ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಗೆ ಭಾರೀ ಹಿನ್ನಡೆ| ಪಕ್ಷದ 687 ಪೇಜ್ ಹಾಗೂ ಖಾತೆಗಳನ್ನು ತೆಗೆದು ಹಾಕಿದ ಫೇಸ್'ಬುಕ್| ನಕಲಿ ಫೇಸ್’ಬುಕ್ ಖಾತೆಗಳ ವಿರುದ್ಧ ಸಮರ ಸಾರಿದ ಫೇಸ್’ಬುಕ್| ಪಾಕಿಸ್ತಾನ ಮೂಲದ 103 ಪೇಜ್ ಹಾಗೂ ಗ್ರೂಪ್’ಗಳೂ ಔಟ್|
ನವದೆಹಲಿ(ಏ.01): ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್’ಗೆ ಭಾರೀ ಹಿನ್ನಡೆಯಾಗಿದ್ದು, ಸಾಮಾಜಿಕ ಜಾಲತಾಣ ದೈತ್ಯ ಫೇಸ್’ಬುಕ್, ಪಕ್ಷದ 687 ಪೇಜ್ ಹಾಗೂ ಖಾತೆಗಳನ್ನು ತೆಗೆದು ಹಾಕಿದೆ.
ಕಾಂಗ್ರೆಸ್’ನ ಐಟಿ ಸೆಲ್’ನೊಂದಿಗೆ ಗುರುತಿಸಿಕೊಂಡಿದ್ದ 687 ಪೇಜ್ ಹಾಗೂ ಖಾತೆಗಳನ್ನು ತೆಗೆದು ಹಾಕಿರುವುದಾಗಿ ಫೇಸ್’ಬುಕ್ ಘೋಷಿಸಿದೆ.
ನಕಲಿ ಫೇಸ್'ಬುಕ್ ಖಾತೆಗಳ ವಿರುದ್ಧ ಈಗಾಗಲೇ ಸಂಸ್ಥೆ ಸಮರ ಸಾರಿದ್ದು, ಇಂತಹ ಹಲವು ಖಾತೆಗಳನ್ನು ಫೇಸ್’ಬುಕ್ ಡಿಲೀಟ್ ಮಾಡುತ್ತಿದೆ. ಕಾಂಗ್ರೆಸ್’ನೊಂದಿಗೆ ಗುರುತಿಸಿಕೊಂಡಿದ್ದ 687 ಖಾತೆಗಳು ಪೇಜ್’ಗಳು ನಕಲಿಯಾಗಿದ್ದರಿಂದ ಅವುಗಳನ್ನು ತೆಗೆದುಹಾಕಲಾಗಿದೆ ಎಂದು ಫೇಸ್’ಬುಕ್ ತಿಳಿಸಿದೆ.
ಇಷ್ಟೇ ಅಲ್ಲದೇ ಪಾಕಿಸ್ತಾನ ಮೂಲದ 103 ಪೇಜ್ ಹಾಗೂ ಗ್ರೂಪ್’ಗಳನ್ನು ಫೇಸ್’ಬುಕ್ ಹಾಗೂ ಇನ್ಸಟಾಗ್ರಾಮ್ ಪೇಜ್’ಗಳನ್ನು ತೆಗೆದುಹಾಕಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಕಾಂಗ್ರೆಸ್, ಪಕ್ಷದ ಯಾವುದೇ ಅಧಿಕೃತ ಅಕೌಂಟ್ ರದ್ದುಗೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.
