ಬುಧವಾರ ಸಂಜೆ ಇದ್ದಕ್ಕಿದ್ದಂತೆ ಸೋಶಿಯಲ್ ಮೀಡಿಯಾಗಳು ಮಾತು ನಿಲ್ಲಿಸಿದ್ದವು. ಫೇಸ್ ಬುಕ್ ಒಡೆತನದಲ್ಲೇ ಇರುವ ಫೇಸ್ ಬುಕ್, ವಾಟ್ಸಪ್ ಮತ್ತು ಇಸ್ಟಾಗ್ರ್ಯಾಮ್ ನಲ್ಲಿ ಡೌನ್ ಲೋಡ್ ಮತ್ತು ಅಪ್ ಲೋಡ್ ಸಮಸ್ಯೆ ಕಾಣಿಸಿಕೊಂಡಿತು.

ಬೆಂಗಳೂರು[ಜು. 03] ವಾಟ್ಸಪ್ ನಲ್ಲಿ ಸ್ನೇಹಿತರು ಅಪ್ ಲೋಡ್ ಮಾಡಿದ ಸ್ಟೇಟಸ್ ನೋಡಲು ಸಾಧ್ಯವಾಗುತ್ತಿಲ್ಲ. ಫೇಸ್ ಬುಕ್ ನಲ್ಲಿ ಹೊಸ ಪೋಟೋ ಅಪ್ ಲೋಡ್ ಆಗುತ್ತಿಲ್ಲ.. ಇನ್ನು ಇಸ್ಟಾಗ್ರ್ಯಾಮ್ ನಲ್ಲಿ ರೌಂಡ್ ಹಾಕೋಣ ಅಂದರೂ ಸಾಧ್ಯವಾಗುತ್ತಿಲ್ಲ.. ಗೊಣಕಿಕೊಳ್ಳುವುದೊಂದೇ ಉಪಾಯ ಎಂದುಕೊಂಡಿದ್ದವರಿಗೆ ಟ್ವಿಟರ್ ಗೆ ಬಂದಾಗ ಉತ್ತರ ಸಿಕ್ಕಿದೆ.

ಇನ್ಮುಂದೆ 2 ಫೋನ್‌ಗಳಿಗೆ WhatsApp ಸಪೋರ್ಟ್ ಇಲ್ಲ! ನಿಮ್ದು ಯಾವುದು?

ವಿಶ್ವಾದ್ಯಂತ ವಾಟ್ಸ್ಯಾಪ್, ಇನ್ ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಸೇವೆಗಳು 'ಡೌನ್' ಆಗಿದ್ದು, ಬಳಕೆದಾರರು ಆಕ್ರೋಶ ಹೊರ ಹಾಕಿದರು. ಯುರೋಪ್, ಅಮೆರಿಕ, ಆಫ್ರಿಕ, ಭಾರತ ಸೇರಿದಂತೆ ವಿಶ್ವದ ಹಲವೆಡೆ ಒಂದೇ ಸಾರಿಗೆ ಸಮಸ್ಯೆ ಎದುರಾಯಿತು.

ಇದೇ ಕಾರಣಕ್ಕೆ ಟ್ವಿಟರ್ ನಲ್ಲಿ #InstagramDown, #FacebookDown and #WhatsAppDown ಟ್ರೆಂಡ್ ಆಯಿತು. ಫೇಸ್ ಬುಕ್ ನ ಸರ್ವರ್ ದೋಷ ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಈ ಹಿಂದೆಯೂ ಹಲವು ಬಾರಿ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಕೆಲವೇ ಗಂಟೆಗಳಲ್ಲಿ ಸರಿಹೋಗುವ ಆಶಾವಾದ ಬಳಕೆದಾರರದ್ದು... ಅಲ್ಲಿ ತನಕ ಕೈ ಮೈ ಹಿಸುಕಿಕೊಳ್ಳೊದೊಂದೇ ಉಪಾಯ!

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…