ವಿಶ್ವದ ಪ್ರಸಿದ್ಧ ಸಾಮಾಜಿಕ ಜಾಲ ತಾಣವಾಗಿರುವ ಫೇಸ್‌ಬುಕ್‌ನಲ್ಲಿ, 2017ರ ಡಿಸೆಂಬರ್‌ವರೆಗೂ 20 ಕೋಟಿ ನಕಲಿ ಖಾತೆಗಳಿದ್ದು, ಅದರಲ್ಲಿ ಭಾರತೀಯರೇ ಹೆಚ್ಚು ನಕಲಿ ಖಾತೆ ಹೊಂದಿದ್ದಾರೆ ಎಂಬುದಾಗಿ ಫೇಸ್’ಬುಕ್ ತಿಳಿಸಿದೆ.

ಹೈದರಾಬಾದ್: ವಿಶ್ವದ ಪ್ರಸಿದ್ಧ ಸಾಮಾಜಿಕ ಜಾಲ ತಾಣವಾಗಿರುವ ಫೇಸ್‌ಬುಕ್‌ನಲ್ಲಿ, 2017ರ ಡಿಸೆಂಬರ್‌ವರೆಗೂ 20 ಕೋಟಿ ನಕಲಿ ಖಾತೆಗಳಿದ್ದು, ಅದರಲ್ಲಿ ಭಾರತೀಯರೇ ಹೆಚ್ಚು ನಕಲಿ ಖಾತೆ ಹೊಂದಿದ್ದಾರೆ ಎಂಬುದಾಗಿ ಫೇಸ್’ಬುಕ್ ತಿಳಿಸಿದೆ.

2017ರ ಡಿ.31ರ ವೇಳೆಗೆ 213 ಕೋಟಿ ಖಾತೆಗಳನ್ನು ಹೊಂದಿದ ಫೇಸ್‌ಬುಕ್, ಖಾತೆಯನ್ನು ಶೇ.14ರಷ್ಟು ವೃದ್ಧಿಸಿಕೊಂಡಿತ್ತು. ಇದರಲ್ಲಿ ಶೇ.10ರಷ್ಟು ನಕಲಿ ಖಾತೆಗಳಿವೆ ಎಂದು ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಅಭಿವೃದ್ಧಿ ಮಾರುಕಟ್ಟೆ ಹೊಂದಿದ ರಾಷ್ಟ್ರಗಳಿಗಿಂತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಭಾರತ, ಇಂಡೋನೇಷ್ಯಾ, ಪಿಲಿಫ್ಪೀನ್ಸ್‌ನಲ್ಲೇ ಹೆಚ್ಚು ನಕಲಿ ಖಾತೆಗಳಿವೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.