ತಲೆ ಚಚ್ಕೋಳಿ ಗೋಡೆಗೆ: ಒಂದಲ್ಲ ಮೂರು ಚಂದ್ರ ಭೂಮಿಗೆ!
ಖಗೋಳ ವಿಜ್ಞಾನಿಗಳಿಂದ ಜಗತ್ತೇ ಬೆಚ್ಚಿ ಬೀಳುವಂತ ಆವಿಷ್ಕಾರ! ಭೂಮಿಗೆ ಒಂದಲ್ಲ ಮತ್ತೆರಡು ಕೃತಕ ಉಪಗ್ರಹ ಇದೆ ಎಂದ ವಿಜ್ಞಾನಿಗಳು! ಇನ್ನೂ ಎರಡು ಚಂದ್ರಗಳ ಇರುವಿಕೆ ಖಚಿತಪಡಿಸಿದ ಹಂಗೇರಿಯಾ ವಿಜ್ಞಾನಿಗಳು! ಧೂಳಿನ ಕಣಗಳಿಂದ ರಚಿತವಾದ ಎರಡು ಬೃಹತ್ ಚಂದ್ರಗಳ ಅನ್ವೇಷಣೆ
ವಾಷಿಂಗ್ಟನ್(ನ.10): ಈ ಸುದ್ದಿ ಎಲ್ಲಕ್ಕಿಂತ ಮೊದಲು ಪುಟ್ಟ ಕಂದಮ್ಮಗಳ ತಾಯಂದಿರು ಓದೋದು ಒಳಿತು. ಊಟ ಮಾಡಲು ಹಠ ಮಾಡೋ ನಿಮ್ಮ ಕಂದನಿಗೆ ಚಂದಮಾಮ ತೋರಿಸಿ ಪುಸಲಾಯಿಸುವ ತಾಯಂದಿರೇ ಭೂಮಿಗೆ ಒಂದೇ ಚಂದಿರ ಅಲ್ಲ ಇನ್ನೂ ಎರಡು ಚಂದಿರ ಇವೆ ಅನ್ನೋದು ತಿಳಿದಿರಲಿ.
ಹೌದು, ಇಷ್ಟು ದಿನ ವಿಜ್ಞಾನ ಜಗತ್ತು, ಸಾಹಿತ್ಯ ಜಗತ್ತು ಭೂಮಿಗೆ ಒಂದೇ ಒಂದು ನೈಸರ್ಗಿಕ ಚಂದ್ರ ಇದೆ ಅಂತಲೇ ತಿಳಿದಿತ್ತು. ಇದೇ ಕಾರಣಕ್ಕೆ ಚಂದ್ರನಲ್ಲಿ ಪಾದವೂರುವ ಕನಸನ್ನು ವಿಜ್ಞಾನ ಜಗತ್ತು ಕಂಡಿದ್ದರೆ, ಪ್ರೇಮಿಗಳಿಗೆ ಗೆಳೆಯನಾಗಿ, ಮಕ್ಕಳಿಗೆ ಚಂದಮಾಮನಾಗಿ ಸಾಹಿತ್ಯ ಜಗತ್ತು ಈತನನ್ನು ಆರಾಧಿಸಿತ್ತು.
ಹಂಗೇರಿಯಾದ ಖಗೋಳ ವಿಜ್ಞಾನಿಗಳು ಈ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ್ದು, ಭೂಮಿಯ ಇನ್ನೇರಡು ಚಂದ್ರಗಳ ಕುರಿತು ಸಾಕ್ಷ್ಯ ದೊರೆತಿದೆ ಎಂದು ತಿಳಿಸಿದ್ದಾರೆ. ಭೂಮಿಗೆ ಇನ್ನೇರಡು ಚಂದ್ರಗಳಿದ್ದು, ಪಸ್ತುತ ಇರುವ ಚಂದ್ರನಷ್ಟೇ ದೂರದಲ್ಲಿ ಭೂಮಿಯನ್ನು ಸುತ್ತುತ್ತಿವೆ ಎಂದು ನ್ಯಾಶನಲ್ ಜಿಯೋಗ್ರಾಫಿಕ್ ವರದಿ ಸ್ಪಷ್ಟಪಡಿಸಿದೆ.
ಆದರೆ ಈ ಚಂದ್ರ ಗಟ್ಟಿ ನೆಲದಿಂದ ಕೂಡಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದು, ಧೂಳಿನ ಕಣಗಳಿಂದ ಕೂಡಿರುವ ಉಪಗ್ರಹಗಳು ಇವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಭೂಮಿಗೆ ಇನ್ನೂ ಎರಡು ಉಪಗ್ರಹಗಳ ಕುರಿತು ಕಳೆದ 5 ದಶಕಗಳಿಂದಲೂ ವಿಜ್ಞಾನ ಜಗತ್ತಿನಲ್ಲಿ ಚರ್ಚೆ ನಡೆಯುತ್ತಿದ್ದು, ಇದೀಗ ಇದು ಪಕ್ಕಾ ಆಗಿದೆ.
1961 ರಲ್ಲಿ ಪಾಲಿಶ್ ಖಗೋಳಶಾಸ್ತ್ರಜ್ಞ ಕಜಿಮೈರಜ್ ಕಾರ್ಡಿಲ್ವಿಸ್ಕಿ ಈ ಧೂಳಿನ ಕಣಗಳ ಪಟ್ಟಿಯನ್ನು ಪತ್ತೆ ಮಾಡಿದ್ದರು. ಇದೇ ಕಾರಣಕ್ಕೆ ಈ ಚಂದ್ರಗಳಿಗೆ ಧೂಳಿನ ಚಂದ್ರ ಅಥವಾ ಕಾರ್ಡಿಲ್ವಿಸ್ಕಿ ಕ್ಲೌಡ್ಸ್ ಎಂದು ಹೆಸರಿಡಲಾಗಿದೆ.
ಕಾರ್ಡಿಲ್ವಿಸ್ಕಿ ಮೋಡಗಳು 15 ರಿಂದ 10 ಡಿಗ್ರಿ ಅಗಲವಾಗಿದ್ದು, ೬೫ ಸಾವಿರ ಮೈಲುಗಳಷ್ಟು ಅಗಲವಾಗಿವೆ ಎಂದು ಹೇಳಲಾಗಿದೆ. ಈ ಎರಡೂ ಚಂದ್ರಗಳು ಧೂಳಿನ ಕಣಗಳಿಂದ ನಿರ್ಮಿತವಾಗಿದ್ದು, ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನಿಗಿಮತ ಗಾತ್ರದಲ್ಲಿ ದೊಡ್ಡದಿದೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.