ನವದೆಹಲಿ (ಸೆ.  03)  ವಿವಾದಾತ್ಮಕ ಭಾಷಣ ಮಾಡಿದರೆ, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.

ತೆಲಂಗಾಣದ  ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಅವರ ಫೇಸ್'ಬುಕ್ ಹಾಗೂ ಇಸ್ಟಾಗ್ರಾಂ ಖಾತೆಗಳನ್ನು ನಿಷೇಧಿಸಲಾಗಿದೆ. ಫೇಸ್‌ಬುಕ್‌ನ  ನೀತಿ ಉಲ್ಲಂಘಿಸಿದ್ದಕ್ಕೆ ರಾಜಾ ಅವರನ್ನು ಸೋಶಿಯಲ್ ಮೀಡಿಯಾದಿಂದ ಹೊರಕ್ಕೆ ಹಾಕಲಾಗಿದೆ.

ಹಿಂಸಾಚಾರ ಮತ್ತು ದ್ವೇಷ ಪ್ರಚೋದನೆ ಮಾಡಬಾರದು ಎಂಬ ನಮ್ಮ ನೀತಿಯನ್ನು ರಾಜಾ ಉಲ್ಲಂಘನೆ ಮಾಡಿದ್ದಾರೆ.   ನೀತಿಯ ಉಲ್ಲಂಘನೆ ಮಾಡುವವರ ಮೇಲೆ ನಾವು ತೀವ್ರವಾಗಿ ನಿಗಾ ಇಡುವ ವ್ಯವಸ್ಥೆ ಹೊಂದಿದ್ದು ಎಲ್ಲದರ ಮೇಲೆಯೂ ಕಣ್ಣು ಇಟ್ಟಿದ್ದೇವೆ ಎಂದು ಫೇಸ್ ಬುಕ್ ತಿಳಿಸಿದೆ.

ಬಿಜೆಪಿ ಸೂಚಿಸಿದ್ದ ಪೇಜ್ ಗಳನ್ನು ಡಿಲೀಟ್ ಮಾಡಿತ್ತೆ ಫೇಸ್ ಬುಕ್?

ನನ್ನ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು  2018 ರಲ್ಲಿ ಸಿಂಗ್ ಹೇಳಿಕೊಂಡಿದ್ದರು. ಆ ವೇಳೆ ರೋಹಿಂಗ್ಯಾಗಳಿಗೆ ಸಂಬಂಧಿಸಿ ವಿವಾದಾತ್ಮಕ ಕಮೆಂಟ್ ಮಾಡಿದ್ದರು.
ಫೇಸ್ ಬುಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವರೊಬ್ಬರು ಬಿಜೆಪಿ ಸರ್ಕಾರದ ಪರ ಕೆಲಸ ಮಾಡುತ್ತಿದ್ದಾರೆ ಎಂದು ವಿಪಕ್ಷಗಳು ಹಿಂದೆ ಆರೋಪಿಸಿದ್ದವು. 

ರಾಜಾ ಅವರ ಖಾತೆ ಮೇಲಿಂದ ಮೇಲೆ ರಿಪೋರ್ಟ್ ಆದ ಕಾರಣ ಮತ್ತು ಫೇಸ್ ಬುಕ್ ನೀತಿ  ಉಲ್ಲಂಘಟನೆ ಎರಡು ಸೇರಿ ಅವರ ಖಾತೆಗೆ ಮುಕ್ತಿ ಸಿಕ್ಕಿದೆ. ನಾನು 2019 ನ ರಿಂದಲೇ ಸೋಶಿಯಲ್ ಮೀಡಿಯಾದಿಂದ ದೂರ ಇದ್ದು ಖಾತೆ ತೆರೆಯಲು ಅವಕಾಶ ಮಾಡಿಕೊಡಲು ಕೇಳಿದ್ದೇನೆ ಎಂದು ರಾಜಾ ಹೇಳಿದ್ದಾರೆ.