Asianet Suvarna News Asianet Suvarna News

ರೈತನ ಮಗ ಚಂದ್ರಕಾಂತ್: ಚಂದ್ರಯಾನ-2 ಪ್ರಮುಖ ವಿಜ್ಞಾನಿ!

ಚಂದ್ರಯಾನ -2 ಮಿಷನ್‌ನ ಭಾಗವಾಗಿರುವ ಪ.ಬಂಗಾಳ ಮೂಲದ ವಿಜ್ಞಾನಿ ಚಂದ್ರಕಾಂತ್, ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಗಮನ ಸೆಳೆದಿದ್ದಾರೆ. ಬಂಗಾಳದ ಕೃಷಿಕರ ಮಗ ಚಂದ್ರಕಾಂತ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಯಾದ ಚಂದ್ರಯಾನ -2 ರ ಪ್ರಮುಖ ಭಾಗವಾಗಿದ್ದಾರೆ.

Farmer Son Is Key Scientist in Chandrayaan-2 Mission
Author
Bengaluru, First Published Jul 16, 2019, 9:42 PM IST
  • Facebook
  • Twitter
  • Whatsapp

ಕೋಲ್ಕತ್ತಾ(ಜು.16): ಚಂದ್ರಯಾನ -2 ಮಿಷನ್‌ನ ಭಾಗವಾಗಿರುವ ಪ.ಬಂಗಾಳ ಮೂಲದ ವಿಜ್ಞಾನಿ ಚಂದ್ರಕಾಂತ್, ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಗಮನ ಸೆಳೆದಿದ್ದಾರೆ. 

ಬಂಗಾಳದ ಕೃಷಿಕರ ಮಗ ಚಂದ್ರಕಾಂತ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಯಾದ ಚಂದ್ರಯಾನ -2 ರ ಪ್ರಮುಖ ಭಾಗವಾಗಿದ್ದಾರೆ.

ಸದ್ಯ ಚಂದ್ರಯಾನ-2 ಕಾರ್ಯಾಚರಣೆಯನ್ನು ಮುಂದೂಡಲಾಗಿದ್ದರೂ, ಚಂದ್ರಕಾಂತ್ ಕಟುಂಬ ಅವರ ಸಾಧನೆ ಬಗ್ಗೆ ಹೆಮ್ಮೆಪಡುತ್ತಿದೆ.

ಹೂಗ್ಲಿ ಜಿಲ್ಲೆಯ ಶಿಬ್‌ಪುರ ಗ್ರಾಮದಲ್ಲಿತಂದೆ ಮಧುಸೂದನ್ ಕುಮಾರ್, ಭಾನುವಾರ ರಾತ್ರಿಯಿಡೀ ಗ್ರಾಮಸ್ಥರೊಂದಿಗೆ ಉಡಾವಣೆಯ ನೇರ ಪ್ರಸಾರ ವೀಕ್ಷಣೆ ಮಾಡುತ್ತಿದ್ದರು.

ಇಡೀ ರಾತ್ರಿಯ ಕಾಯುವಿಕೆಯ ನಂತರ ಉಡಾವಣೆಯನ್ನು ಮುಂದೂಡಲಾಗಿದೆ ಎಂದು ತಿಳಿದು ಬೇಸರವಾಗಿದ್ದರೂ, ಯೋಜನೆ ಅದು ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ಮಧುಸೂದನ್.

2001 ರಲ್ಲಿ ಇಸ್ರೋಗೆ ಸೇರಿದ ಚಂದ್ರಕಾಂತ್, ಇದೀಗ ಚಂದ್ರಯಾನ-2 ಯೋಜನೆಯ ಭಾಗವಾಗಿರುವುದು ನಿಜಕ್ಕೂ ಅದ್ಭುತ ಸಾಧನೆಯೇ ಸರಿ.

ಚಂದ್ರಕಾಂತ ಅವರ ಸಹೋದರ ಶಶಿಕಾಂತ್ ಕೂಡ ಭಾರತೀಯ ಬಾಹ್ಯಾಕಾಶ ಏಜೆನ್ಸಿಯ ವಿಜ್ಞಾನಿಯಾಗಿದ್ದು, ಮಧುಸೂದನ್ ತಮ್ಮ ಇಬ್ಬರೂ ಪುತ್ರರಿಗೆ ಚಂದ್ರನ ಹೆಸರಿಟ್ಟಿರುವುದು ವಿಶೇಷ.

Follow Us:
Download App:
  • android
  • ios