ಬೆಂಗಳೂರು (ಫೆ.04): ಶೆರಿಲ್ ಸ್ಯಾಂಡ್ಬರ್ಗ್ ಪರಿಚಯ ಎಷ್ಟು ಮಂದಿಗಿದೆ ಗೊತ್ತಿಲ್ಲ. ಆದರೆ ಜಾಗತಿಕ ಕಾರ್ಪೊರೇಟ್ ವಲಯದಲ್ಲಿ ಶೆರಿಲ್ ಹೆಸರು ತಿಳಿಯದವರು ಕಡಿಮೆ. 

ಫೇಸ್ಬುಕ್‌ ಸಿಒಒ ಆಗಿರುವ ಶೆರಿಲ್  ಈಗ ಮತ್ತೆ ಸುದ್ದಿಯಲ್ಲಿದ್ದಾರೆ.   ಫೇಸ್ಬುಕ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಫೇಮಸ್ ಆಗಿದ್ದಾರೆ ಅಂತಾ ಭಾವಿಸ್ಬೇಡಿ. 

ಇದನ್ನೂ ಓದಿ | ನಿಮ್ಮ ಪ್ರತೀ ಹೆಜ್ಜೆ ಮೇಲೆ ಫೇಸ್ಬುಕ್‌ ಕಣ್ಗಾವಲು!...

ಶೆರಿಲ್ ಫೇಸ್ಬುಕ್ ಸೇರೋ ಮುನ್ನ ಅಮೆರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ಜೊತೆ ವೈಟ್‌ ಹೌಸ್‌ನಲ್ಲಿ  ಕೆಲಸ ಮಾಡಿದವರು. ಅಮೆರಿಕಾದ NBC ಟೀವಿಯಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನು ಕಟ್ಟಿಕೊಟ್ಟವರು ಶೆರಿಲ್. ಅಷ್ಟೇ ಅಲ್ಲ, ಹಲವು ಜನಪ್ರಿಯ ಕೃತಿಗಳನ್ನು ಕೂಡಾ ಅವರು ರಚಿಸಿದ್ದಾರೆ.

50 ವರ್ಷ ವಯಸ್ಸಿನ ಶೆರಿಲ್ ಮತ್ತು ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ಬರ್ಗ್ ಬಹುಕಾಲದ ಗೆಳೆಯರು ಕೂಡಾ. ಈಗ ಶೆರಿಲ್  ತಾನು ಎಂಗೇಜ್ ಆಗಿರೋದಾಗಿ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಘೋಷಿಸಿದ್ದಾರೆ. 

ಇದನ್ನೂ ಓದಿ | ವಾಟ್ಸಪ್‌ ಹೊಸ ಮೈಲಿಗಲ್ಲು; ಆ್ಯಪ್‌ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರಗಳು...

ಕೆಲ್ಟಾನ್ ಗ್ಲೋಬಲ್ ಕಂಪನಿಯ ಸಹ-ಸಂಸ್ಥಾಪಕ, ಸಿಇಓ ಆಗಿರುವ 46 ವರ್ಷ ವಯಸ್ಸಿನ ಟಾಮ್ ಬೆರೆಂತಾಲ್ ಜೊತೆ ಶೆರಿಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸರ್ವೆ ಮಂಕಿ ಕಂಪನಿಯ ಮುಖ್ಯಸ್ಥರಾಗಿದ್ದ ಶೆರಿಲ್ ಪತಿ 2015ರಲ್ಲಿ ಅಪಘಾತವೊಂದರಲ್ಲಿ ಕೊನೆಯುಸಿರೆಳೆದಿದ್ದರು.

ನಿಶ್ಚಿತಾರ್ಥಕ್ಕೆ  ಶುಭಕೋರಿದವರ ಪೈಕಿ ಮಾರ್ಕ್ ಝುಕರ್ಬರ್ಗ್ ಕೂಡಾ ಒಬ್ಬರು.  ಕಂಗ್ರಾಟ್ಸ್, ನೀವಿಬ್ಬರು ಹೇಳಿ ಮಾಡಿಸಿದ ಜೋಡಿ.  ಬಹಳ ಖುಷಿಯಾಯ್ತು, ಎಂದು ಝುಕರ್ಬರ್ಗ್ ಪ್ರತಿಕ್ರಿಸಿದ್ದಾರೆ.