ವಾಷಿಂಗ್ಟನ್: ವಿಶ್ವದಲ್ಲೇ ಅತಿಹೆಚ್ಚು ಭದ್ರತಾ ಫೀಚರ್ ಹೊಂದಿರುವ ಆ್ಯಪಲ್ ಐಫೋನ್‌ಗಳ ಬದಲಿಗೆ ಫೇಸ್ ಬುಕ್ ಸಂಸ್ಥೆಯ ಬಹುತೇಕ ನೌಕರರು ಆಂಡ್ರಾಯಿಡ್ ಸ್ಮಾರ್ಟ್‌ಫೋನ್‌ಗಳನ್ನೇ ಬಳಸುತ್ತಾರೆ ಎಂಬ ವಿಚಾರ ಇದೀಗ ತಿಳಿದುಬಂದಿದೆ. ಹಾಗಂತ ಐಫೋನ್‌ಗಳಲ್ಲಿ
ಏನೋ ನ್ಯೂನತೆ ಇದೆ ಎಂಬುದು ಇದಕ್ಕೆ ಕಾರಣವಲ್ಲ. 

ಫೇಸ್‌ಬುಕ್‌ನ ಯಾವುದೇ ನೌಕರರು ಆ್ಯಪಲ್ ಐಫೋನ್ ಗಳನ್ನು ಬಳಕೆ ಮಾಡದಂತೆ ಫೇಸ್‌ಬುಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಮಾರ್ಕ್ ಜುಕರ್ ಬರ್ಗ್ ಫರ್ಮಾನು ಹೊರಡಿಸಿದ್ದಾರೆ ಎಂದು ವರದಿ ಯಾಗಿದೆ.ಇದಕ್ಕೆ ಕಾರಣ ತಿಳಿದುಬಂದಿಲ್ಲ. ಜುಕರ್ ಬರ್ಗ್ ಅವರು ಹೊರಡಿಸಿದ್ದಾರೆ ಎನ್ನಲಾದ ಈ ಆದೇಶಕ್ಕೆ ಆ್ಯಪಲ್ ಸಿಇಒ ಟಿಮ್ ಕುಕ್ ಅವರು ಅಸಮಾಧಾನ ವ್ಯಕ್ತಪಡಿಸಿ ದ್ದಾರೆ. 

ಅಲ್ಲದೆ, ಫೇಸ್‌ಬುಕ್ ಬಳಕೆದಾರರಿಗೆ ತಿಳಿಯದಂತೆ ಅವರ ವೈಯಕ್ತಿಕ ಮಾಹಿತಿ ಪಡೆದು, ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡ ಕೇಂಬ್ರಿಜ್ ಅನಾಲಿಟಿಕಾ ಹಗರಣ ಬಗ್ಗೆ ಉಲ್ಲೇಖಿಸಿ, ಫೇಸ್‌ಬುಕ್ ಸಂಸ್ಥೆಯನ್ನು ಕುಕ್ ತರಾಟೆಗೆ ತೆಗೆದುಕೊಂಡಿದ್ದಾರೆ.