ವಾಟ್ಸಪ್ ಮತ್ತು ಇನ್ಸ್ಟಾಗ್ರಾಮ್‌ಗೆ ಇನ್ಮುಂದೆ ಹೊಸ ಹೆಸರು!
ಫೇಸ್ಬುಕ್ ಒಡೆತನದ ವಾಟ್ಸಪ್ ಮತ್ತು ಇನ್ಸ್ಟಾಗ್ರಾಮ್; ಒಂದು ಬಿಲಿಯನ್‌ಕ್ಕಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಪ್ ಮತ್ತು ಇನ್ಸ್ಟಾಗ್ರಾಮ್; ಫೇಸ್ಬುಕ್‌ನಿಂದ ಹೊಸ ಹೆಸರು
ಜನಪ್ರಿಯ ಸೋಶಿಯಲ್ ಮೀಡಿಯಾ ತಾಣ ಫೇಸ್ಬುಕ್ ತನ್ನ ಒಡೆತನದಲ್ಲಿರುವ ವಾಟ್ಸಪ್ ಮತ್ತು ಇನ್ಸ್ಟಾಗ್ರಾಮ್ ಹೆಸರುಗಳನ್ನು ಬದಲಾಯಿಸಲು ಹೊರಟಿದೆ.
ರೀ-ಬ್ರ್ಯಾಂಡಿಗ್ ಯೋಜನೆಯನ್ವಯ ಇನ್ಮುಂದೆ ವಾಟ್ಸಪ್ ಮತ್ತು ಇನ್ಸ್ಟಾಗ್ರಾಮ್ ಹೆಸರು "WhatsApp from Facebook" and "Instagram from Facebook" ಎಂದಾಗಿರಲಿದೆ.
ಈ ಬದಲಾವಣೆ ಮೂಲಕ ಆ ಮೂರು ಆ್ಯಪ್‌ಗಳನ್ನು ಒಂದೇ ಸೂರಿನಡಿ ತರುವ ಯೊಜನೆ ಫೇಸ್ಬುಕ್ ಹೊಂದಿದೆ ಎಂದು ಹೇಳಲಾಗಿದೆ. ವಾಟ್ಸಪ್ ಮತ್ತು ಇನ್ಸ್ಟಾಗ್ರಾಮನ್ನು ಫೇಸ್ಬುಕ್ ಖರೀದಿಸಿದೆಯಾದರೂ, ಅವುಗಳು ಸ್ವತಂತ್ರವಾಗಿ ಕಾರ್ಯಾಚರಿಸುತ್ತಾ ಬಂದಿವೆ.
ಇದನ್ನೂ ಓದಿ | ಜನಪ್ರಿಯವಾಗುತ್ತಿದೆ ಹತ್ತು ಹಲವು ವಿಶೇಷಗಳುಳ್ಳ ಟೆಲಿಗ್ರಾಂ! ಏನಿದರ ಉಪಯೋಗ?
ಹೊಸ ಹೆಸರುಗಳಿಂದಾಗಿ ಆ ಮೂರು ಆ್ಯಪ್‌ಗಳು ಪರಸ್ಪರ ಸಂಬಂಧ ಹೊಂದಿವೆ ಎಂಬ ವಿಷಯ ಬಳಕೆದಾರರಿಗೆ ಸ್ಪಷ್ಟವಾಗಲಿದೆ. ಇನ್ಮುಂದೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕೂಡಾ ಈ ಹೊಸ ಹೆಸರುಗಳೇ ಕಾಣಿಸಿಕೊಳ್ಳಲಿವೆ.
ಫೇಸ್ಬುಕ್ ಜಗತ್ತಿನಾದ್ಯಂತ 2.41 ಬಿಲಿಯನ್ ಬಳಕೆದಾರರನ್ನು ಹೊಂದಿದ್ದರೆ, ಇನ್ಸ್ಟಾಗ್ರಾಮ್ 1 ಬಿಲಿಯನ್, ವಾಟ್ಸಪ್ 1.5 ಬಿಲಿಯನ್ ಬಳಕೆದಾರರನ್ನು ಹೊಂದಿದೆ.
ಫೋಟೋ ಶೇರಿಂಗ್ ಆ್ಯಪ್ ಇನ್ಸ್ಟಾಗ್ರಾಮನ್ನು ಫೇಸ್ಬುಕ್ 2012ರಲ್ಲಿ ಖರೀದಿಸಿದರೆ, ಇನ್ಸ್ಟಾಂಟ್ ಮೆಸೇಜಿಂಗ್ ಆ್ಯಪ್ ವಾಟ್ಸಪನ್ನು 2014ರಲ್ಲಿ ತನ್ನ ಬುಟ್ಟಿಗೆ ಹಾಕಿಕೊಂಡಿದೆ.