಫೋನನ್ನು ವಯರ್'ಲೆಸ್ ಸೆಕ್ಯೂರಿಟಿ ಕ್ಯಾಮೆರಾವಾಗಿ ಪರಿವರ್ತಿಸಬಹುದು. ನಿಮ್ಮ ಫೋನ್'ನ ಕ್ಯಾಮೆರಾವನ್ನು ಆನ್ ಮಾಡಿಟ್ಟುಬಿಟ್ಟರೆ, ಯಾವ ಸ್ಥಳದಿಂದ ಬೇಕಾದರೂ ನೀವು ಅದನ್ನು ವೀಕ್ಷಿಸಬಹುದು. ಆದರೆ, ನಿಮ್ಮ ಫೋನನ್ನು ಚಾರ್ಜರ್ ಮತ್ತು ವೈಫೈ ನೆಟ್ವರ್ಕ್'ಗೆ ಕನೆಕ್ಟ್ ಮಾಡಿಟ್ಟಿರಬೇಕು. ಮನೆಯಲ್ಲಿ ನೀವು ಇದನ್ನು ಸಿಸಿಟಿವಿ ರೀತಿಯಲ್ಲಿ ಬಳಸಬಹುದು.
2) ಮಕ್ಕಳಿಗೆ ಆಟದ ಸಾಮಾನು:
ನಿಮ್ಮ ಹಳೆಯ ಸ್ಮಾರ್ಟ್'ಫೋನನ್ನು ಮಕ್ಕಳಿಗೆ ಶಿಕ್ಷಣಕ್ಕೆ ಪೂರಕವಾಗಿ ಬಳಸಬಹುದು. ಮಕ್ಕಳ ಬುದ್ಧಿಮತ್ತೆ ಹೆಚ್ಚಿಸುವ ಕೆಲ ಗೇಮ್'ಗಳನ್ನು ಇನ್ಸ್'ಟಾಲ್ ಮಾಡಬಹುದು. Zoodles, Kid's Shell ನಂತಹ ಮಕ್ಕಳ ಕೇಂದ್ರಿತ ಆ್ಯಪ್'ಗಳನ್ನು ಹಾಕಬಹುದು. ಯೂಟ್ಯೂಬ್ ಕಿಡ್ಸ್'ನಂತರ ವಿಡಿಯೋ ಆ್ಯಪ್'ಗಳೂ ಸಾಕಷ್ಟು ಲಭ್ಯವಿವೆ. ನಿರ್ದಿಷ್ಟ ಆ್ಯಪ್'ಗಳನ್ನು ಬಿಟ್ಟರೆ ಮಕ್ಕಳು ಫೋನ್'ನ ಬೇರೆ ಸೌಲಭ್ಯಗಳನ್ನು ಬಳಸದಂತೆ ಲಾಕ್ ಮಾಡಿಡಬಹುದು.
3) ಮೀಡಿಯಾ ಪ್ಲೇಯರ್:
ನಿಮ್ಮ ಹಳೆಯ ಸ್ಮಾರ್ಟ್'ಫೋನ್ ಕನಿಷ್ಠ 1ಜಿಬಿ RAM ಹೊಂದಿದ್ದರೆ, ಅದನ್ನು ಟಿವಿಗೆ ವಿಡಿಯೋ ಪ್ಲೇಯರ್ ಆಗಿ ಬಳಸಬಹುದು. ಇದಕ್ಕಾಗಿ ಗೂಗಲ್ ಕ್ರೋಮ್'ಕ್ಯಾಸ್ಟ್'ನಂತರ ವೈರ್ಲೆಸ್ ಸ್ಟ್ರೀಮಿಂಗ್ ಡೋಂಗಲ್'ಗಳನ್ನು ಅಳವಡಿಸಬೇಕಾಗುತ್ತದೆ. ಫೋನ್'ನಲ್ಲಿರುವ ವಿಡಿಯೋ, ಯೂಟ್ಯೂಬ್ ವಿಡಿಯೋ ಅಥವಾ ಫೋಟೋಗಳನ್ನು ಟಿವಿಯಲ್ಲಿ ವೀಕ್ಷಿಸಲು ಈ ಡೋಂಗಲ್ ಸಾಧ್ಯವಾಗಿಸುತ್ತದೆ. ಫೋನ್'ನಲ್ಲಿರುವ ಆ್ಯಪ್'ಗಳು ಹಾಗೂ ಗೇಮ್'ಗಳನ್ನೂ ಟಿವಿಯಲ್ಲಿ ವೀಕ್ಷಿಸಬಹುದಾಗಿದೆ.
ಇವಿಷ್ಟೇ ಅಲ್ಲ, ನೀವು ಯೋಚಿಸಿದಂತೆಯಲ್ಲಾ ನಿಮ್ಮ ಹಳೆಯ ಸ್ಮಾರ್ಟ್'ಫೋನ್'ಗಳನ್ನು ಹೇಗೆಲ್ಲಾ ಬಳಸಬಹುದು ಎಂಬ ಹೊಸ ಹೊಸ ಐಡಿಯಾಗಳು ಬರುತ್ತವೆ. ಹಳೆಯ ಫೋನನ್ನು ಸುಮ್ಮನೆ ಬಿಸಾಡುವ ಮುನ್ನ ಈ ಬಗ್ಗೆ ಒಮ್ಮೆ ಗಮನ ಹರಿಸುವುದು ಯುಕ್ತ.
